ಕರ್ನಾಟಕ

karnataka

ETV Bharat / business

ವಾಹನೋದ್ಯಮಕ್ಕೆ ಮಂಕು.. 1500 ಉದ್ಯೋಗಿಗಳಿಗೆ ಗೇಟ್‌ಪಾಸ್​ ಕೊಟ್ಟ ಮಹೀಂದ್ರಾ!

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ವರ್ಷದ ಏಪ್ರಿಲ್ 1ರಿಂದ ಆಟೋ ತಯಾರಕಾ ಕಂಪನಿಗಳ ಸುಮಾರು 1,500 ತಾತ್ಕಾಲಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದೇ ರೀತಿಯ ನಿಧಾನಗತಿ ಮುಂದುವರಿದರೆ ಇನ್ನಷ್ಟು ಉದ್ಯೋಗಗಳ ಕಡಿತ ಹೆಚ್ಚಾಗಲಿದೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ

By

Published : Aug 20, 2019, 10:17 PM IST

ನವದೆಹಲಿ: ಭಾರತದ ಆಟೋ ಕ್ಷೇತ್ರದ ಪ್ರಮುಖ ಕಂಪನಿಯಾದ ಮಹೀಂದ್ರಾ ಅಂಡ್​​ ಮಹೀಂದ್ರಾ ತನ್ನ ಮಾರಾಟದಲ್ಲಿನ ಅಭೂತಪೂರ್ವ ಕುಸಿತದಿಂದಾಗಿ ಉದ್ಯೋಗಗಳ ಕಡಿತ ಘೋಷಿಸಿ ವಾಹನ ವಲಯದ ಪ್ರೋತ್ಸಾಹ ಪ್ಯಾಕೇಜ್​ಗಾಗಿ ಸರ್ಕಾರದತ್ತ ಮುಖ ಮಾಡಿದೆ.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ಸುದ್ದಿಗಾರರೊಂದಿಗೆ ಮಾತನಾಡಿ, ಈ ವರ್ಷದ ಏಪ್ರಿಲ್ 1ರಿಂದ ಸುಮಾರು 1,500 ತಾತ್ಕಾಲಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದೇ ರೀತಿಯ ನಿಧಾನಗತಿ ಮುಂದುವರಿದರೆ ಇನ್ನಷ್ಟು ಉದ್ಯೋಗಗಳ ಕಡಿತ ಹೆಚ್ಚಾಗಲಿದೆ ಎಂದು ಹೇಳಿದರು.

ಬಹುತೇಕ ಉದ್ಯೋಗ ನಷ್ಟದ ಭೀತಿಯು ವಾಹನ ಪೂರೈಕೆದಾರ, ವಿತರಕ ವಿಭಾಗದವರು ಎದುರಿಸುತ್ತಿದ್ದಾರೆ. ಮೂಲ ತಯಾರಿಕಾ ವಿಭಾಗದಲ್ಲಿ ಉದ್ಯೋಗ ಆತಂಕತೆ ಕಡಿಮೆ ಇದೆ ಎಂದು ತಿಳಿಸಿದರು.ಏಪ್ರಿಲ್ 1ರಿಂದ ಈವರೆಗೆ ಸುಮಾರು 1,500 (ತಾತ್ಕಾಲಿಕ ಉದ್ಯೋಗಿಗಳು) ತೆಗೆದು ಹಾಕಿದ್ದೇವೆ. ಉದ್ಯೋಗಿಗಳ ಕಡಿತತೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಿಧಾನಗತಿ ಹೀಗೆಯೇ ಮುಂದುವರಿದರೆ ಅನಿವಾರ್ಯವಾಗಿ ಉದ್ಯಗಿಗಳಿಗೆ ಗೇಟ್​ ಪಾಸ್​ ನೀಡಬೇಕಾಗುತ್ತದೆ ಎಂದರು.

ABOUT THE AUTHOR

...view details