ಕರ್ನಾಟಕ

karnataka

ETV Bharat / business

ನಕಲಿ ರೇಷನ್ ಕಾರ್ಡ್​​ ಮೇಲೆ ಸರ್ಜಿಕಲ್​ ಸ್ಟ್ರೈಕ್​: 4.39 ಕೋಟಿ ಕಾರ್ಡ್​ ರದ್ದು

ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಆಧುನೀಕರಿಸಲು ಮತ್ತು ಪಡಿತರ ಚೀಟಿ/ ಫಲಾನುಭವಿಗಳ ದತ್ತಾಂಶಗಳ ಡಿಜಿಟಲೀಕರಣ, ಆಧಾರ್ ಅಳವಡಿಕೆ, ನಕಲಿ ಪಡಿತರ ಚೀಟಿಗಳ ಪತ್ತೆ ಕಾರ್ಯಾಚರಣೆಯ ಮೂಲಕ ಪಾರದರ್ಶಕತೆ ಮತ್ತು ದಕ್ಷತೆ ತರಲಾಗುತ್ತದೆ. ದೇಶಾದ್ಯಂತ ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ 2013ರಿಂದ 2020ರ ತನಕ ಒಟ್ಟು 4.39 ಕೋಟಿ ನಕಲಿ ಪಡಿತರ ಚೀಟಿ ರದ್ದುಗೊಂಡಿವೆ ಎಂದು ತಿಳಿಸಿದೆ.

ration cards
ರೇಷನ್ ಕಾರ್ಡ್

By

Published : Nov 6, 2020, 3:15 PM IST

ನವದೆಹಲಿ:ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಿಂದ ದೇಶಾದ್ಯಂತ 4.39 ಕೋಟಿ ನಕಲಿ ಪಡಿತರ ಚೀಟಿ ರದ್ದುಪಡಿಸಲಾಗಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಆಧುನೀಕರಿಸಲು ಮತ್ತು ಪಡಿತರ ಚೀಟಿ/ ಫಲಾನುಭವಿಗಳ ದತ್ತಾಂಶಗಳ ಡಿಜಿಟಲೀಕರಣ, ಆಧಾರ್ ಅಳವಡಿಕೆ, ನಕಲಿ ಪಡಿತರ ಚೀಟಿಗಳ ಪತ್ತೆ ಕಾರ್ಯಾಚರಣೆ ಮೂಲಕ ಪಾರದರ್ಶಕತೆ ಮತ್ತು ದಕ್ಷತೆ ತರಲಾಗುತ್ತದೆ. ದೇಶಾದ್ಯಂತ ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ 2013ರಿಂದ 2020ರ ತನಕ ಒಟ್ಟು 4.39 ಕೋಟಿ ನಕಲಿ ಪಡಿತರ ಚೀಟಿ ರದ್ದುಗೊಂಡಿವೆ ಎಂದು ತಿಳಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿ ಬಿಡುಗಡೆಯಾದ ಪಾಲನ್ನು ಸಂಬಂಧಪಟ್ಟ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ಸೂಕ್ತ ಫಲಾನುಭವಿಗಳನ್ನು ತಲುಪಲು ಬಳಸಿಕೊಳ್ಳುತ್ತಿವೆ. ಕಾಯ್ದೆಯಡಿ ಪ್ರತಿ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಅರ್ಹ ಮಿತಿಯಡಿ ನೈಜ, ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ.

2011ರ ಜನಗಣತಿಯ ಪ್ರಕಾರ, ದೇಶದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಅಂದರೆ, 81.35 ಕೋಟಿ ಜನರು ಟಿಪಿಡಿಎಸ್ ಮೂಲಕ ಸಬ್ಸಿಡಿ ಆಹಾರ ಧಾನ್ಯ ಪಡೆಯಲು ಎನ್ಎಫ್ಎಸ್ಎ ಅವಕಾಶ ನೀಡಿದೆ. ಪ್ರಸ್ತುತ, ಎನ್‌ಎಫ್‌ಎಸ್‌ಎ ಅಡಿ ದೇಶದಲ್ಲಿ 80 ಕೋಟಿಗೂ ಅಧಿಕ ಜನರು ಪ್ರತಿ ತಿಂಗಳು ಕೇಂದ್ರದ ಸಬ್ಸಿಡಿಯ ಬೆಲೆಗಳಲ್ಲಿ ಪ್ರತಿ ಕೆ.ಜಿ.ಗೆ ಕ್ರಮವಾಗಿ 3, 2 ಮತ್ತು 1 ರೂ.ಯಲ್ಲಿ ಅಕ್ಕಿ, ಗೋಧಿ ಮತ್ತು ಇತರೆ ಧಾನ್ಯಗಳನ್ನು ಪಡೆಯುತ್ತಿದ್ದಾರೆ.

ABOUT THE AUTHOR

...view details