ಕರ್ನಾಟಕ

karnataka

ETV Bharat / business

ಶತಮಾನದ ಹೊಸ್ತಿಲಲ್ಲಿರುವ ಕರ್ನಾಟಕ ಬ್ಯಾಂಕ್ ಬಂಡವಾಳ ಬಲಿಷ್ಠವಾಗಿದೆ: ಬ್ಯಾಂಕ್ ಸಿಇಒ - ಆರ್​ಬಿಐ

ಆರ್‌ಬಿಐ ನಿಗದಿಪಡಿಸಿದ ಕನಿಷ್ಠ ಮತ್ತು ಬ್ಯಾಂಕಿನ ಆಂತರಿಕ ನೀತಿಯ ಮೇಲೆ ನಾವು ನಿರಂತರವಾಗಿ ಅಪಾಯ ಮಟ್ಟದ ಆಸ್ತಿ ಅನುಪಾತ (ಸಿಆರ್​ಎಆರ್) ಪರಿಶೀಲಿಸುತ್ತಿದ್ದೇವೆ. 2019ರ ಮಾರ್ಚ್ 31ರ ಲೆಕ್ಕಪರಿಶೋಧನೆಯ ಬ್ಯಾಲೆನ್ಸ್ ಶೀಟ್ ಅನ್ವಯ, ಕರ್ನಾಟಕ ಬ್ಯಾಂಕಿನ ಸಿಆರ್​ಎಆರ್ ಶೇ 13.17ರಷ್ಟಿದೆ. ಇದು ಕನಿಷ್ಠ ನಿಯಂತ್ರಕ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ಕರ್ನಾಟಕ ಬ್ಯಾಂಕ್ ಸಿಇಒ ಸ್ಪಷ್ಟನೆ ನೀಡಿದರು.

Karnataka Bank
ಕರ್ನಾಟಕ ಬ್ಯಾಂಕ್

By

Published : Mar 11, 2020, 11:24 PM IST

ನವದೆಹಲಿ: ಕರ್ನಾಟಕ ಬ್ಯಾಂಕ್ ಸದೃಢವಾದ ಬಂಡವಾಳ ಹೊಂದಿದ್ದು, ಬ್ಯಾಂಕಿನ ಮೂಲಭೂತ ಹಣಕಾಸು ಬಲಿಷ್ಠವಾಗಿದೆ. ಠೇವಣಿದಾರರು ತಮ್ಮ ಹಣದ ಸುರಕ್ಷತೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕ/ ಸಿಇಒ ಎಂ.ಎಸ್​. ಮಹಾಬಲೇಶ್ವರ ಹೇಳಿದ್ದಾರೆ.

ಆರ್‌ಬಿಐ ನಿಗದಿಪಡಿಸಿದ ಕನಿಷ್ಠ ಮತ್ತು ಬ್ಯಾಂಕಿನ ಆಂತರಿಕ ನೀತಿಯ ಮೇಲೆ ನಾವು ನಿರಂತರವಾಗಿ ಅಪಾಯ ಮಟ್ಟದ ಆಸ್ತಿಯ ಅನುಪಾತವನ್ನು (ಸಿಆರ್​ಎಆರ್) ಪರಿಶೀಲಿಸುತ್ತಿದ್ದೇವೆ. 2019ರ ಮಾರ್ಚ್ 31ರ ಲೆಕ್ಕಪರಿಶೋಧನೆಯ ಬ್ಯಾಲೆನ್ಸ್ ಶೀಟ್ ಅನ್ವಯ, ಕರ್ನಾಟಕ ಬ್ಯಾಂಕಿನ ಸಿಆರ್​ಎಆರ್ ಶೇ 13.17ರಷ್ಟಿದೆ. ಇದು ಕನಿಷ್ಠ ನಿಯಂತ್ರಕ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿದರು.

ಬ್ಯಾಂಕಿನ ಬಂಡವಾಳ ಸಮರ್ಪಕವಾಗಿದೆ. ಠೇವಣಿದಾರರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ಕರ್ನಾಟಕ ಬ್ಯಾಂಕ್ ಕಳೆದ 96 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇಂದು ದೇಶಾದ್ಯಂತ 11 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಬ್ಯಾಂಕ್ ಉತ್ತಮ ಬಂಡವಾಳ, ವೃತ್ತಿಪರರಿಂದ ನಿರ್ವಹಿಸಲ್ಪಟ್ಟಿದೆ ಎಂದಿದ್ದಾರೆ.

ಟೆಲಿವಿಷನ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಂಕ್​ಗಳ ಬಗ್ಗೆ ದಾರಿ ತಪ್ಪಿಸುವ ಮತ್ತು ಅಸಂಬದ್ಧ ವರದಿಗಳಿಗೆ ಗ್ರಾಹಕರು ಕಿವಿಗೊಡಬಾರದು ಎಂದು ಮಹಾಬಲೇಶ್ವರ ಮನವಿ ಮಾಡಿದರು.

ಜಗತ್ತಿನಾದ್ಯಂತ ಬ್ಯಾಂಕಿನ ಸದೃಢತೆಯನ್ನು ಅಪಾಯ ಮಟ್ಟದ ಆಸ್ತಿ ಅನುಪಾತ ಉಲ್ಲೇಖಿಸುವ ಮೂಲಕ ಅಳೆಯಲಾಗುತ್ತದೆ. ಠೇವಣಿ ಅನುಪಾತದ ಮಾರುಕಟ್ಟೆ ಬಂಡವಾಳದ ಮೂಲಕ ಅಲ್ಲ ಎಂದರು.

ಬ್ಯಾಂಕ್​ಗಳ ಸದೃಢತೆ ಮತ್ತು ಆರ್ಥಿಕ ಸ್ಥಿತಿಯನ್ನು ಅಳೆಯಲು ಜಾಗತಿಕವಾಗಿ ಎಂ-ಕ್ಯಾಪ್ ಅನುಪಾತವು ಸರಿಯಾದ ಮಾಪನ ಅಲ್ಲ ಎಂದು ಕಳೆದ ವಾರ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಸ್ಪಷ್ಟಪಡಿಸಿದ್ದರು.

ಕಳೆದ ಬ್ಯಾಂಕ್ ಗ್ರಾಹಕರು ಮತ್ತು ಅವರ ಠೇವಣಿಗಳು ಸುರಕ್ಷಿತವಾಗಿವೆ ಎಂದು ಅಭಯ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್, ಹಲವು ಬ್ಯಾಂಕ್​ಗಳ ಠೇವಣಿ ಕುರಿತು ಮಾಧ್ಯಮದ ಹಲವು ವಲಯಗಳು ಆತಂಕ ವ್ಯಕ್ತಪಡಿಸಿವೆ. ಆದರೆ, ಇದು ತಪ್ಪು ಮಾಹಿತಿ. ಬ್ಯಾಂಕ್​ಗಳ ದಿವಾಳಿತನ ಅಂತಾರಾಷ್ಟ್ರೀಯ ಮಟ್ಟದ ಅಪಾಯ ಮಟ್ಟದ ಆಸ್ತಿ ಅನುಪಾತವನ್ನು (ಸಿಆರ್​ಎಆರ್) ಅವಲಂಬಿಸಿದೆ. ಇದು ಮಾರುಕಟ್ಟೆ ಪ್ರಮಾಣವನ್ನು ಅವಲಂಬಿಸಿಲ್ಲ ಎಂದು ಟ್ವಿಟ್ಟರ್​ ಮೂಲಕ ಸ್ಪಷ್ಟಪಡಿಸಿತ್ತು.

ABOUT THE AUTHOR

...view details