ಕರ್ನಾಟಕ

karnataka

ETV Bharat / business

ಟಾಟಾ ಮೋಟಾರ್ಸ್​-ಕರ್ನಾಟಕ ಬ್ಯಾಂಕ್​ ಒಪ್ಪಂದ: ವಾಹನ ಖರೀದಿ ಗ್ರಾಹಕರಿಗೆ ಸಿಗಲಿದೆ ಸುಲಭ ಸಾಲ!

ಟಾಟಾ ಮೋಟಾರ್ಸ್​ ಹಾಗೂ ಕರ್ನಾಟಕ ಬ್ಯಾಂಕ್​ನ ಜಂಟಿ ಸಹಯೋಗದಡಿ ಗ್ರಾಹಕರು ಟಾಟಾ ಮೋಟಾರ್ಸ್ ವಾಹನದ ಆನ್ ರೋಡ್ ಬೆಲೆಯಲ್ಲಿ 85 ಪ್ರತಿಶತದಷ್ಟು ಸಾಲವನ್ನು ಬಾಹ್ಯ ಬೆಂಚ್ ‌ಮಾರ್ಕ್ ಸಾಲ ದರದ (ಇಬಿಎಲ್‌ಆರ್) ಲಿಂಕ್ ಬಡ್ಡಿ ದರದ ಜತೆಗೆ ಪಡೆಯಬಹುದಾಗಿದೆ. ಇದನ್ನು ಆಗಾಗ ಬ್ಯಾಂಕ್​ ವೆಬ್‌ಸೈಟ್‌ನಲ್ಲಿ ನವೀಕರಿಸಲಾಗುವುದು ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ಹೇಳಿದೆ.

Tata Motors
ಟಾಟಾ ಮೋಟಾರ್ಸ್​

By

Published : Jan 4, 2021, 3:46 PM IST

ಮುಂಬೈ: ತನ್ನ ಮಾರಾಟ ಜಾಲ ವೃದ್ಧಿಸಿ ಗ್ರಾಹಕರ ಚಿಲ್ಲರೆ ಹಣಕಾಸಿನ ಸಮಸ್ಯೆ ಇತ್ಯರ್ಥವಾಗಲು ಟಾಟಾ ಮೋಟಾರ್ಸ್ ಕರ್ನಾಟಕ ಬ್ಯಾಂಕ್‌ ಜತೆಗೆ ಸಹಭಾಗಿತ್ವ ಮಾಡಿಕೊಂಡಿದ್ದಾಗಿ ತಿಳಿಸಿದೆ.

ಜಂಟಿ ಸಹಯೋಗದಡಿ ಗ್ರಾಹಕರು ಟಾಟಾ ಮೋಟಾರ್ಸ್ ವಾಹನದ ಆನ್ ರೋಡ್ ಬೆಲೆಯಲ್ಲಿ 85 ಪ್ರತಿಶತದಷ್ಟು ಸಾಲವನ್ನು ಬಾಹ್ಯ ಬೆಂಚ್‌ ಮಾರ್ಕ್ ಸಾಲ ದರದ (ಇಬಿಎಲ್‌ಆರ್) ಲಿಂಕ್ ಬಡ್ಡಿ ದರದ ಜತೆಗೆ ಪಡೆಯಬಹುದಾಗಿದೆ. ಇದನ್ನು ಆಗಾಗ ಬ್ಯಾಂಕ್​ ವೆಬ್‌ಸೈಟ್‌ನಲ್ಲಿ ನವೀಕರಿಸಲಾಗುವುದು ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ಹೇಳಿದೆ.

ಉದ್ದೇಶಿತ ಈ ಯೋಜನೆಯಡಿ ಗ್ರಾಹಕರು ಸಾಲವನ್ನು ಗರಿಷ್ಠ 84 ತಿಂಗಳವರೆಗೆ ಪಡೆಯಬಹುದಾಗಿದೆ.

ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ತಮ್ಮ ನೆಚ್ಚಿನ ಟಾಟಾ ಕಾರನ್ನು ಖರೀದಿಸಲು ಆಕರ್ಷಕ ಹಣಕಾಸು ಕೊಡುಗೆ ಪರಿಚಯಿಸುವ ಜಂಟಿ ಪ್ರಯತ್ನದ ಭಾಗವಾಗಿ ಕರ್ನಾಟಕ ಬ್ಯಾಂಕಿನೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: ಚೀನಾದ ಬಿಲಿಯನೇರ್ ಉದ್ಯಮಿ ಜಾಕ್​ ಮಾ ನಾಪತ್ತೆ ಶಂಕೆ: ಕಮ್ಯುನಿಸ್ಟ್​ ರಾಷ್ಟ್ರದಲ್ಲಿ ಏನಾಗುತ್ತಿದೆ?

ಗ್ರಾಹಕರು ತಮ್ಮ ಭವಿಷ್ಯದ ವಾಹನ ಖರೀದಿಯಲ್ಲಿ ಕರ್ನಾಟಕ ಬ್ಯಾಂಕಿನ 857 ಶಾಖೆಗಳಲ್ಲಿ 199 ಅರೆ ನಗರ ಮತ್ತು 67 ಗ್ರಾಮೀಣ ಶಾಖೆಗಳನ್ನು ಒಳಗೊಂಡಂತೆ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಬಹುದು. ದೇಶಾದ್ಯಂತ ವಾಹನ ಖರೀದಿಯನ್ನು ಸುಲಭ ಮತ್ತು ಕೈಗೆಟುಕುವಂತೆ ಮಾಡಲಾಗುವುದು ಎಂದು ಹೇಳಿದೆ.

ABOUT THE AUTHOR

...view details