ಕರ್ನಾಟಕ

karnataka

ETV Bharat / business

ಆಟಿಕೆ ವಸ್ತುಗಳ ಮೇಲೆ ಶೇ 200ರಷ್ಟು ಆಮದು ಸುಂಕ, ಚಿಲ್ಲರೆ ವ್ಯಾಪಾರಿಗಳ ಬೆನ್ನಿಗೆ ಬರೆ

ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳಿಗೆ ಶೇ 200ರಷ್ಟು ಆಮದು ಸುಂಕ ಹೊರೆಯಾಗಲಿದೆ ಎಂದು ಶನಿವಾರ ಮುಷ್ಕರ ನಡೆಸಿದ ಆಟಿಕೆ ಆಮದುದಾರರು ತಿಳಿಸಿದ್ದಾರೆ.

By

Published : Feb 8, 2020, 5:01 PM IST

toy
ಆಟಿಕೆ ಸರಕುಗಳು

ಕೋಲ್ಕತ್ತಾ: ದೇಶಿ ಉದ್ಯಮ ವೃದ್ಧಿಗೆ ಅಗ್ಗದ ವಸ್ತುಗಳ ಆಮದು ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಗಣನೀಯವಾಗಿ ಏರಿಸುವುದಾಗಿ 2020-21ನೇ ಸಾಲಿನ ಬಜೆಟ್​ನಲ್ಲಿ ಘೋಷಿಸಿತ್ತು.

ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳಿಗೆ ಶೇ 200ರಷ್ಟು ಆಮದು ಸುಂಕ ಹೊರೆಯಾಗಲಿದೆ ಎಂದು ಶನಿವಾರ ಮುಷ್ಕರ ನಡೆಸಿದ ಆಟಿಕೆ ಆಮದುದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಗೊಂಬೆಗಳ ಮೇಲಿನ ಆಮದು ಸುಂಕವನ್ನು 20ರಿಂದ ಹೆಚ್ಚಿಸಲು ಪ್ರಸ್ತಾಪಿಸಿದೆ. ಮುಂದಿನ ಹಣಕಾಸು ವರ್ಷದಿಂದ ಆಮದು ಸುಂಕ ಶೇ 20 ರಿಂದ 60ರವರೆಗೆ ಏರಿಕೆಯಾಗಲಿದೆ. ಈ ಏರಿಕೆಯು ಎಂಎಸ್‌ಎಂಇಗಳಿಗೆ ಸಹಕಾರಿಯಾಗಲಿದೆ ಮತ್ತು ಸ್ಥಳೀಯ ಉತ್ಪಾದನೆಗೆ ಉತ್ತೇಜನ ಸಿಗಲಿದೆ ಎಂದು ಸ್ಪಷ್ಟನೆ ನೀಡಿತ್ತು.

ಕೇಂದ್ರದ ಆಮದು ಸುಂಕ ಏರಿಕೆ ನಡೆಯನ್ನು ವಿರೋಧಿಸಿ ಆಟಿಕೆ ಸಗಟು ವ್ಯಾಪಾರಿಗಳು ಒಂದು ದಿನದ ಮಟ್ಟಿಗೆ ಮುಷ್ಕರ ನಡೆಸಿದರು. ಆಮದು ಸುಂಕ ಹೆಚ್ಚಳದಿಂದ ಆಟಿಕೆ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಹಾಗೂ ಉದ್ಯೋಗ ನಷ್ಟ ಉಂಟಾಗಲಿದೆ ಎಂದು ಪ್ರತಿಭಟನಾನಿರತರು ಆತಂಕ ವ್ಯಕ್ತಪಡಿಸಿದರು.

200 ಪ್ರತಿಶತದಷ್ಟು ಆಮದು ಸುಂಕ ಹೆಚ್ಚಳವು ಆಟಿಕೆ ಉದ್ಯಮಕ್ಕೆ ದೊಡ್ಡ ಆಘಾತ ನೀಡುತ್ತದೆ. ಇದು ಮಾರುಕಟ್ಟೆ ಸಾಮರ್ಥ್ಯವನ್ನು ಹೀರಿಕೊಳ್ಳುವ ಸಾಧ್ಯತೆಯಿದೆ. ಈ ಸರಕುಗಳು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಇರಬೇಕು ಎಂದು ಪಶ್ಚಿಮ ಬಂಗಾಳ ಎಕ್ಸಿಮ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಮೋಹಿತ್ ಬಂಥಿಯಾ ಹೇಳಿದ್ದಾರೆ.

ವಾರ್ಷಿಕವಾಗಿ ದೇಶಾದ್ಯಂತ ₹ 2,500 ಕೋಟಿಯಷ್ಟು ಆಟಿಕೆ ಸರಕುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಶೇ 75ರಷ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆ ₹ 2,500 ಕೋಟಿಯಲ್ಲಿ ಕೋಲ್ಕತ್ತಾದ ಪಾಲು ₹ 130 ಕೋಟಿಯಷ್ಟಿದೆ.

ABOUT THE AUTHOR

...view details