ಕರ್ನಾಟಕ

karnataka

ETV Bharat / business

ಕಾರು ಖರೀದಿಗೆ ಸುಗ್ಗಿ ಕಾಲ: ಟಾಟಾದ ಈ ಕಾರುಗಳಿಗೆ 65,000 ರೂ. ತನಕ ರಿಯಾಯಿತಿ! - ಟಾಟಾ ಮೋಟಾರ್ಸ್ ಹೊಸ ಆಫರ್

ಗರಿಷ್ಠ 65,000 ರೂ. ತನಕ ಈ ರಿಯಾಯಿತಿಗಳು ಮಾರ್ಚ್ 31ರವರೆಗೆ ಲಭ್ಯವಿದೆ. ಈ ಕೊಡುಗೆಗಳು ಟಿಯಾಗೊ, ಟೈಗರ್, ನೆಕ್ಸಾನ್ ಮತ್ತು ಹ್ಯಾರಿಯರ್​ಗೆ (5 ಆಸನ ಮಾಡಲ್​) ಅನ್ವಯಿಸುತ್ತವೆ. ಅಲ್ತುರಾಜ್ ಸಫಾರಿ ಎಸ್ಯುವಿಯಲ್ಲಿ ಯಾವುದೇ ಆಫರ್​ ನೀಡಿಲ್ಲ. ಇದು ಗ್ರಾಹಕ ಯೋಜನೆ, ವಿನಿಮಯ ಕೊಡುಗೆ ಮತ್ತು ಸಾಂಸ್ಥಿಕ ಯೋಜನೆ ರೂಪದಲ್ಲಿ ನೀಡಲಿದೆ.

By

Published : Mar 18, 2021, 5:30 PM IST

ನವದೆಹಲಿ:ದೇಶೀಯ ಕಾರು ದೈತ್ಯ ಟಾಟಾ ಮೊಟರ್ಸ್ ಗ್ರಾಹಕರನ್ನು ಆಕರ್ಷಿಸಲು ವಿವಿಧ ಮಾದರಿಗಳ ಕಾರುಗಳಿಗೆ ಭಾರಿ ರಿಯಾಯಿತಿ ಘೋಷಿಸಿದೆ.

ಗರಿಷ್ಠ 65,000 ರೂ. ತನಕ ಈ ರಿಯಾಯಿತಿಗಳು ಮಾರ್ಚ್ 31ರವರೆಗೆ ಲಭ್ಯವಿದೆ. ಈ ಕೊಡುಗೆಗಳು ಟಿಯಾಗೊ, ಟೈಗರ್, ನೆಕ್ಸಾನ್ ಮತ್ತು ಹ್ಯಾರಿಯರ್​ಗೆ (5 ಆಸನ ಮಾಡಲ್​) ಅನ್ವಯಿಸುತ್ತವೆ. ಅಲ್ತುರಾಜ್ ಸಫಾರಿ ಎಸ್ಯುವಿಯಲ್ಲಿ ಯಾವುದೇ ಆಫರ್​ ನೀಡಿಲ್ಲ. ಇದು ಗ್ರಾಹಕ ಯೋಜನೆ, ವಿನಿಮಯ ಕೊಡುಗೆ ಮತ್ತು ಸಾಂಸ್ಥಿಕ ಯೋಜನೆ ರೂಪದಲ್ಲಿ ನೀಡಲಿದೆ.

ಟಿಯಾಗೊ ಮಾದರಿಯಲ್ಲಿ ಟಾಟಾ 25 ಸಾವಿರ ರೂ. ರಿಯಾಯಿತಿ ಇದೆ. ಈ ಪೈಕಿ ಗ್ರಾಹಕ ಯೋಜನೆ 15 ಸಾವಿರ ರೂ. ಮತ್ತು ವಿನಿಮಯ ಕೊಡುಗೆ 10,000 ರೂಪಾಯಿಯಷ್ಟಿದೆ. ಟೈಗರ್ ಸೆಡಾನ್ ಮೇಲೆ ಗ್ರಾಹಕ ಯೋಜನೆಯಲ್ಲಿ ರೂ. 15 ಸಾವಿರ, ವಿನಿಮಯ ಪ್ರಸ್ತಾಪದ ರಿಯಾಯಿತಿ ರೂಪದಲ್ಲಿ 15 ಸಾವಿರ ರೂ. ಕೊಡುಗೆಯಿದೆ.

ನೆಕ್ಸಾನ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮೇಲೆ 15 ಸಾವಿರ ರೂ.ಯಷ್ಟು ಆಫರ್ ನೀಡುತ್ತಿದೆ. ಇದು ಡೀಸೆಲ್ ಆವೃತ್ತಿಯ ವಿನಿಮಯದಲ್ಲಿ ಮಾತ್ರ ಲಭ್ಯವಿದೆ. ಹ್ಯಾರಿಯರ್ 5 ಆಸನಗಳ ಮಾದರಿ, ಕ್ಯಾಮೊ ರೂಪಾಂತರವು 40,000 ರೂ., ಸಾಮಾನ್ಯ ಹ್ಯಾರಿಯರ್‌ನಲ್ಲಿ 65,000 ರೂ.ಗಳವರೆಗೆ ರಿಯಾಯಿತಿ ಇದೆ. ಹ್ಯಾರಿಯರ್ನ್​ ಸೀಮಿತ ಮಾಡಲ್​ಗಳಿಗೆ ಸೀಮಿತ ಕೊಡುಗೆಗಳಿವೆ. ಕೆಲವರಿಗೆ ಮಾತ್ರ ಕೊಡುಗೆ ಅನ್ವಯಿಸುವುದಿಲ್ಲ.

ABOUT THE AUTHOR

...view details