ಹೈದರಾಬಾದ್:ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ ಆ್ಯಪಲ್ ತನ್ನ ಜನಪ್ರಿಯ ಐಫೋನ್ ಸರಣಿಯನ್ನು ಭಾರತದಲ್ಲಿ ಉತ್ಪಾದಿಸಲು ಈಗಾಗಲೇ ಒಂದು ಘಟಕ ತೆರೆದಿದೆ. ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ 2ನೇ ಅತಿದೊಡ್ಡ ಘಟಕ ತೆರೆಯಲಿದೆ ಎಂದು ತಿಳಿದುಬಂದಿದೆ.
ಆ್ಯಪಲ್ ತನ್ನ ಎರಡನೇ ಅತಿದೊಡ್ಡ ಐಫೋನ್ ಅಸೆಂಬ್ಲರ್ ಪೆಗಾಟ್ರಾನ್ ಕಾರ್ಪ್ ಅನ್ನು ಭಾರತದಲ್ಲಿ ಸ್ಥಾಪಿಸಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಕಂಪನಿಯು ಈ ವಾರ ತನ್ನ ಭಾರತೀಯ ಅಂಗಸಂಸ್ಥೆಯನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿಸಿದೆ.
ಪೆಗಾಟ್ರಾನ್ ಟೆಕ್ನಾಲಜಿ ಇಂಡಿಯಾ ಪ್ರೈ. ಲಿಮಿಟೆಡ್ ಅನ್ನು 2020ರ ಜುಲೈ 14ರಂದು ಚೆನ್ನೈನ ಕಂಪನಿಗಳ ರಿಜಿಸ್ಟ್ರಾರ್ನಲ್ಲಿ (ರೋಸಿ) ವಿದೇಶಿ ಕಂಪನಿಯ ಅಂಗಸಂಸ್ಥೆ ಎಂದು ನೋಂದಾಯಿಸಿದೆ. ಅಖಿಲೇಶ್ ಬನ್ಸಾಲ್ ಮತ್ತು ಚಿಯು ಟಾನ್ ಲಿನ್ ಅವರನ್ನು ಕಂಪನಿಯ ನಿರ್ದೇಶಕರಾಗಿ ಹೆಸರಿಸಿದೆ.