ನವದೆಹಲಿ:ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇಂದು ಬೆಳಗ್ಗೆಯಿಂದಲೇ ಜಿಮೇಲ್ ಸಮಸ್ಯೆ ಕಾಣಿಸಿಕೊಂಡಿತ್ತು.
ಜಿಮೇಲ್ ಬಳಕೆದಾರರಿಗೆ ಲಾಗಿನ್ ಮಾಡಲು ಸಮಸ್ಯೆ ಆಗುತ್ತಿದೆ. ಇದರ ಜೊತೆಗೆ ಲಾಗಿನ್ ಆಗಿದ್ದರೂ ಫೈಲ್ ಅಟ್ಯಾಚ್ಮೆಂಟ್ನಲ್ಲೂ ತೊಂದರೆ ಆಗುತ್ತಿದೆ. ಇದರಿಂದಾಗಿ ಬಹುತೇಕ ಬಳಕೆದಾರರು ಪರದಾಡುವಂತಾಗಿದೆ. ಜಿಮೇಲ್ ಸಮಸ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಡೌನ್ ಡಿಟೆಕ್ಟರ್ ಪೋರ್ಟಲ್ನಲ್ಲಿ 62 ಪ್ರತಿಶತದಷ್ಟು ಜನರು ಫೈಲ್ ಅಟ್ಯಾಚ್ನಂತಹ ಸಮಸ್ಯೆ ಎದುರಿಸಿದ್ದರೇ 25 ಪ್ರತಿಶತದಷ್ಟು ಜನ ಲಾಗ್-ಇನ್ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
11 ಪ್ರತಿಶತದಷ್ಟು ಬಳಕೆದಾರರು ಇಮೇಲ್ ಸೇವೆಯಲ್ಲಿ ಸಂದೇಶಗಳನ್ನು ಸ್ವೀಕರಿಸುವಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. 'ಜಿಮೇಲ್ ಸರ್ವರ್ ಡೌನ್ ಆಗಿದೆ. ಯಾವುದೇ ದಾಖಲೆಗಳನ್ನು ಅಟ್ಯಾಚ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಓರ್ವ ಬಳಕೆದಾರರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಂಪ್ಯೂಟರ್ ಮತ್ತು ನೆಟ್‌ವರ್ಕ್ ಲೋಕದ ಸಮಸ್ಯೆ ಮತ್ತು ಬಗ್ ಕುರಿತು ವರದಿ ಮಾಡುವ ಡೌನ್ ಡಿಟೆಕ್ಟರ್ ಈ ಕುರಿತು ಟ್ವೀಟ್ ಮಾಡಿದ್ದು, ಜಿಮೇಲ್ ಮತ್ತು ಗೂಗಲ್ ಡ್ರೈವ್‌ನಲ್ಲಿ ತೊಂದರೆಯಾಗಿದೆ ಎಂದು ಹೇಳಿದೆ.
ಭಾರತದಲ್ಲಿ ಮಾತ್ರವಲ್ಲದೆ ಜಪಾನ್, ಆಸ್ಟ್ರೇಲಿಯಾ, ಕೆನಡಾ ಸೇರಿ ಹಲವು ರಾಷ್ಟ್ರಗಳಲ್ಲಿ ಜಿಮೇಲ್ ಬಳಕೆದಾರರು ತೊಂದರೆಗೆ ಸಿಲುಕಿದ್ದಾರೆ. ಕೆಲವು ಕರೆ ಗೂಗಲ್‌ಡ್ರೈವ್ ಬಳಕೆದಾರರಿಗೆ ಫೈಲ್ ಡೌನ್‌ಲೋಡ್ ಮಾಡಲು ಮತ್ತು ಅಪ್‌ಲೋಡಿಂಗ್ ಕೂಡ ಸಾಧ್ಯವಾಗಿಲ್ಲ.