ಕರ್ನಾಟಕ

karnataka

ETV Bharat / business

ಚೀನಾ ಆರ್ಥಿಕತೆ ಗೊಟಕ್.. ಚೀನೀಯರ ಮನಗೆಲ್ಲಲು ಹುಲಿ ಬಾಲ ಜಗ್ಗುತ್ತಿರುವ ಜಿನ್​​ಪಿಂಗ್!!

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ಎರಡು ದೇಶಗಳಾದ ಪ್ರಜಾಸತ್ತಾತ್ಮಕ ಭಾರತ ಮತ್ತು ಕಮ್ಯುನಿಸ್ಟ್‌ ಚೀನಾ ನಡುವೆ ಸುಮಧುರ ಸಂಬಂಧ ಎಂದೂ ಇರಲಿಲ್ಲ. 1962ರ ಯುದ್ಧ ಮತ್ತು 1967ರ ಸಂಘರ್ಷ ಬಿಟ್ಟರೆ ಎರಡೂ ದೇಶಗಳ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯೂ ಇರಲಿಲ್ಲ. ದೊಖ್ಲಾಮ್​ ಬಳಿಕ ಮತ್ತೆ ಗಂಭೀರ ಸ್ವರೂಪದಲ್ಲಿ ಗಡಿ ವಿವಾದ ಮುಂಚೂಣಿಗೆ ಬಂದಿದೆ. ಇದೆಲ್ಲವೂ ಚೀನಾದ ರಾಜಕೀಯ ಒಳತಂತ್ರ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.

China Economy
ಚೀನಾ

By

Published : Jun 17, 2020, 10:06 PM IST

ನವದೆಹಲಿ :ಚೀನಾ ಪವಾಡದ ಮುಖ ಈಗ ಜಗತ್ತಿನ ಮುಂದೆ ತೆರೆದುಕೊಂಡಿದೆ. ಈವರೆಗೂ ಮಿಲಿಟರಿ​ ಶಕ್ತಿ ಮತ್ತು ಆಕ್ರಮಣ ನೀತಿಯ ಪವಾಡವನ್ನೇ ನೆಚ್ಚಿಕೊಂಡು ಬಂದಿದ್ದ ಚೀನಾ ಶಕ್ತಿ ಈಗ ಕಳೆಗುಂದಿದೆ.

ತನ್ನ 70ನೇ ವರ್ಷಾಚರಣೆ ವೇಳೆ ಮಿಲಿಟರಿ ಸಾಮರ್ಥ್ಯ ಪ್ರದರ್ಶಿಸಿ ಸೂಪರ್ ಫವರ್​ಫುಲ್​ ರಾಷ್ಟ್ರವೆಂಬ ಹವಣಿಕೆಯಲ್ಲಿದ್ದ ಡ್ರ್ಯಾಗನ್​ಗೆ ಸಣ್ಣ ವೈರಸೊಂದು ಅದರ ಖ್ಯಾತಿಯ ಸೋಪಾವನ್ನು ಮಣ್ಣು ಮಾಡಿದೆ. ತನ್ನ ದೇಶದ ನಾಗರಿಕರ ಗಮನ ಬೇರೆಡೆ ಸೆಳೆಯಲು ಚೀನಾ, ಭಾರತದ ಲಡಾಖ್​ ಪ್ರದೇಶದ ಗಡಿಯಲ್ಲಿ ಉದ್ಧಟತನ ಪ್ರದರ್ಶಿಸುತ್ತಿದೆ. ಲಡಾಖ್​ನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತದ ವಿರುದ್ಧ ಮಿಲಿಟರಿ ಆಕ್ರಮಣವನ್ನು ಹೆಚ್ಚಿಸಿದ್ರೂ ಚೀನಾದ ಗಡಿಯೊಳಗೆ ಯಾವುದೂ ಸರಿಯಿಲ್ಲ. ನಿರುದ್ಯೋಗದ ಉಲ್ಬಣ ಮತ್ತು ತೀವ್ರ ಆರ್ಥಿಕ ಹಿಂಜರಿತಕ್ಕೆ ಅದು ಒಳಗಾಗಿದೆ.

ದೇಶದಲ್ಲಿ ಹೆಚ್ಚು ಪ್ರಚೋದಿತವಾದ ಸಾಲದ ಪ್ರಮಾಣವು ತನ್ನ ರಾಜತಾಂತ್ರಿಕ ನಿಲುವನ್ನು ಹಿಮ್ಮೆಟ್ಟಿಸುವ ಸಾಧ್ಯತೆ ಇದೆ. ಇದು ಅನೇಕ ಚೀನೀಯರಲ್ಲಿ ಅನಿಶ್ಚಿತತೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ವೈರಸ್ ಹಬ್ಬುವಿಕೆಯಲ್ಲಿ ವಿಶ್ವ ಸಮುದಾಯ ಬೀಜಿಂಗ್‌ನ ಪ್ರಶ್ನಿಸದೆ ಇರಬಹುದು. ಆದರೆ, ಸ್ಥಳೀಯರಲ್ಲಿ ಚೀನಾ ವಿರೋಧಿ ಭಾವನೆಗಳು ಮಡ್ಡುಗಟ್ಟಿದೆ. ಈಗ ಚೀನಾದಲ್ಲಿ ವೈರಸ್​ನ 2ನೇ ಅಲೆ ಏಳುತ್ತಿದೆ. ಇದು ಮತ್ತೊಂದು ವಿಪತ್ತಿಗೆ ಚೀನಾ ಸಜ್ಜಾಗುವಂತೆ ಆಹ್ವಾನಿಸುತ್ತಿದೆ.

ಕಮ್ಯುನಿಸ್ಟ್ ಚೀನಾದ ಸ್ಥಾಪಕ ಮಾವೊ ಝಿಡಾಂಗ್ ಬಳಿಕ ಬಲಿಷ್ಠ ನಾಯಕನಾಗಿ ಹೊರಹೊಮ್ಮಿದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಕಳೆದ ಕೆಲವು ತಿಂಗಳಲ್ಲಿ ಅವರ ಜನಪ್ರಿಯತೆ ಗಮನಾರ್ಹವಾಗಿ ಕುಗ್ಗಿದೆ. ತವರು ರಾಷ್ಟ್ರದಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಭಾರತದ ಗಡಿಯಲ್ಲಿನ ಪ್ರಸ್ತುತ ಮಿಲಿಟರಿ ಆಕ್ರಮಣವು ಚೀನೀಯರ ಗಮನ ಬೇರೆಡೆಗೆ ಸೆಳೆಯುವ ಹಾಗೂ ಅವರನ್ನು ರಾಜಕೀಯ ನಿಲುವಿನಿಂದ ದೂರವಿಡುವ ಒಂದು ಹೆಜ್ಜೆಯಾಗಿರಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಕೊರೊನಾದಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗಳ ಉತ್ಪಾದನೆಯಂತಹ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಂಡಿವೆ. ಪ್ರಪಂಚದಾದ್ಯಂತ ರಫ್ತು ಆರ್ಡರ್​ಗಳು ಕ್ಷೀಣಿಸುತ್ತಿರುವುದರಿಂದ ಚೀನಾದ ದುಃಖ ಮುಗಿಲು ಮುಟ್ಟಿದೆ. ಚೇತರಿಕೆಯ ಹಾದಿಯಲ್ಲಿದ ಕಮ್ಯೂನಿಷ್ಟ್​ ರಾಷ್ಟ್ರಕ್ಕೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಚೀನಾ ಕೆಲ ದಶಕಗಳಿಂದ ವಿಶ್ವದ ಅತಿದೊಡ್ಡ ಸರಕು ಪೂರೈಕೆದಾರ ರಾಷ್ಟ್ರವಾಗಿದೆ. ಈಗ ಆ ಪಟ್ಟ ನಿಧಾನಕ್ಕೆ ಜಾರುತ್ತಿದೆ. ದೇಶದ ನಾಗರಿಕರನ್ನು ಗಂಭೀರ ಸಮಸ್ಯೆಗಳಿಂದ ವಿಚಲಿತರಾಗುವುದನ್ನು ಖಚಿತಪಡಿಸಿಕೊಳ್ಳಲು ಚೀನಾ ಇಂತಹ ಕೃತ್ಯಕ್ಕೆ ಕೈಹಾಕಿರಬಹುದು ಎಂದು ವಿಶ್ಲೇಷಕರೊಬ್ಬರು ಹೇಳಿದರು.

ಚೀನಾ ತನ್ನದೇ ಆದ ಸಾಲದ ರಾಜತಾಂತ್ರಿಕತೆಯಲ್ಲಿ ಸಿಲುಕಿಕೊಂಡಿರಬಹುದು. ಅನೇಕ ದೇಶಗಳು ಮರುಪಾವತಿಯಲ್ಲಿ ಸಾಲ ವಂಚನೆ ಮಾಡಿರಬಹುದು. ಇದು ಮತ್ತಷ್ಟು ಆರ್ಥಿಕ ಅಡೆತಡೆಗಳಿಗೆ ಕಾರಣವಾಗುತ್ತದೆ ಎಂಬುದು ಕೆಲವರ ವಿಶ್ಲೇಷಣೆ. ಮೇ 15ರಂದು ಚೀನಾದ ರಾಷ್ಟ್ರೀಯ ಬ್ಯೂರೋ ಬಿಡುಗಡೆ ಮಾಡಿದ ಅಧಿಕೃತ ಉದ್ಯೋಗ ಅಂಕಿ-ಅಂಶಗಳ ಪ್ರಕಾರ ಏಪ್ರಿಲ್​ನಲ್ಲಿ ನಿರುದ್ಯೋಗ ದರ ಶೇ.6ಕ್ಕೆ ತಲುಪಿದೆ. ಇದು ಮಾರ್ಚ್​ನಲ್ಲಿ ಶೇ 5.9ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಫೆಬ್ರವರಿಯಲ್ಲಿ ದಾಖಲೆಯ 6.2 ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಅನೇಕ ತಜ್ಞರು ಅದು ಸಂಪೂರ್ಣ ಅಂದಾಜು ಎಂದು ಭಾವಿಸಿದ್ದಾರೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಸೊಸೈಟಿ ಜೆನರಲ್​​ನ ವಿಶ್ಲೇಷಕರು ನಿರುದ್ಯೋಗ ದರವನ್ನು ಶೇ.10ರ ಹತ್ತಿರದಲ್ಲಿದೆ ಎಂಬ ಸ್ಫಟಿಕ ವರದಿಯೊಂದು ಬಹಿರಂಗಪಡಿಸಿದೆ.

ಪಾಕಿಸ್ತಾನ, ಕಿರ್ಗಿಸ್ತಾನ್, ಶ್ರೀಲಂಕಾ ಸೇರಿ ಹಲವು ಆಫ್ರಿಕನ್ ರಾಷ್ಟ್ರಗಳಿಗೆ ಚೀನಾ ಸಾಲ ನೀಡಿದೆ. ಸಾಲದ ಮರು ಪಾವತಿಗೆ ವಿಳಂಬವಾಗುತ್ತಿದೆ. ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟದ ಮಧ್ಯೆ ಆ ರಾಷ್ಟ್ರಗಳು ಸಾಲ ಮರುಪಾವಿತಿಸಲು ತೀವ್ರ ಹಿನ್ನಡೆ ಆಗಲಿದೆ. ವೈರಸ್ ಹರಡುವಿಕೆಯ ಮಧ್ಯೆ ಅನೇಕ ಜಾಗತಿಕ ಕಂಪನಿಗಳು ಈಗಾಗಲೇ ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದ ಹೊರಗೆ ಸ್ಥಳಾಂತರಿಸುವ ಆಸಕ್ತಿ ಹೊಂದಿವೆ. ಕೆಂಪು ರಾಷ್ಟ್ರದಲ್ಲಿನ ನಿರುದ್ಯೋಗ ಹೆಚ್ಚಳವು ಸಾಮಾಜಿಕ ಅಶಾಂತಿಗೆ ಕಾರಣ ಆಗಬಹುದು ಎಂದು ಹಲವರು ಭಯಪಡುತ್ತಾರೆ.

ಚೀನಾದ ಹಳೆಯ ರಾಜಕೀಯ ನೀತಿಗಳು :ಚೀನಾದ ದೇಶ ಮತ್ತು ವಿದೇಶಾಂಗ ನೀತಿಗಳ ಮೇಲೆ 1962ರ ಯುದ್ಧ ಪರಿಣಾಮ ಬೀರಿತ್ತು. ಸುತ್ತಲಿನ ರಾಷ್ಟ್ರಗಳ ಮೇಲೆ ಯುದ್ಧದಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿತು. ಈ ಸತ್ಯವನ್ನು ಮರೆ ಮಾಚಲು ಚೀನಾ ರಾಜಕೀಯವಾಗಿ ಪ್ರಯತ್ನಿಸಿತ್ತು. 1962ರ ಯುದ್ಧದ ಬಳಿಕ ಮಾವೋ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆದುರುಳಿಸಿದರು. ಆ ಯುದ್ಧ ಪರಿಣಾಮವಾಗಿ ಅವರ ರಾಜಕೀಯ ಗುರಿಗಳು ಈಡೇರಿದವು.

ಭಾರತದೊಂದಿಗೆ ಗಡಿಯಲ್ಲಿ ಪ್ರಾದೇಶಿಕ/ಭೌಗೋಳಿಕ ತಳ್ಳಾಟವನ್ನು ಅಂದು ನಿಲ್ಲಿಸಿತು. ತನ್ನ ದೇಶದೊಳಗೆ ಉಂಟಾಗಿದ್ದ ರಾಜಕೀಯ ಗಂಡಾಂತರಕಾರಿ ಪರಿಸ್ಥಿತಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯಶಸ್ವಿಯಾದರು. ಅಂದಿನ ನೆಹರೂ ಅವರ ದೇಶಿ ಮತ್ತು ವಿದೇಶಿ ನೀತಿಗಳಿಗೆ ಹಾನಿಯುಂಟು ಮಾಡಿತ್ತು. ಕೈಯಿಂದ ಜಾರುತ್ತಿದ್ದ ಕಮ್ಯೂನಿಸ್ಟ್​ ಪಕ್ಷದ ನಿಯಂತ್ರಣವನ್ನು ಪಡೆಯಲು ಅದು ಆರಂಭಿಕ ಹೆಜ್ಜೆಯಾಯಿತು.

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ಎರಡು ದೇಶಗಳಾದ ಪ್ರಜಾಸತ್ತಾತ್ಮಕ ಭಾರತ ಮತ್ತು ಕಮ್ಯುನಿಸ್ಟ್‌ ಚೀನಾ ನಡುವೆ ಸುಮಧುರ ಸಂಬಂಧ ಎಂದೂ ಇರಲಿಲ್ಲ. 1962ರ ಯುದ್ಧ ಮತ್ತು 1967ರ ಸಂಘರ್ಷ ಬಿಟ್ಟರೆ ಎರಡೂ ದೇಶಗಳ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯೂ ಇರಲಿಲ್ಲ. ದೊಖ್ಲಾಮ್​ ಬಳಿಕ ಮತ್ತೆ ಗಂಭೀರ ಸ್ವರೂಪದಲ್ಲಿ ಗಡಿ ವಿವಾದ ಮುಂಚೂಣಿಗೆ ಬಂದಿದೆ. ಇದೆಲ್ಲವೂ ಚೀನಾದ ರಾಜಕೀಯ ಒಳತಂತ್ರ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.

ABOUT THE AUTHOR

...view details