ಕರ್ನಾಟಕ

karnataka

ETV Bharat / business

ಆನ್​ಲೈನ್​ ಕಿರಾಣಿ ಸ್ಟೋರ್​ಗೆ ಟಾಟಾ ಎಂಟ್ರಿ: ಅಮೆಜಾನ್, ರಿಲಯನ್ಸ್, ಫ್ಲಿಪ್‌ಕಾರ್ಟ್​ಗೆ ನಡುಕ!

ಆನ್‌ಲೈನ್ ಕಿರಾಣಿ ದೈತ್ಯ ಬಿಗ್‌ಬಾಸ್ಕೆಟ್ ಸ್ವಾಧೀನಪಡಿಸಿಕೊಳ್ಳಲು ಟಾಟಾ ಡಿಜಿಟಲ್ಸ್ ಮುಂದಾಗಿದೆ. ಈ ಖರೀದಿಗೆ ಭಾರತದ ಸ್ಪರ್ಧಾ ಆಯೋಗ ಗುರುವಾರ ಅನುಮೋದನೆ ನೀಡಿದೆ. ಟಾಟಾ ಡಿಜಿಟಲ್ ಸೂಪರ್​ಮಾರ್ಕೆಟ್ ಕಿರಾಣಿ ಸರಬರಾಜು ಪ್ರೈವೇಟ್ ಲಿಮಿಟೆಡ್​ನಲ್ಲಿ (ಎಸ್‌ಜಿಎಸ್) ಶೇ 64.3ರಷ್ಟು ಪಾಲು ಪಡೆಯಲಿದೆ.

Tata
Tata

By

Published : Apr 29, 2021, 9:10 PM IST

ನವದೆಹಲಿ:ಆನ್‌ಲೈನ್ ಕಿರಾಣಿ ಸಂಸ್ಥೆ ಬಿಗ್‌ಬಾಸ್ಕೆಟ್‌ನ ಬಿಸಿನೆಸ್​ ಟು ಬಿಸಿನೆಸ್​ಗೆ ಕೈಗೆಟುಕುವ ಸೂಪರ್​ಮಾರ್ಕೆಟ್ ಕಿರಾಣಿ ಸರಬರಾಜು ಖಾಸಗಿ ಲಿಮಿಟೆಡ್​​ನಲ್ಲಿ (ಎಸ್‌ಜಿಎಸ್) ಟಾಟಾ ಡಿಜಿಟಲ್​ನ ಪ್ರಸ್ತಾವಿತ ಶೇ 64.3ರಷ್ಟು ಪಾಲು ಸ್ವಾಧೀನಪಡಿಸಿಕೊಳ್ಳಲು ಭಾರತದ ಸ್ಪರ್ಧಾ ಆಯೋಗ (ಸಿಸಿಐ) ಅನುಮೋದನೆ ನೀಡಿದೆ.

ಆನ್‌ಲೈನ್ ಕಿರಾಣಿ ದೈತ್ಯ ಬಿಗ್‌ಬಾಸ್ಕೆಟ್ ಸ್ವಾಧೀನಪಡಿಸಿಕೊಳ್ಳಲು ಟಾಟಾ ಡಿಜಿಟಲ್ಸ್ ಮುಂದಾಗಿದೆ. ಈ ಖರೀದಿಗೆ ಭಾರತದ ಸ್ಪರ್ಧಾ ಆಯೋಗ ಗುರುವಾರ ಅನುಮೋದನೆ ನೀಡಿದೆ. ಟಾಟಾ ಡಿಜಿಟಲ್ ಸೂಪರ್​ಮಾರ್ಕೆಟ್ ಕಿರಾಣಿ ಸರಬರಾಜು ಪ್ರೈವೇಟ್ ಲಿಮಿಟೆಡ್​ನಲ್ಲಿ (ಎಸ್‌ಜಿಎಸ್) ಶೇ 64.3ರಷ್ಟು ಪಾಲು ಪಡೆಯಲಿದೆ.

ಬಿಗ್‌ಬಾಸ್ಕೆಟ್ ನಿಯಂತ್ರಿಸುವ ಇನ್ನೋವೇಟಿವ್ ರಿಟೇಲ್ ಕಾನ್ಸೆಪ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಹಾದಿಯನ್ನು ಎಸ್‌ಜಿಎಸ್ ಸುಗಮಗೊಳಿಸಿದೆ. ಟಾಟಾ ಡಿಜಿಟಲ್ ಈ ಸ್ವಾಧೀನ ಪೂರ್ಣಗೊಳಿಸಿದರೆ, ಅದು ಅಲಿಬಾಬಾಗೆ ಸ್ವಲ್ಪ ಪ್ರಯೋಜನ ನೀಡುತ್ತದೆ. ಕಂಪನಿಯು ಇತ್ತೀಚೆಗೆ ಬಿಗ್‌ಬಾಸ್ಕೆಟ್‌ನಲ್ಲಿ ಶೇ 29ರಷ್ಟು ಪಾಲು ಮಾರಾಟ ಮಾಡಿ ನಿರ್ಗಮಿಸಲು ಎದುರು ನೋಡುತ್ತಿದೆ.

ದೇಶೀಯ ವ್ಯಾಪಾರ ಉದ್ಯಮಿ ಗೋದ್ರೆಜ್ ಕೂಡ ಶೇ 16.3ರಷ್ಟು ಪಾಲು ಹೊಂದಿದ್ದಾರೆ. ಟಾಟಾ ಸುಮಾರು 9,300 ಕೋಟಿ ರೂ. (1.2 ಬಿಲಿಯನ್ ಡಾಲರ್​) ಮೌಲ್ಯದ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ. ರೆಡ್‌ಸೀರ್ ವರದಿಯ ಪ್ರಕಾರ, ಬಿಗ್‌ಬಾಸ್ಕೆಟ್‌ನ ಮೌಲ್ಯವು ವರ್ಷಕ್ಕೆ 57 ಪ್ರತಿಶತದಷ್ಟು ಬೆಳೆಯುತ್ತಿದೆ. 2019ರಲ್ಲಿ 1.9 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯು 2020ರ ಅಂತ್ಯದ ವೇಳೆಗೆ 3 ಬಿಲಿಯನ್ ಡಾಲರ್​ಗೆ ತಲುಪಲಿದೆ.

2024ರ ವೇಳೆಗೆ ಕಂಪನಿಯು 18 ಬಿಲಿಯನ್ ಡಾಲರ್​ ಗಡಿ ಮುಟ್ಟುವ ನಿರೀಕ್ಷೆಯಿದೆ. ಒಪ್ಪಂದ ಪೂರ್ಣಗೊಂಡ ನಂತರ, ಟಾಟಾಸ್ ದೇಶೀಯ ಆನ್‌ಲೈನ್ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಹ ಸಜ್ಜಾಗಲಿದೆ. ಅಮೆಜಾನ್, ರಿಲಯನ್ಸ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳು ಈಗಾಗಲೇ ಸ್ಪರ್ಧಿಸುತ್ತಿವೆ.

ABOUT THE AUTHOR

...view details