ಕರ್ನಾಟಕ

karnataka

ETV Bharat / business

ಜ.1ರಿಂದ ಶೇ 1ರಷ್ಟು ನಗದು ಜಿಎಸ್​ಟಿ ಪಾವತಿ ಕಡ್ಡಾಯ: ಯಾರಿಗೆಲ್ಲ ಅನ್ವಯ?

ನಕಲಿ ಇನ್‌ವಾಯ್ಸಿಂಗ್ ಮೂಲಕ ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಈ ವಾರದ ಆರಂಭದಲ್ಲಿ ಜಿಎಸ್‌ಟಿ ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ಮಾಸಿಕ 50 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಜಿಎಸ್​ಟಿ ಹೊಣೆಗಾರಿಕೆಯಡಿ ಕನಿಷ್ಠ ಶೇ 1ರಷ್ಟು ನಗದನ್ನು ಕಡ್ಡಾಯವಾಗಿ ಪಾವತಿಸಬೇಕಿದೆ.

GST
ಜಿಎಸ್​ಟಿ

By

Published : Dec 26, 2020, 5:36 PM IST

ನವದೆಹಲಿ: ಜನವರಿ 1ರಿಂದ ಜಾರಿಗೆ ಬರುವಂತೆ ಜಿಎಸ್‌ಟಿ ಹೊಣೆಗಾರಿಕೆಯ ಶೇ 1ರಷ್ಟು ನಗದು ಪಾವತಿಯ ಕಡ್ಡಾಯ ಅವಶ್ಯಕವಾಗಿದ್ದು, ಸುಮಾರು 45,000 ತೆರಿಗೆದಾರರಿಗೆ ಅನ್ವಯವಾಗಲಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಶೇ 1ರಷ್ಟು ನಗದು ಪಾವತಿ ಕಡ್ಡಾಯವು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ನೋಂದಾಯಿತವಾದ ಒಟ್ಟು ವ್ಯವಹಾರಗಳಲ್ಲಿ ಕೇವಲ ಶೇ 0.37ರಷ್ಟು ಮಾತ್ರವಾಗಿದೆ.

ನಕಲಿ ಇನ್‌ವಾಯ್ಸಿಂಗ್ ಮೂಲಕ ತೆರಿಗೆ ವಂಚನೆ ತಡೆಯು ಉದ್ದೇಶದಿಂದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಈ ವಾರದ ಆರಂಭದಲ್ಲಿ ಜಿಎಸ್‌ಟಿ ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ಮಾಸಿಕ 50 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಜಿಎಸ್​ಟಿ ಹೊಣೆಗಾರಿಕೆಯಡಿ ಕನಿಷ್ಠ ಶೇ 1ರಷ್ಟು ನಗದನ್ನು ಕಡ್ಡಾಯವಾಗಿ ಪಾವತಿಸಬೇಕಿದೆ.

ಹೊಸ ನಿಯಮವು 2021ರ ಜನವರಿ 1ರಿಂದ ಜಿಎಸ್​​ಟಿ ಹೊಣೆಗಾರಿಕೆಯನ್ನು 99 ಪ್ರತಿಶತಕ್ಕೆ ಬಿಡುಗಡೆ ಮಾಡಲು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಬಳಕೆಯನ್ನು ನಿರ್ಬಂಧಿಸುತ್ತದೆ.

ಇದನ್ನೂ ಓದಿ: 4,000 ರೂ. ಆ್ಯಪ್​ ಸಾಲಕ್ಕೆ ಪ್ರಾಣ ಕಳ್ಕೊಂಡ ಯುವಕ: ಸಾಲ ಕೊಟ್ಟವರ ಕಾಟ ಕೇಳಿದ್ರೆ ಬೆಚ್ಚಿಬೀಳ್ತಿರಾ!

ವ್ಯವಸ್ಥಾಪಕ ನಿರ್ದೇಶಕರು ಅಥವಾ ಯಾವುದೇ ಪಾಲುದಾರರು 1 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ತೆರಿಗೆ ಪಾವತಿಸದೇ ಇದ್ದಾಗ ಅಥವಾ ನೋಂದಾಯಿತನು ಹಿಂದಿನ ಹಣಕಾಸು ವರ್ಷದಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಮರುಪಾವತಿ ಮೊತ್ತ ಬಳಕೆಯಾಗದ ಕಾರಣದಿಂದ ಸ್ವೀಕರಿಸಿದೇ ಇದ್ದಾಗ ಈ ನಿರ್ಬಂಧ ಅನ್ವಯಿಸುವುದಿಲ್ಲ.

1.2 ಕೋಟಿ ತೆರಿಗೆದಾರರ ಪೈಕಿ ಕೇವಲ 4 ಲಕ್ಷ ತೆರಿಗೆದಾರರು ಮಾತ್ರ ಮಾಸಿಕ ಪೂರೈಕೆ ಮೌಲ್ಯ 50 ಲಕ್ಷ ರೂ.ಗಿಂತ ಅಧಿಕ ಮೊತ್ತ ಹೊಂದಿದ್ದಾರೆ. ಈ 4 ಲಕ್ಷಗಳಲ್ಲಿ ಕೇವಲ 1.5 ಲಕ್ಷ ತೆರಿಗೆದಾರರು ಮಾತ್ರ ತಮ್ಮ ಜಿಎಸ್​ಟಿ ಹೊಣೆಗಾರಿಕೆಯ ಶೇ 1ಕ್ಕಿಂತ ಕಡಿಮೆ ಹಣವನ್ನು ನಗದು ರೂಪದಲ್ಲಿ ಪಾವತಿಸುತ್ತಾರೆ.

ABOUT THE AUTHOR

...view details