ಲಂಡನ್: ಕೋವಿಡ್-19 ಲಸಿಕೆ ಶೀಘ್ರದಲ್ಲೇ ಸಿದ್ಧವಾಗಿ, ಸರಿಯಾದ ಪ್ರಮಾಣದಲ್ಲಿ ವಿತರಣೆ ಮಾಡಿದರೆ ಹಾಗೂ ಅದು ಸರಿಯಾಗಿ ಕೆಲಸ ಮಾಡಿದರೆ, 2021ರ ಅಂತ್ಯದ ವೇಳೆಗೆ ಶ್ರೀಮಂತ ರಾಷ್ಟ್ರಗಳು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲಿಯನೇರ್ ಬಿಲ್ ಗೇಟ್ಸ್ ಹೇಳಿದ್ದಾರೆ.
ಮುಂದಿನ ವರ್ಷದ ಅಂತ್ಯದ ವೇಳೆಗೆ ನೀವು ಸಾಮಾನ್ಯ ಸ್ಥಿತಿಗೆ ಹಿಂತಿರುಗಬಹುದು. ಅದು ಉತ್ತಮ ಸಂದರ್ಭ ಎಂದು 64 ವರ್ಷದ ಗೇಟ್ಸ್ ದಿ ವಾಲ್ ಸ್ಟ್ರೀಟ್ ಜರ್ನಲ್ ಸಿಇಒ ಕೌನ್ಸಿಲ್ಗೆ ತಿಳಿಸಿದ್ದಾರೆ.
ಈ ಲಸಿಕೆಗಳು ಯಶಸ್ವಿಯಾಗುತ್ತವೆಯೇ ಎಂದು ನಮಗೆ ಇನ್ನೂ ತಿಳಿದಿಲ್ಲ. ಈಗ ಸಾಮರ್ಥ್ಯವು ಹೆಚ್ಚಾಗಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಅಮೆರಿಕದ ಒಳಗೆ ಮತ್ತು ಯುಎಸ್ ಹಾಗೂ ಇತರ ದೇಶಗಳ ನಡುವಿನ ಹಂಚಿಕೆ ವಿವಾದ ಉನ್ನತ ಹಂತವಾಗಿದೆ ಎಂದರು.