ಕರ್ನಾಟಕ

karnataka

ETV Bharat / business

ಮಲ್ಯಗೆ ಮತ್ತೊಂದು ಶಾಕ್! ಜೀವನ ನಿರ್ವಹಣೆ, ಕೋರ್ಟ್​ ಶುಲ್ಕಕ್ಕೂ ಹಣ ಕೊಡಲ್ಲವೆಂದ ಬ್ರಿಟನ್ ಕೋರ್ಟ್​ - ಮಲ್ಯಾಗೆ ಹಣ ನೀಡಲು ಕೋರ್ಟ್ ನಿರಾಕಾರ

ಲಂಡನ್‌ನ ಹೈಕೋರ್ಟ್‌ನ ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯದ ನ್ಯಾಯಾಧೀಶರು ಹಣವನ್ನು ಬಿಡುಗಡೆ ಮಾಡಲು ನಿರಾಕರಿಸಿದರು. ಹಣ ಬಿಡುಗಡೆ ಅನುಮತಿ ನೀಡಲು ಅಗತ್ಯ ಮಾಹಿತಿ ಒದಗಿಸಲು ಮಲ್ಯ ವಿಫಲರಾಗಿದ್ದಾರೆ ಎಂದು ಹೇಳಿದರು.

Vijay Mallya
ಮಲ್ಯ

By

Published : Jan 13, 2021, 12:24 PM IST

ಲಂಡನ್: ದಿವಾಳಿತನದ ವಿಚಾರಣೆಯ ಭಾಗವಾಗಿ ನ್ಯಾಯಾಲಯದ ಸುಪರ್ದಿಯಲ್ಲಿರುವ ಫಂಡ್ಸ್ ಕಚೇರಿ ನಿಧಿಯಿಂದ ತನ್ನ ಜೀವನ ವೆಚ್ಚ ಮತ್ತು ಕಾನೂನು ಹೋರಾಟದ ಶುಲ್ಕ ಭರಿಸಲು ಲಕ್ಷಾಂತರ ಪೌಂಡ್​​ ಪಡೆಯಲು ಅನುಮತಿ ನೀಡುವಂತೆ ಮದ್ಯದ ದೊರೆ ವಿಜಯ್ ಮಲ್ಯ ಸಲ್ಲಿಸಿದ್ದ ಮನವಿಯನ್ನು ಯುಕೆ ಹೈಕೋರ್ಟ್​ ತಿರಸ್ಕರಿಸಿದೆ.

ಭಾರತೀಯ ಬ್ಯಾಂಕ್​ಗಳಿಂದ ಸಾಲ ಪಡೆದು ಮರುಪಾವತಿಸಿದೆ ದೇಶ ತೊರೆದಿರುವ ವಿಜಯ್ ಮಲ್ಯ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟ ಯುಕೆ ಕೋರ್ಟ್​ನಲ್ಲಿ ದೂರು ಸಲ್ಲಿಸಿದೆ.

ಲಂಡನ್‌ನ ಹೈಕೋರ್ಟ್‌ನ ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯದ ನ್ಯಾಯಾಧೀಶರು ಹಣವನ್ನು ಬಿಡುಗಡೆ ಮಾಡಲು ನಿರಾಕರಿಸಿದರು. ಹಣ ಬಿಡುಗಡೆ ಅನುಮತಿ ನೀಡಲು ಅಗತ್ಯ ಮಾಹಿತಿ ಒದಗಿಸಲು ಮಲ್ಯ ವಿಫಲರಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದ್ವಿಶತಕ ಬಾರಿಸಿದ ಸೆನ್ಸೆಕ್ಸ್: ಐತಿಹಾಸಿಕ 50 ಸಾವಿರ ಸನಿಹದಲ್ಲಿ ಗೂಳಿ ಗುಟುರು

ನ್ಯಾಯಾಧೀಶ ಸೆಬಾಸ್ಟಿಯನ್ ಪ್ರೆಂಟಿಸ್ ಅವರು ಬುಧವಾರ (ಜನವರಿ 13) ನಿರಾಕರಣೆಯ ವಿರುದ್ಧ ಸಲ್ಲಿಸುವ ಮೇಲ್ಮನವಿಯಡಿ ಮಲ್ಯಾಗೆ ಸಾಕಷ್ಟು ಹಣ ಅನುಮತಿಸಲು ಒಪ್ಪಿಕೊಂಡಿದ್ದರು.

ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯದ ನ್ಯಾಯಮೂರ್ತಿ ರಾಬರ್ಟ್ ಶಾಫರ್ ಅವರು ಈ ವರ್ಷದ ಆರಂಭದಲ್ಲಿ ಮಲ್ಯ ಅವರ ಫ್ರೆಂಚ್ ಐಷಾರಾಮಿ ಆಸ್ತಿ ಲೆ ಗ್ರ್ಯಾಂಡ್ ಜಾರ್ಡಿನ್ ಮಾರಾಟದಿಂದ ಗಳಿಸಿದ ಅಂದಾಜು 1.5 ದಶಲಕ್ಷ ಪೌಂಡ್‌ಗಳ ನ್ಯಾಯಾಲಯದ ನಿಧಿಯಿಂದ ಡ್ರಾ ಮಾಡಲು ಅವಕಾಶ ನೀಡಲು ನಿರಾಕರಿಸಿದ್ದರು.

ABOUT THE AUTHOR

...view details