ಕರ್ನಾಟಕ

karnataka

By

Published : Aug 22, 2020, 7:10 PM IST

ETV Bharat / business

ವಾಣಿಜ್ಯ​​ ಉದ್ದೇಶಕ್ಕೂ ಆರೋಗ್ಯ ಸೇತು ಆ್ಯಪ್​: ಬಳಕೆದಾರರ ಆರೋಗ್ಯ ಸ್ಥಿತಿ ಬಹಿರಂಗ- ಹೇಗೆ ಗೊತ್ತೇ?

50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು ಭಾರತದಲ್ಲಿ ನೋಂದಾಯಿತ ಸಂಸ್ಥೆಗಳು ಮತ್ತು ವ್ಯಾಪಾರಿ ಯೂನಿಟ್​ಗಳು ಈ ಸೇವೆಯಡಿ ರಿಯಲ್​ ಟೈಮ್​ ಆರೋಗ್ಯ ಸೇತು ಅರ್ಜಿ ಗುಜರಾಯಿಸಿ ಮತ್ತು ತಮ್ಮ ನೌಕರರ ಆರೋಗ್ಯ ಸ್ಥಿತಿ ಪಡೆಯಬಹುದು ಅಥವಾ ಹಂಚಿಕೊಳ್ಳಬಹುದು. ಸಂಸ್ಥೆಗಳು ತಾವು ಒಪ್ಪಿಗೆ ನೀಡಿದ ಇತರ ಆರೋಗ್ಯ ಸೇತು ಬಳಕೆದಾರರೂ ಇದನ್ನು ಬಳಸಬಹುದು. ಸಂಸ್ಥೆಯೊಂದಿಗೆ ಉದ್ಯೋಗಿಯ ಆರೋಗ್ಯ ಸ್ಥಿತಿ ಒದಗಿಸುತ್ತದೆ.

Aarogya setu
ಆರೋಗ್ಯ ಸೇತು

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸರ್ಕಾರಗಳು ಮತ್ತು ಆರೋಗ್ಯ ಅಧಿಕಾರಿಗಳು ಕಾರ್ಯನಿರತವಾಗಿದ್ದು, ಸೋಂಕಿತರ ಕಾಂಟ್ರಾಕ್ಟ್ ಟ್ರ್ಯಾಕಿಂಗ್ ಅಪ್ಲಿಕೇಷನ್‌ಗಳು ಸಹ ನೆರವಿಗೆ ಬರುತ್ತಿವೆ.

ಕೋವಿಡ್​ ಪಾಸಿಟಿವ್​ ಸೋಂಕಿತರ ಪತ್ತೆಹಚ್ಚಲು ಆರೋಗ್ಯ ಸೇತು ಅಪ್ಲಿಕೇಷನ್‌ ಸಾಕಷ್ಟು ಬಾರಿ ಸಹಾಯಕ್ಕೆ ಬಂದಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ವ್ಯವಹಾರ ಮತ್ತು ಆರ್ಥಿಕತೆ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಇದೇ ಆ್ಯಪ್​​ನಲ್ಲಿ 'ಓಪನ್ ಎಪಿಐ ಸೇವೆ' ಪ್ರಾರಂಭಿಸಲಾಗಿದೆ.

ಸರ್ಕಾರದ ಪ್ರಕಟಣೆಯ ಪ್ರಕಾರ, ಓಪನ್ ಎಪಿಐ ಸೇವೆಯು ವ್ಯವಹಾರಿಕ ಸಂಸ್ಥೆಗಳಿಗೆ ಆರೋಗ್ಯ ಸೇತು ಬಳಕೆದಾರರ ಆರೋಗ್ಯ ಸ್ಥಿತಿಗತಿಯ ಪರಿಶೀಲನೆ ಮತ್ತು 'ವರ್ಕ್ ಫ್ರಮ್ ಹೋಮ್' ವೈಶಿಷ್ಟ್ಯಗಳನ್ನು ಸಂಯೋಜಿಸಲು ಅನುವು ಮಾಡಿಕೊಡಲಿದೆ. ಓಪನ್ ಎಪಿಐ ಸೇವೆಯು ಸೋಂಕಿನ ಭಯ ಮತ್ತು ಅಪಾಯಕ್ಕೆ ಪರಿಹರಿವನ್ನು ಸಹ ಒದಗಿಸುತ್ತಿದೆ. ಜನರ ದೈನಂದಿನ ಚಟುವಟಿಕೆ, ಉದ್ಯಮಿಗಳ ವ್ಯವಹಾರಗಳು ಮತ್ತು ಆರ್ಥಿಕತೆಯನ್ನೂ ಸಹಜ ಸ್ಥಿತಿಗೆ ತರಲು ನೆರವಾಗುತ್ತಿದೆ.

50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು ಭಾರತದಲ್ಲಿ ನೋಂದಾಯಿತ ಸಂಸ್ಥೆಗಳು ಮತ್ತು ವ್ಯಾಪಾರಿ ಯೂನಿಟ್​ಗಳು ಈ ಸೇವೆಯಡಿ ರಿಯಲ್​ ಟೈಮ್​ ಆರೋಗ್ಯಾ ಸೇತು ಅರ್ಜಿ ಗುಜರಾಯಿಸಿ ಮತ್ತು ತಮ್ಮ ನೌಕರರ ಆರೋಗ್ಯ ಸ್ಥಿತಿ ಪಡೆಯಬಹುದು ಅಥವಾ ಹಂಚಿಕೊಳ್ಳಬಹುದು. ಸಂಸ್ಥೆಗಳು ತಾವು ಒಪ್ಪಿಗೆ ನೀಡಿದ ಇತರ ಆರೋಗ್ಯ ಸೇತು ಬಳಕೆದಾರರೂ ಇದನ್ನು ಬಳಸಬಹುದು. ಸಂಸ್ಥೆಯೊಂದಿಗೆ ಉದ್ಯೋಗಿಯ ಆರೋಗ್ಯ ಸ್ಥಿತಿ ಒದಗಿಸುತ್ತದೆ. ಬಳಕೆದಾರರ ವೈಯಕ್ತಿಕ ಡೇಟಾದ ಗೌಪ್ಯತೆ ರಕ್ಷಿಸಲು ಓಪನ್ ಎಪಿಐ ಆರೋಗ್ಯ ಸೇತು ಆರೋಗ್ಯದ ಸ್ಥಿತಿ ಮತ್ತು ಬಳಕೆದಾರರ ಹೆಸರನ್ನು ಮಾತ್ರ ಒದಗಿಸುತ್ತದೆ (ಬಳಕೆದಾರರ ಒಪ್ಪಿಗೆಯೊಂದಿಗೆ ಮಾತ್ರ).

ಸಂಸ್ಥೆಯ ನೋಂದಣಿ ಸಂಖ್ಯೆ ಅಥವಾ ಸಂಸ್ಥೆಯ ಪ್ರಸಕ್ತ ವಿವರಗಳು, ಪರವಾಗಿ ನೋಂದಣಿಯ ವ್ಯಕ್ತಿಯ ವಿವರ ಮತ್ತು ಸಂಸ್ಥೆಯು ಓಪನ್ ಎಪಿಐ ಅನ್ನು ಯಾವ ಉದ್ದೇಶಕ್ಕಾಗಿ ಬಳಸುತ್ತದೆ ಎಂಬ ಮಾಹಿತಿ ಸಲ್ಲಿಸಬೇಕಾಗುತ್ತದೆ.

ಆರೋಗ್ಯ ಸ್ಥಿತಿ ಪರಿಶೀಲಿಸಬೇಕಾದ ಒಟ್ಟು ಉದ್ಯೋಗಿಗಳು / ಬಳಕೆದಾರರು / ಗ್ರಾಹಕರ ಹೆಚ್ಚುವರಿ ವಿವರಗಳನ್ನು ಸಹ ಇದು ಒದಗಿಸಬೇಕಾಗುತ್ತದೆ. ದಿನಕ್ಕೆ ನಿರೀಕ್ಷಿತ ಎಪಿಐ ಕೋರಿಕೆ, ಓಪನ್ ಎಪಿಐನೊಂದಿಗೆ ನೋಂದಣಿಗೆ ಬಳಸುವ ಇಮೇಲ್ ಐಡಿ, ಸಂಸ್ಥೆಯ ಅಧಿಕೃತ ವೆಬ್‌ಸೈಟ್ / ಸಂಸ್ಥೆಯ ಲೆಟರ್‌ಹೆಡ್‌ನಲ್ಲಿರುವ ಇತರರ ನಡುವಳಿ, ಸಂಸ್ಥೆಯ ಮುಖ್ಯಸ್ಥರು ಅಥವಾ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಲ್ಪಟ್ಟ ವ್ಯಕ್ತಿ ವಿವರ ನೀಡಬೇಕು.

ABOUT THE AUTHOR

...view details