ಸ್ಯಾನ್ಫ್ರಾನ್ಸಿಸ್ಕೊ:ಸೌತ್‌ವೆಸ್ಟ್ ಏರ್ಲೈನ್ಸ್ನ ವಿಮಾನದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ವಿಮಾನ ಗಗನಸಖಿಯೊಬ್ಬರು ಲೆಗೇಜ್ ಬಿನ್ನಲ್ಲಿ ಕೆಲಹೊತ್ತು ತೆವಳುತ್ತಾ ಸಾಗಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದಾರೆ.
ನ್ಯಾಶ್ವಿಲ್ಲೆಯಿಂದ ಫಿಲಡೆಲ್ಫಿಯಾಕ್ಕೆ ತೆರಳುವ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರಾದ ವೆರೋನಿಕಾ ಲಾಯ್ಡ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಲಗೇಜ್ ಬಿನ್ನಲ್ಲಿ ಅಡ್ಡವಾಗಿ ಮಲಗಿ ತೆವಳುತ್ತಾ ಸಾಗುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಲೈಟ್ ಅಟೆಂಡೆಂಟ್ ಒಬ್ಬರು ತೆರೆದ ವಿಮಾನದ ಲಗೇಜ್ ಬಿನ್ ಒಳಗೆ ಸೆರಿಕೊಂಡು, ಪ್ರಯಾಣಿಕರು ವಿಮಾನದ ಒಳಗೆ ಬರುತ್ತಿದ್ದಂತೆ ಸ್ವಾಗತ ಕೋರುತ್ತಿರುವ ಧ್ವನಿ ವಿಡಿಯೋದಲ್ಲಿದೆ. ಲಗೇಜ್ ಬಿನ್ ಒಳಗೆ ಸೇರಿದ್ದ ಗಗನಸಖಿಯ ಈ ನಡೆಯಿಂದ ಕೆಲವರು ಅಚ್ಚರಿಗೆ ಒಳಗಾಗಿದ್ದಾರೆ.
ಓವರ್ಹೆಡ್ನಲ್ಲಿ ಗಗನಸಖಿ 10 ನಿಮಿಷಗಳ ಕಾಲ ಇದ್ದರು. ಮಹಿಳೆಯ ವರ್ತನೆಯಿಂದ ಕೆಲ ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು ಎಂದು ಇಲ್ಲಿನ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಇಂದೊಂದು ಹಾಸ್ಯಕ್ಕಾಗಿ ಮಾಡಿದ ಕಿರು ಕ್ಷಣ. ಪ್ರಯಾಣಿಕರು ಗಂಭೀರವಾಗಿ ತೆಗೆದುಕೊಳ್ಳದಂತೆ ಸೌತ್‌ವೆಸ್ಟ್ ಏರ್‌ಲೈನ್ಸ್ ಸ್ಪಷ್ಟನೆ ನೀಡಿದೆ.