ನವದೆಹಲಿ :ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಡೆಸಿದ್ದ ಖಾಸಗಿ ಸಂದೇಶಗಳನ್ನು ಸರ್ಚ್ ಇಂಜಿನ್ಗಳಲ್ಲಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ನಡುವೆ ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಸೇವೆ ಆ್ಯಪ್ ಮತ್ತೊಂದು ಸ್ಪಷ್ಟೀಕರಣ ನೀಡಿದೆ.
ವಾಟ್ಸ್ಆ್ಯಪ್ ತನ್ನ ಇತ್ತೀಚೆಗೆ ಪರಿಷ್ಕೃತ ಪಾಲಿಸಿಯ ಬದಲಾವಣೆಯು ಸ್ನೇಹಿತರು ಅಥವಾ ಕುಟುಂಬದೊಂದಿಗೆ ನಡೆಸಿದ್ದ ಸಂದೇಶಗಳ ಗೌಪ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಾಗಿ, ಈ ಅಪ್‌ಡೇಟ್‌ನಲ್ಲಿ ವಾಟ್ಸ್ಆ್ಯಪ್‌ನಲ್ಲಿ ವ್ಯವಹಾರ ಸಂದೇಶ ಕಳುಹಿಸುವಲ್ಲಿ ಬದಲಾವಣೆ ಒಳಗೊಂಡಿದೆ ಎಂದು ಹೇಳಿದೆ.
ಟ್ವಿಟರ್ನಲ್ಲಿ ವಾಟ್ಸ್ಆ್ಯಪ್ ಹಂಚಿಕೊಂಡ ಸ್ಪಷ್ಟನೆ
- ವಾಟ್ಸ್ಆ್ಯಪ್ ಆಗಲಿ ಅಥವಾ ಫೇಸ್‌ಬುಕ್ ಆಗಲಿ ನಿಮ್ಮ ಖಾಸಗಿ ಸಂದೇಶ ಅಥವಾ ಕರೆಗಳನ್ನು ಕೇಳಲು, ನೋಡಲು ಸಾಧ್ಯವಿಲ್ಲ
- ಪ್ರತಿಯೊಬ್ಬರೂ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ವಾಟ್ಸ್ಆ್ಯಪ್ ತನ್ನ ಬಳಿ ಇರಿಸಿಕೊಳ್ಳುತ್ತದೆ
- ನೀವು ಹಂಚಿಕೊಂಡ ಸ್ಥಳವನ್ನು ನೋಡಲು ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ಗೂ ಸಾಧ್ಯವಿಲ್ಲ.
- ವಾಟ್ಸ್ಆ್ಯಪ್ ನಿಮ್ಮ ಸಂಪರ್ಕಗಳನ್ನು ಫೇಸ್‌ಬುಕ್ ಜತೆಗೆ ಹಂಚಿಕೊಳ್ಳುವುದಿಲ್ಲ.
- ವಾಟ್ಸ್ಆ್ಯಪ್ ಗ್ರೂಪ್ಗಳು ಖಾಸಗಿಯಾಗಿ ಇರಲಿವೆ.
- ನಿಮ್ಮ ಸಂದೇಶಗಳು ಕಣ್ಮರೆಯಾಗುವಂತೆ ನೀವು ಹೊಂದಿಕೆ ಮಾಡಿಕೊಳ್ಳಬಹುದು.
- ನಿಮ್ಮ ಡೇಟಾವನ್ನು ನೀವು ಡೌನ್‌ಲೋಡ್ ಮಾಡಬಹುದು