ನವದೆಹಲಿ:ಟಿವಿಎಸ್ ಮೋಟಾರ್ಸ್ ಸಂಸ್ಥೆಯು ತನ್ನ ನೂತನ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕ್‌ನ ಪ್ರಥಮ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಟಿವಿಎಸ್ ಮೋಟಾರ್ಸ್ 'ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕ್'ನ ಪ್ರದರ್ಶನಲ್ಲಿ ಇರಿಸಿತ್ತು. ಆಗ ಇದು ಬೈಕ್ ಪ್ರಿಯರ ಹಾಗೂ ಉದ್ಯಮಿ ವಲಯದ ಗಮನ ಸೆಳೆದಿತ್ತು. ಈಗ ಅದೇ ಬೈಕ್ ಮಾರುಕಟ್ಟೆಗೆ ಬಂದಿದ್ದು, ದೆಹಲಿಯ ಎಕ್ಸ್ಶೋರೂಮ್ ಬೆಲೆ ₹ 1.20 ಲಕ್ಷಯಲ್ಲಿ ದೊರೆಯಲಿದೆ.
ಮಾಲಿನ್ಯ ತಡೆಯುವ ವಿಶೇಷ ಗುಣಗಳನ್ನು ಹೊಂದಿದೆ. ಎಥೆನಾಲ್ ಬೈಕ್ ವಿಷಕಾರಿಯಲ್ಲದ ಬಯೊಡಿಗ್ರೇಡೆಬಲ್ ಮತ್ತು ಪೆಟ್ರೋಲ್‌ಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದೆ. 197.75 ಸಿಸಿ ಏರ್ ಕೂಲ್ಡ್ ಫ್ಯುಯಲ್-ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 20.7 ಬಿಹೆಚ್‌ಪಿ ಮತ್ತು 18.1 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಪಡೆದಿದೆ ಎಂದು ಟಿವಿಎಸ್ ಹೇಳಿದೆ.
'ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕ್' ಮೊದಲ ಹಂತವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬಿಡುಗಡೆ ಆಗಲಿದ್ದು, ಮುಂದಿನ ದಿನಗಳಲ್ಲಿ ಇನ್ನಿತರೆ ರಾಜ್ಯಗಳಲ್ಲಿ ರಸ್ತೆಗಿಳಿಯಲಿದೆ.ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಎಥೆನಾಲ್ ಬೈಕ್‌ನ ಲೋಕಾರ್ಪಣೆಗೊಳಿಸಿದರು. ಈ ವೇಳೆ ಕಂಪನಿಯ ಮುಖ್ಯಸ್ಥ ವೇಣು ಶ್ರೀನಿವಾಸನ್ ಉಪಸ್ಥಿತರಿದ್ದರು.