ನವದೆಹಲಿ:ಗ್ರಾಹಕ, ವ್ಯಾಪಾರಿ ಮತ್ತು ವಿತರಣಾ ಪಾಲುದಾರ ಬೆಂಬಲ ವಿಭಾಗಗಳಲ್ಲಿನ ಕಂಪನಿಯ ಶೇ.10ರಷ್ಟು ಉದ್ಯೋಗ ಕಡಿತದ ಪ್ರತಿಯಾಗಿ 541 ಜನರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆಹಾರ ವಿತರಣಾ ಫ್ಲಾಟ್ಫಾರ್ಮ್ ಜೊಮ್ಯಾಟೋ ತಿಳಿಸಿದೆ.
ಕೃತಕ ಬುದ್ಧಿಮತ್ತೆಯ (ಎಐ )ವ್ಯಾಪಕ ಬಳಕೆ ಮತ್ತು ನೇರ ಆರ್ಡರ್ ಸಂಬಂಧಿತ ಗ್ರಾಹಕರ ವಿಚಾರಣೆಗಳನ್ನು ಯಾಂತ್ರೀಕೃತಗೊಂಡಿದೆ ಎಂದು ಕಂಪನಿಯು ಉದ್ಯೋಗ ಕಡಿತಕ್ಕೆ ಸ್ಪಷ್ಟನೆ ನೀಡಿದೆ.
ಇದೊಂದು ನೋವಿನ ನಿರ್ಧಾರವಾಗಿದ್ದರೂ ಪರಿವರ್ತನೆಯ ಹಾದಿ ಸುಗಮಗೊಳಿಸಲು ಈ ತೀರ್ಮಾನ ತೆಗೆದುಕೊಳ್ಳಬೇಕಾಯಿತು. ಎರಡು ತಿಂಗಳ ನೌಕರಿ ಕಡಿತದ ವೇತನ (ಅಧಿಕಾರಾವಧಿಯ ಆಧಾರದ ಮೇಲೆ), ಕುಟುಂಬಸ್ಥರಿಗೆ ಆರೋಗ್ಯ ವಿಮಾ ರಕ್ಷಣೆ (ಜನವರಿ 2020ರ ಅಂತ್ಯದವರೆಗೆ) ಮತ್ತು ಕಂಪನಿಗಳೊಂದಿಗಿನ ವೃತ್ತಿ ನ್ಯಾಯೋಚಿತ ಅವಕಾಶಗಳನ್ನು ವಿಸ್ತರಿಸಿದ್ದೇವೆ ಎಂದು ಹೇಳಿದೆ.
ಜೊಮ್ಯಾಟೋ 1,200ಕ್ಕೂ ಅಧಿಕ ನೌಕರರನ್ನು ಕಾರ್ಯಪಡೆ ಹಾಗೂ 400ಕ್ಕೂ ಹೆಚ್ಚು ನೌಕರರನ್ನು ಹಿನ್ನಲ್ಲೆ ಬೆಂಬಲಿಗ ಕಾರ್ಯಗಳಿಗೆ ನೇಮಿಸಿಕೊಂಡಿದೆ. ಪ್ರಚಲಿತ ತಂತ್ರಜ್ಞಾನ, ಉತ್ಪನ್ನ ಮತ್ತು ಡೇಟಾ ಸೈನ್ಸ್ ವಿಭಾಗದಲ್ಲಿ ಇನ್ನಷ್ಟು ಜನರನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಿದೆ.