ಕರ್ನಾಟಕ

karnataka

'ಮೇಡ್​ ಇನ್​ ಇಂಡಿಯಾ', 'ಮೇಡ್​ ಫಾರ್​ ವರ್ಲ್ಡ್​'ಗಾಗಿ ರಿಲಯನ್ಸ್​ ಕಾರ್ಯೋನ್ಮುಖ: ಮುಖೇಶ್​ ಅಂಬಾನಿ

By

Published : Jul 15, 2020, 4:15 PM IST

ರಿಲಯನ್ಸ್ ಇಂಡಸ್ಟ್ರೀಸ್​ನ ಮೊದಲ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಖೇಶ್ ಅಂಬಾನಿ, 'ಮೇಡ್ ಇನ್ ಇಂಡಿಯಾ', 'ಮೇಡ್ ಫಾರ್ ಇಂಡಿಯಾ' ಮತ್ತು 'ಮೇಡ್ ಫಾರ್ ದಿ ವರ್ಲ್ಡ್' ಉತ್ಪನ್ನಗಳನ್ನು ಉತ್ತೇಜಿಸಲು ರಿಲಯನ್ಸ್ ಸ್ಟಾರ್ಟ್ ಅಪ್ಸ್​​ ಸೇರಿದಂತೆ ಇತರ ಭಾರತೀಯ ಕಂಪನಿಗಳೊಂದಿಗೆ ಕೆಲಸ ಮಾಡುತ್ತದೆ ಎಂದರು.

Reliance
ರಿಲಯನ್ಸ್​

ಮುಂಬೈ: 'ಮೇಡ್ ಇನ್ ಇಂಡಿಯಾ', 'ಮೇಡ್ ಫಾರ್ ಇಂಡಿಯಾ' ಮತ್ತು 'ಮೇಡ್ ಫಾರ್ ದಿ ವರ್ಲ್ಡ್' ಉತ್ಪನ್ನಗಳನ್ನು ಉತ್ತೇಜಿಸಲು ರಿಲಯನ್ಸ್ ಸ್ಟಾರ್ಟ್ ಅಪ್ಸ್​​ ಸೇರಿದಂತೆ ಭಾರತೀಯ ಇತರೆ ಕಂಪನಿಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಮುಖೇಶ್ ಅಂಬಾನಿ ಭರವಸೆ ನೀಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್​ನ ಮೊದಲ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಬಂಡವಾಳೀಕರಣದ ಮೂಲಕ ರಿಲಯನ್ಸ್ ಈಗ ವಿಶ್ವದ 60 ಅತಿ ದೊಡ್ಡ ಕಂಪನಿಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ರಿಲಯನ್ಸ್ ಇನ್ನೂ ಹೆಚ್ಚಿನ ಯಶಸ್ಸಿನ ಶಿಖರ ಏರಲು ಪ್ರಯತ್ನಿಸುತ್ತದೆ. ಇದರಿಂದ ನಮ್ಮ ಉದ್ಯೋಗಿಗಳು ಮತ್ತು ಷೇರುದಾರರು ಖಂಡಿತವಾಗಿಯೂ ಅದರ ಪ್ರತಿಫಲ ಪಡೆಯುತ್ತಾರೆ ಎಂದರು.

ರಿಲಯನ್ಸ್ ಅನ್ನು ವಿಶ್ವದ ಪ್ರಮುಖ ನವ ಇಂಧನ ಮತ್ತು ಹೊಸ ವಸ್ತುಗಳ ನಿರ್ಮಾಣ ಕಂಪನಿಯಾಗಿ ನಿರ್ಮಿಸಲು 15 ವರ್ಷಗಳ ದೃಷ್ಟಿಕೋನ ಇರಿಸಿಕೊಂಡಿದ್ದೇವೆ. ನ್ಯೂ ಎನರ್ಜಿ ವ್ಯವಹಾರವು ಭಾರತ ಮತ್ತು ಜಗತ್ತಿಗೆ ಬಹು ಟ್ರಿಲಿಯನ್ ಡಾಲರ್ ವಹಿವಾಟಿಗೆ ಅವಕಾಶ ನೀಡಲಿದೆ. ಜಿಯೋ ಮಾರ್ಟ್ ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇವೆ. ಜಿಯೋ ಮಾರ್ಟ್ ಕಿರಾಣಿ ಪ್ಲಾಟ್​ಫಾರ್ಮ್​ ಅನ್ನು 200 ನಗರಗಳಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ನಿತ್ಯದ ಆರ್ಡರ್​ಗಳ ಸಂಖ್ಯೆ 2.5 ಲಕ್ಷ ದಾಟಿದೆ ಎಂದರು.

ABOUT THE AUTHOR

...view details