ಕರ್ನಾಟಕ

karnataka

ETV Bharat / business

ನಿಮ್ಮ ಈ ಸ್ಮಾರ್ಟ್​ಫೋನ್​​ನಲ್ಲಿ ನಾಳೆಯಿಂದ WhatsApp ಕಾರ್ಯನಿರ್ವಹಿಸಲ್ಲ..! - ವಾಟ್ಸ್​ಆ್ಯಪ್

ಬ್ಲಾಕ್​ಬೆರಿ ಒಎಸ್, ಬ್ಲಾಕ್​ಬೆರಿ 10 ಹಾಗೂ ಹಳೆಯ ಆ್ಯಂಡ್ರಾಯ್ಡ್ ಪ್ಲಾಟ್​ಫಾರ್ಮ್​ ಸಪೋರ್ಟ್ ಮಾಡುವ ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ತನ್ನ ಕಾರ್ಯವನ್ನು ಕೊನೆಗೊಳಿಸುತ್ತಿದೆ. ಡಿಸೆಂಬರ್ 31ರಿಂದ ವಿಂಡೋಸ್ ಫೋನ್​ಗಳಿಗೆ ನೀಡುತ್ತಿರುವ ತನ್ನ ಸೇವೆಯನ್ನು ಹಿಂದಕ್ಕೆ ಪಡೆಯುತ್ತಿದೆ.

WhatsApp
ವಾಟ್ಸ್​ಆ್ಯಪ್​

By

Published : Dec 31, 2019, 6:55 PM IST

ಸ್ಯಾನ್​ಪ್ರಾನ್ಸಿಸ್ಕೋ:ಫೇಸ್​ಬುಕ್​ ಮಾಲೀಕತ್ವದ ಜನಪ್ರಿಯ ವಾಟ್ಸ್​ಆ್ಯಪ್​ 2020ರ ಜನವರಿ 1ರಿಂದ ಕೋಟ್ಯಂತರ ಹಳೆಯ ಫೋನ್​ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಬ್ಲಾಕ್​ಬೆರಿ ಒಎಸ್, ಬ್ಲಾಕ್​ಬೆರಿ 10 ಹಾಗೂ ಹಳೆಯ ಆ್ಯಂಡ್ರಾಯ್ಡ್ ಪ್ಲಾಟ್​ಫಾರ್ಮ್​ ಸಪೋರ್ಟ್ ಮಾಡುವ ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ತನ್ನ ಕಾರ್ಯವನ್ನು ಕೊನೆಗೊಳಿಸುತ್ತಿದೆ. ಡಿಸೆಂಬರ್ 31ರಿಂದ ವಿಂಡೋಸ್ ಫೋನ್​ಗಳಿಗೆ ನೀಡುತ್ತಿರುವ ತನ್ನ ಸೇವೆಯನ್ನ ಹಿಂದಕ್ಕೆ ಪಡೆಯುತ್ತಿದೆ.

ಕಳೆದ ಮೇ ತಿಂಗಳಲ್ಲಿ ಫೇಸ್​ಬುಕ್ ಇಂಕಾ ತನ್ನ ಬ್ಲಾಗ್​ನಲ್ಲಿ ಈ ಬಗ್ಗೆ ಬರೆದುಕೊಂಡಿದೆ. ವಿಂಡೋಸ್ ಮತ್ತು ಹಳೆಯ ಆ್ಯಂಡ್ರಾಯ್ಡ್ ಫ್ಲಾಟ್​​ಫಾರ್ಮ್ ಫೋನ್​ಗಳಲ್ಲಿ ವಾಟ್ಸ್ಆ್ಯಪ್ ನೂತನ ಫೀಚರ್ಸ್​ಗಳು ಸಹಕರಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ತಿಳಿಸಿತು.

ಬ್ಲಾಕ್​ಬೆರಿ ಒಎಸ್, ಬ್ಲಾಕ್​ಬೆರಿ 10, ವಿಂಡೋಸ್ ಫೋನ್ ಇವುಗಳನ್ನು ಬಳಸುವವರು ತಮ್ಮ ಡಿವೈಸ್ ಅಪ್​ಗ್ರೇಡ್ ಮಾಡುವ ಅಗತ್ಯವಿದೆ. 2020ರ ಫೆಬ್ರವರಿ 1ರ ಬಳಿಕ ಆ್ಯಂಡ್ರಾಯ್ಡ್​ ಒಎಸ್​ 2.3.7 ಅಥವಾ ಇದಕ್ಕೂ ಹಳೆಯ ವರ್ಷನ್​​ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಿದೆ.

ABOUT THE AUTHOR

...view details