ಕರ್ನಾಟಕ

karnataka

ETV Bharat / business

ಬೈಕ್​ ಮಾರ್ಕೆಟ್​​​​ನ ಕಾಲ ಮುಗಿಯಿತಾ?​: ಟಿವಿಎಸ್​ 'ಕೆಲಸ ರಹಿತ ದಿನ' ಜಾರಿ...ಉದ್ಯೋಗ ಕಡಿತ ಭೀತಿ

ಆಟೋಮೊಬೈಲ್​ ಉದ್ಯಮದಲ್ಲಿ ವಿರಾಮ ಅವಧಿ ಮುಂದುವರಿಯುತ್ತಿರುವುದರಿಂದ ಕೆಲಸದ ದಿನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ನೌಕರರಿಗೆ ಟಿವಿಎಸ್​ ಅಧಿಸೂಚನೆ ಮೂಲಕ ಆಗಸ್ಟ್ 16 ಮತ್ತು 17ರವರೆಗೆ ಕೆಲಸ ರಹಿತ ಎಂದೇ ತಿಳಿಸಿದೆ.

ಸಾಂದರ್ಭಿಕ ಚಿತ್ರ

By

Published : Aug 17, 2019, 9:15 AM IST

ಚೆನ್ನೈ:ಆಟೋಮೊಬೈಲ್​ ಉದ್ಯಮದ ಮಂದಗತಿಯ ಕಾರಣದಿಂದಾಗಿ ಟಿವಿಎಸ್ ಗ್ರೂಪ್‌ನ ಭಾಗವಾದ ಆಟೋ ಕಾಂಪೊನೆಂಟ್ ತಯಾರಕಾ ಲ್ಯೂಕಾಸ್ - ಟಿವಿಎಸ್ ತನ್ನ ಉದ್ಯೋಗಿಗಳಿಗೆ ಕೆಲಸ ರಹಿತ ದಿನಗಳನ್ನು ಘೋಷಿಸಿದೆ.

ಉದ್ಯಮದಲ್ಲಿ ವಿರಾಮ ಅವಧಿ ಮುಂದುವರಿಯುತ್ತಿರುವುದರಿಂದ ಕೆಲಸದ ದಿನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಟಿವಿಎಸ್​ ಅಧಿಸೂಚನೆಯ ಮೂಲಕ ಆಗಸ್ಟ್ 16 ಮತ್ತು 17ರವರೆಗೆ ಕೆಲಸ ರಹಿತ ದಿನ ಘೋಷಿಸಿದೆ.

ಉದ್ಯಮದಲ್ಲಿನ ವ್ಯವಹಾರ ಕುಸಿತದಿಂದಾಗಿ ಕೆಲಸದ ದಿನಗಳನ್ನು ಕಡಿತಗೊಳಿಸಲಾಗಿದೆ. ಮಾರುಕಟ್ಟೆಯ ಪರಿಸ್ಥಿತಿಗೆ ಇದು ಸಹಜವಾದ ನಡೆ. ನೌಕರರು ಸಂಸ್ಥೆಯ ನಿರ್ಧಾರಕ್ಕೆ ಸಹಕರಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.

ಜುಲೈನಲ್ಲಿ 2,00,790 ಪ್ಯಾಸೆಂಜರ್​ ವಾಹನಗಳು ಮಾರಾಟ ಕಂಡಿದ್ದರೆ, ಕಮರ್ಸಿಯಲ್​​ ವಾಹನಗಳ ಮಾರಾಟ 56,866 ಯೂನಿಟ್​ಗಳಾಗಿವೆ. ಮೋಟಾರ್​ಸೈಕಲ್​ ಮತ್ತು ಸ್ಕೂಟರ್​ ದರದಲ್ಲಿ ಶೇ. 16.8ರಷ್ಟು ಹಾಗೂ ಶೇ. 36ರಷ್ಟು ಇಳಿಕೆಯಾಗಿ ಕ್ರಮವಾಗಿ 1.51 ಮಿಲಿಯನ್​ ಮತ್ತು 1,22,956 ಉತ್ಪನ್ನಗಳು ಮಾರಾಟ ಕಂಡಿವೆ.

ABOUT THE AUTHOR

...view details