ಮುಂಬೈ: ದೇಶದ ಅತೀ ದೊಡ್ಡ ಸಾಫ್ಟ್‌ವೇರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 2019-20ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ.
ಪ್ರಸಕ್ತ ವಿತ್ತೀಯ ವರ್ಷದ 3ನೇ ತ್ರೈಮಾಸಿಕದಲ್ಲಿ ಟಿಸಿಎಸ್ನ ಲಾಭಾಂಶದಲ್ಲಿ ಕಳೆದ ವರ್ಷಕ್ಕಿಂತ ಅಲ್ಪ ಪ್ರಮಾಣದ ಶೇ 0.16ರಷ್ಟು ಏರಿಕೆಯಾಗಿದೆ. 2018-19ರಲ್ಲಿ ₹ 8,105 ಕೋಟಿ ಇದ್ದ ಆದಾಯ 2019-20ರಲ್ಲಿ ₹ 8,118 ಕೋಟಿಗೆ ತಲುಪಿದೆ ಎಂದು ಟಾಟಾ ತಿಳಿಸಿದೆ.