ನವದೆಹಲಿ:ಸ್ಮಾರ್ಟ್‌ಫೋನ್ ಆಧಾರಿತ ಆಹಾರ ವಿತರಣಾ ಫ್ಲಾಟ್ಫಾರ್ಮ್ ಜೊಮಾಟೊ ಮತ್ತು ಸ್ವಿಗ್ಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
21 ದಿನಗಳ ಲಾಕ್ಡೌನ್ ಜಾರಿಯಿಂದಾಗಿ ರೆಸ್ಟೋರೆಂಟ್ ಹಾಗೂ ಹೋಟೆಲ್ ಸೇವೆ ಸ್ಥಗಿತಗೊಂಡಿವೆ. ಆನ್ಲೈನ ಆಹಾರ ವಿತರಕ ಹುಡುಗರನ್ನು ಸ್ಥಳೀಯ ಅಧಿಕಾರಿಗಳು ಮಾರ್ಗ ಮಧ್ಯದಲ್ಲಿ ಹಿಂದಕ್ಕೆ ಕಳುಹಿಸುತ್ತಿದ್ದು, ಸ್ಟಾರ್ಟ್ಅಪ್ ಸೇವೆಗೆ ದೊಡ್ಡ ಸವಾಲು ಎದುರಾಗಿದಂತಿದೆ.
ವಿತರಣಾ ಪಾಲುದಾರರಿಂದ ಅಗತ್ಯ ಸೇವೆ ಅಡಿ ಬರುವ ಆಹಾರವನ್ನು ಗ್ರಾಹಕರಿಗೆ ತಲುಪಿಸಲು ಪ್ರಯತ್ನಿಸುತ್ತಿರುವ ಡೆಲಿವರಿ ಬಾಯ್ಸ್ ನಗರಗಳಲ್ಲಿ ಹಲವು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಸಂಬಂಧಿತ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಂಪರ್ಕ ನಡೆಸುತ್ತಿದ್ದೇವೆ. ಈ ಸಮಸ್ಯೆಗಳನ್ನು ಶೀಘ್ರದಲ್ಲೇ ಇಥ್ಯರ್ತಪಡಿಸಬಹುದು ಎಂದು ಜೊಮ್ಯಾಟೊ ವಕ್ತಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅವರು ವಿತರಣೆಯಲ್ಲಿನ ಗೊಂದಲ ನಿವಾರಣೆಗೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದ್ದಾರೆ. ಅಗತ್ಯ ಸೇವೆಗಳು ತೊಂದರೆಯಿಲ್ಲದೆ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಇದೊಂದು ತಾತ್ಕಾಲಿಕ ಸಮಸ್ಯೆಯಾಗಿದ್ದು, ಶೀಘ್ರದಲ್ಲೇ ಬಗಿಹರಿಯಲಿದೆ. ಅನೇಕ ರೆಸ್ಟೋರೆಂಟ್‌ಗಳು ತಾತ್ಕಾಲಿಕವಾಗಿ ಮುಚ್ಚುವುದರಿಂದ ಮತ್ತು ಕೆಲವು ರಾಜ್ಯಗಳಲ್ಲಿ ಸಮಸ್ಯೆಗಳು ಕಂಡುಬಂದಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅಗತ್ಯವಿರುವ ಗ್ರಾಹಕರಿಗೆ ಪೂರೈಕೆಯನ್ನು ವಿಸ್ತರಿಸಲು ಸ್ವಿಗ್ಗಿ ಸ್ಥಳೀಯ ಸರ್ಕಾರಗಳ ಜತೆ ಕೆಲಸ ಮಾಡಲಿದೆ ಎಂದು ಸ್ವಿಗ್ಗಿ ಕಂಪನಿಯ ವಕ್ತಾರರು ತಿಳಿಸಿದ್ದಾರೆ.