ಬೆಂಗಳೂರು:ಕಾಫಿ ಡೇ ಮಾಲೀಕ/ ಮಾಜಿ ಸಿಎಂ ಎಸ್. ಎಂ. ಕೃಷ್ಣ ಅಳಿಯ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಐಟಿ ಅಧಿಕಾರಿಗಳನ್ನು ದೂರಿದ್ದಾರೆ.
ಐಟಿ ಇಲಾಖೆಯ ಅಧಿಕಾರಿಗಳು ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರಿಗೆ ಏನು ಬೇಕು ಎಂಬುದು ಗೊತ್ತಿಲ್ಲ. ಅವರು ತಮ್ಮ ಕಚೇರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರು ಜರುಗಿಸುವ ಕಾನೂನು ಕ್ರಮ ವಿಭಿನ್ನವಾಗಿವೆ. ತನಿಖೆ ನಡೆಸಲು ಅವರಿಗೆ ಸ್ವಾತಂತ್ರವಿದೆ. ಆದರೆ, ದಿನನಿತ್ಯದ ತೊಂದರೆಗಳಿಂದ ಹೊರಬರಲು ಜನರಿಗೆ ಅವಕಾಶ ನೀಡಬೇಕು. ಈ ದೇಶದಲ್ಲಿ ಈಗ ಅದು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.