ಕರ್ನಾಟಕ

karnataka

ETV Bharat / business

ಆನ್​ಲೈನ್​ ಶಿಕ್ಷಣಕ್ಕೆ ಸರ್ಕಾರದ ಬೆಟ್ಟದಷ್ಟು ನಿರೀಕ್ಷೆ... ಶೇ 94% ಬಡ ಮಕ್ಕಳಿಗಿಲ್ಲ ಸ್ಮಾರ್ಟ್​ಫೋನ್​, ಇಂಟರ್​ನೆಟ್​!

ಮಕ್ಕಳ ಹಕ್ಕುಗಳ ಸಂಸ್ಥೆಯಾದ ಸಿಆರ್‌ವೈ ಮೇ-ಜೂನ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ 5,987 ಮಕ್ಕಳು ಒಳಗೊಂಡಿದ್ದರು. ಸಿಆರ್​ವೈ, ಸಮುದಾಯ ಸಂಘಟಕರು ದೂರವಾಣಿ ಸಂದರ್ಶನಗಳ ಮೂಲಕ ಮಾಹಿತಿ ಸಂಗ್ರಹಿಸಿದೆ. 11-18 ವರ್ಷ ವಯಸ್ಸಿನ ಮಕ್ಕಳ ಅಂತರ್ಜಾಲ ಪ್ರವೇಶ ಕುರಿತು ಶೋಧನಾ ಕಾರ್ಯಾಚರಣೆ ಅಧ್ಯಯನ ನಡೆದಿದೆ.

Digital Teaching
ಡಿಜಿಟಲ್ ಶಿಕ್ಷಣ

By

Published : Aug 17, 2020, 8:37 PM IST

ನವದೆಹಲಿ: ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮಕ್ಕಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ 94ರಷ್ಟು ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಾದ ಸ್ಮಾರ್ಟ್‌ಫೋನ್‌ ಅಥವಾ ಇಂಟರ್‌ನೆಟ್‌ನಂತಹ ಸಂಪರ್ಕ ಸಾಧನ ಹೊಂದಿಲ್ಲ ಎಂಬುದು ತಿಳಿದುಬಂದಿದೆ.

ಮಕ್ಕಳ ಹಕ್ಕುಗಳ ಸಂಸ್ಥೆಯಾದ ಸಿಆರ್‌ವೈ ಮೇ-ಜೂನ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ 5,987 ಮಕ್ಕಳು ಒಳಗೊಂಡಿದ್ದರು. ಸಿಆರ್​ವೈ, ಸಮುದಾಯ ಸಂಘಟಕರು ದೂರವಾಣಿ ಸಂದರ್ಶನಗಳ ಮೂಲಕ ಮಾಹಿತಿ ಸಂಗ್ರಹಿಸಿದೆ.

11-18 ವರ್ಷ ವಯಸ್ಸಿನ ಮಕ್ಕಳ ಅಂತರ್ಜಾಲ ಪ್ರವೇಶ ಕುರಿತು ಶೋಧನಾ ಕಾರ್ಯಾಚರಣೆ ಅಧ್ಯಯನದಡಿ ಸಮೀಕ್ಷೆ ನಡೆಸಲಾಯಿತು.

ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳ ಬಾಗಿಲು ಮುಚ್ಚಲಾಗಿದೆ. ಮುಕ್ತ ಓಡಾಟವನ್ನು ನಿರ್ಬಂಧಿಸಲಾಗಿದೆ. ಸಿಆರ್​ವೈ ಆನ್‌ಲೈನ್ ಶಿಕ್ಷಣದ ಸಾಮರ್ಥ್ಯದ ವಾಸ್ತವತೆಯನ್ನು ತಿಳಿಯಲು ಬಯಸಿತ್ತು ಎಂದು ಸಮೀಕ್ಷೆಯ ಉದ್ದೇಶ ಸ್ಪಷ್ಟಪಡಿಸಿತು.

ಕರ್ನಾಟಕದ 1,445 ಪ್ರತಿಸ್ಪಂದಕರಲ್ಲಿ ಒಂಬತ್ತು ಪ್ರತಿಶತದಷ್ಟು ಜನರು ಮಾತ್ರವೇ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ ಎಂದು ಅಧ್ಯಯನವು ಕಂಡುಕೊಂಡಿದೆ. ಆದರೆ ತಮಿಳುನಾಡಿನಲ್ಲಿ ಸಮೀಕ್ಷೆ ನಡೆಸಿದ 1,740 ಮಕ್ಕಳಲ್ಲಿ ಕೇವಲ ಮೂರು ಪ್ರತಿಶತದಷ್ಟು ಮಾತ್ರವೇ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ.

ಶೇ 95ರಷ್ಟು ಕುಟುಂಬಗಳ ವಾರ್ಷಿಕ ಆದಾಯವು ಒಂದು ಲಕ್ಷ ರೂ.ಗಿಂತ ಕಡಿಮೆ ಇದೆ. ಐಷಾರಾಮಿ ಮೊಬೈಲ್​ ಹೊಂದಿರುವ ಕುಟುಂಬಗಳು ಶೇ 2-3ರಷ್ಟು ಜನರು ಮಾತ್ರ ಇದ್ದಾರೆ ಎಂದು ಅಧ್ಯಯನ ಹೇಳಿದೆ.

ನಾಲ್ಕು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ ಮಕ್ಕಳಲ್ಲಿ ಶೇ 94ರಷ್ಟು ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್ ಅಥವಾ ಇಂಟರ್​ನೆಟ್​ ಪ್ರವೇಶ ಪಡೆದಿಲ್ಲ. ಆರು ಪ್ರತಿಶತದಷ್ಟು ಮಕ್ಕಳು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದರೆ, ಶೇ 29ರಷ್ಟು ಜನರು ತಮ್ಮ ಕುಟುಂಬ ಸದಸ್ಯರ ಫೋನ್‌ಗಳ ನೆರವು ಪಡೆಯುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ದಾಖಲಾಗಿದೆ.

ಈ ಮಕ್ಕಳಲ್ಲಿ ಶೇ 55 ರಷ್ಟು ಮಕ್ಕಳು ವಾರದಲ್ಲಿ ಮೂರು ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಮಾತ್ರ ಸ್ಮಾರ್ಟ್‌ಫೋನ್‌ಗಳಿಗೆ ಪ್ರವೇಶ ಪಡೆಯುತ್ತಾರೆ. 77 ಪ್ರತಿಶತದಷ್ಟು ಜನರು ದಿನಕ್ಕೆ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಗೆ ಸ್ಮಾರ್ಟ್‌ಫೋನ್‌ ಬಳಸುತ್ತಾರೆ.

ಸಿಆರ್‌ವೈ ದಕ್ಷಿಣದ ಪ್ರಾದೇಶಿಕ ನಿರ್ದೇಶಕ ಕಾರ್ತಿಕ್ ನಾರಾಯಣನ್ ಮಾತನಾಡಿ, ಸಮಾಜದ ಕೊನೆಯ ಅಂಚಿನಲ್ಲಿರುವ ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚು ದುರ್ಬಲರಾಗುತ್ತಿದ್ದಾರೆ ಎಂಬುದನ್ನು ಅಧ್ಯಯನ ಎತ್ತಿ ತೋರಿಸುತ್ತದೆ. ಇದು ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆ ಎಂದರು.

ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 35 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಈ ಅಧ್ಯಯನವು ಕೇವಲ ದಕ್ಷಿಣ ಭಾರತದ 4 ರಾಜ್ಯಗಳಲ್ಲಿ ಮಾತ್ರವೇ ನಡೆಸಲಾಗಿದೆ.

ABOUT THE AUTHOR

...view details