ಕರ್ನಾಟಕ

karnataka

ETV Bharat / business

ತೆರಿಗೆ ಇಲಾಖೆಯ 229 ಅಧಿಕಾರಿಗಳು ಕೊರೊನಾದಿಂದ ಸಾವು; ಸಚಿವ ಅನುರಾಗ್ ಠಾಕೂರ್ ಸಂತಾಪ

"ಕರ್ತವ್ಯದಲ್ಲಿರುವಾಗ ಪ್ರಾಣ ಕಳೆದುಕೊಂಡ ಸಿಬಿಐಸಿಯ 110 ಮತ್ತು ಸಿಬಿಡಿಟಿಯ 119 ಅಧಿಕಾರಿಗಳನ್ನು ಈ ಸಮಯದಲ್ಲಿ ಸ್ಮರಿಸಲು ಬಯಸುತ್ತೇನೆ. ಅವರ ಕುಟುಂಬದವರಿಗೆ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ" ಎಂದು ಅನುರಾಗ್ ಠಾಕೂರ್ ಹೇಳಿದರು.

229 taxmen died of COVID: Thakur says nations will remain grateful
229 ತೆರಿಗೆ ಇಲಾಖೆ ಅಧಿಕಾರಿಗಳು ಕೊರೊನಾದಿಂದ ಸಾವು; ಸಚಿವ ಅನುರಾಗ್ ಠಾಕೂರ್ ಸಂತಾಪ

By

Published : May 8, 2021, 9:58 PM IST

ನವದೆಹಲಿ: ಕೋವಿಡ್​-19ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಕರ್ತವ್ಯದಲ್ಲಿರುವಾಗ ಮೃತಪಟ್ಟ 229 ಜನ ತೆರಿಗೆ ಇಲಾಖೆಯ ಸಿಬ್ಬಂದಿಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ (ಸಿಬಿಐಸಿ) 110 ಅಧಿಕಾರಿಗಳು ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) 119 ಅಧಿಕಾರಿಗಳು ಸಾಂಕ್ರಾಮಿಕ ರೋಗದ ನಡುವೆ ಕರ್ತವ್ಯದಲ್ಲಿರುವಾಗ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಚಿವರು ಹೇಳಿದರು.

"ಬಿಕ್ಕಟ್ಟಿನ ಈ ಸಮಯದಲ್ಲಿ ರಾಷ್ಟ್ರದ ಸೇವೆಯಲ್ಲಿ ನಿಮ್ಮ ಪ್ರಾಣವನ್ನು ಪಣಕ್ಕಿಡುತ್ತಿರುವಿರಿ. ನಿಮ್ಮ ಸೇವೆಗೆ ರಾಷ್ಟ್ರವು ಕೃತಜ್ಞವಾಗಿರುತ್ತದೆ. ನಿಮ್ಮ ಸೇವೆಯ ಕಾರಣದಿಂದಾಗಿ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಅಗತ್ಯ ವೈದ್ಯಕೀಯ ಸಲಕರಣೆ ಸರಬರಾಜುಗಳನ್ನು ವಿವಿಧ ಬಂದರುಗಳ ಮೂಲಕ ತ್ವರಿತವಾಗಿ ಸಾಗಿಸಲಾಗುತ್ತಿದೆ. ನಿಮ್ಮ ಸೇವೆಯಿಂದಲೇ ಸರ್ಕಾರಿ ವ್ಯವಸ್ಥೆಯ ಚಕ್ರಗಳು ಪರಿಣಾಮಕಾರಿಯಾಗಿ ಚಲಿಸುತ್ತಿವೆ." ಎಂದು ಸಚಿವರು ನುಡಿದರು.

"ಕರ್ತವ್ಯದಲ್ಲಿರುವಾಗ ಪ್ರಾಣ ಕಳೆದುಕೊಂಡ ಸಿಬಿಐಸಿಯ 110 ಮತ್ತು ಸಿಬಿಡಿಟಿಯ 119 ಅಧಿಕಾರಿಗಳನ್ನು ಈ ಸಮಯದಲ್ಲಿ ಸ್ಮರಿಸಲು ಬಯಸುತ್ತೇನೆ. ಅವರ ಕುಟುಂಬದವರಿಗೆ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ" ಎಂದು ಅನುರಾಗ್ ಠಾಕೂರ್ ಹೇಳಿದರು.

ABOUT THE AUTHOR

...view details