ಕರ್ನಾಟಕ

karnataka

ETV Bharat / business

ಎಸ್​ಬಿಐನಿಂದ ಗುಡ್​ ನ್ಯೂಸ್​: ಸಾಲದ ಮೇಲಿನ ಬಡ್ಡಿ ದರ ಕಡಿತ

ರಿಸರ್ವ್ ಬ್ಯಾಂಕ್ ಆಫ್ ರೆಪೊ ದರದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ. 12 ತಿಂಗಳ ಅವಧಿಯ ನಂತರ ಎಂಸಿಎಲ್‌ಆರ್‌ಗೆ ಜೋಡಣೆ ಮಾಡಲಾದ ಬದಲಾಗುವ ದರದ (ಫ್ಲೋಟಿಂಗ್ ರೇಟ್) ಗೃಹ ಸಾಲ ಹೊಂದಿರುವ ಸಾಲಗಾರಿಗೆ ರವಾನೆ ಆಗುತ್ತದೆ. ಎಸ್‌ಬಿಐ ಎಂಸಿಎಲ್‌ಆರ್ ಮರುಹೊಂದಿಸುವ ಪರಿವರ್ತೆಯನ್ನು 1 ವರ್ಷದಿಂದ 6 ತಿಂಗಳಿಗೆ ಇಳಿಸಿದೆ

SBI
ಎಸ್​ಬಿಐ

By

Published : Sep 4, 2020, 8:53 PM IST

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚಿಲ್ಲರೆ ಸಾಲದ ಮರುಹೊಂದಿಸುವಿಕೆಯ ಪರಿವರ್ತನೆಯ ಒಂದು ವರ್ಷದ ಹಿಂದಿನಂತೆ 6 ತಿಂಗಳವರೆಗೆ ಜೋಡಣೆ ಮಾಡಿದ ನಿಧಿ ಆಧಾರಿತ ಸಾಲ ದರವನ್ನು (ಎಂಸಿಎಲ್ಆರ್) ಬದಲಾಯಿಸಿದೆ.

ಇದು ರಿಸರ್ವ್ ಬ್ಯಾಂಕ್ ಆಫ್ ರೆಪೊ ದರದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ. 12 ತಿಂಗಳ ಅವಧಿಯ ನಂತರ ಎಂಸಿಎಲ್‌ಆರ್‌ಗೆ ಜೋಡಣೆ ಮಾಡಲಾದ ಬದಲಾಗುವ ದರದ (ಫ್ಲೋಟಿಂಗ್ ರೇಟ್) ಗೃಹ ಸಾಲ ಹೊಂದಿರುವ ಸಾಲಗಾರಿಗೆ ರವಾನೆ ಆಗುತ್ತದೆ.

ಒಂದು ವರ್ಷ ಕಾಯದೆ ಬಡ್ಡಿದರವನ್ನು ಕಡಿಮೆ ಮಾಡುವ ಪ್ರಯೋಜನಗಳನ್ನು ಆನಂದಿಸಿ. ಎಸ್‌ಬಿಐ ಎಂಸಿಎಲ್‌ಆರ್ ಮರುಹೊಂದಿಸುವ ಪರಿವರ್ತೆಯನ್ನು 1 ವರ್ಷದಿಂದ 6 ತಿಂಗಳಿಗೆ ಇಳಿಸಿದೆ ಎಂದು ಎಸ್‌ಬಿಐ ಟ್ವೀಟ್ ಮಾಡಿ ತಿಳಿಸಿದೆ.

ಎಸ್‌ಬಿಐನ ಒಂದು ವರ್ಷದ ಎಂಸಿಎಲ್‌ಆರ್ ವಿರುದ್ಧ ಗೃಹ ಸಾಲಗಳನ್ನು ಮಾನದಂಡವಾಗಿ ಇರಿಸಲಾಗಿದೆ. ಪ್ರಸ್ತುತ ಅದು ಶೇ 7ರಷ್ಟಿದೆ. ಆರು ತಿಂಗಳ ಎಂಸಿಎಲ್‌ಆರ್ ಶೇ 6.95ರಷ್ಟಿದೆ. ಸಾರ್ವಜನಿಕ ವಲಯದ ಸಾಲದಾತರು ಜುಲೈನಲ್ಲಿ ಸಾಲದ ಬೇಡಿಕೆ ಹೆಚ್ಚಿಸಲು ತನ್ನ ಅಲ್ಪಾವಧಿಯ ಎಂಸಿಎಲ್ಆರ್ ದರ ಕಡಿತಗೊಳಿಸುವುದಾಗಿ ಘೋಷಿಸಿತ್ತು.

ಎಂಸಿಎಲ್ಆರ್ 5-10 ಬೇಸಿಸ್ ಪಾಯಿಂಟ್​ಗಳಿಂದ (ಶೇ 5-10 ) ಕಡಿಮೆ ಮಾಡಲಾಗಿತ್ತು. ಅಂದಿನ ಹೊಸ ದರಗಳು ಜುಲೈ 10ರಿಂದ ಜಾರಿಗೆ ಬಂದವು. ಅದು ಬ್ಯಾಂಕಿನ ಎಂಸಿಎಲ್‌ಆರ್‌ನಲ್ಲಿ ಸತತ 14ನೇ ಕಡಿತವಾಗಿತ್ತು. ಈ ಪರಿಷ್ಕರಣೆಯೊಂದಿಗೆ ಎಸ್‌ಬಿಐನ ಎಂಸಿಎಲ್‌ಆರ್ 3 ತಿಂಗಳ ಬಡ್ಡಿ ಶೇ 6.65ಕ್ಕೆ ಇಳಿಯುತ್ತದೆ. ಇದು ಬಾಹ್ಯ ಬೆಂಚ್‌ಮಾರ್ಕ್ ಆಧಾರಿತ ಸಾಲಕ್ಕೆ ಸಮನಾಗಿರುತ್ತದೆ.

ABOUT THE AUTHOR

...view details