ನವದೆಹಲಿ: ಪುಣೆಯ ಹಿಂಜೇವಾಡದಲ್ಲಿರುವ ತನ್ನ ಕ್ಯಾಂಪಸ್‌ಗಳಲ್ಲಿ ಒಂದನ್ನು ನಾಲ್ಕು ವಾರಗಳಲ್ಲಿ 450 ಹಾಸಿಗೆಗಳ ಮಧ್ಯಮ ಹಂತದ ಕೋವಿಡ್ -19 ಸೋಂಕಿತರ ಆರೈಕೆಯ ಆಸ್ಪತ್ರೆ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಜತೆ ಒಪ್ಪಂದ ಮಾಡಿಕೊಂಡಿರುವುದಾಗಿ ಐಟಿ ಕಂಪನಿ ವಿಪ್ರೋ ತಿಳಿಸಿದೆ.
ಈ ಆಸ್ಪತ್ರೆಯನ್ನು ಮೇ 30 ಒಳಗೆ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಒಂದು ವರ್ಷದ ನಂತರ ಆಸ್ಪತ್ರೆಯನ್ನು ಮತ್ತೆ ಐಟಿ ಸೌಲಭ್ಯಕ್ಕೆ ಪರಿವರ್ತಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ.