ಕರ್ನಾಟಕ

karnataka

ETV Bharat / business

ಜಿಯೋ ಬಳಕೆದಾರರಿಗೆ ಏ.17ರ ತನಕ 100 ನಿಮಿಷ ಕರೆ, 100 SMS ಫ್ರೀ - ಜಿಯೋ ಫೋನ್ ಬಳಕೆದಾರ

ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಚಿಲ್ಲರೆ ಅಂಗಡಿಗಳ ಮೂಲಕ ರೀಚಾರ್ಜ್ ಮಾಡುವವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯುಪಿಐ, ಎಟಿಎಂ, ಎಸ್‌ಎಂಎಸ್ ಮತ್ತು ಇತರ ಕರೆಗಳಿಗೆ ಮರುಚಾರ್ಜ್ ಮಾಡಲು ಜಿಯೋ ಪರ್ಯಾಯ ಚಾನಲ್‌ಗಳನ್ನು ಒದಗಿಸಿದೆ ಎಂದು ಕಂಪನಿ ತಿಳಿಸಿದೆ.

Jio
ಜಿಯೋ

By

Published : Mar 31, 2020, 9:29 PM IST

ಮುಂಬೈ: ರಿಲಯನ್ಸ್ ಜಿಯೋ ನೂತನ ಆಫರ್​ನೊಂದಿಗೆ ನೀಡುತ್ತಿದ್ದು, ಜಿಯೋಫೋನ್ ಬಳಕೆದಾರರಿಗೆ ಏಪ್ರಿಲ್ 17ರವರೆಗೆ 100 ನಿಮಿಷಗಳ ಉಚಿತ ಕರೆ ಮತ್ತು 100 ಉಚಿತ ಸಂದೇಶ ಸೇವೆಯನ್ನು ಒದಗಿಸುತ್ತಿದೆ.

ಇದಲ್ಲದೇ ಎಲ್ಲಾ ಜಿಯೋ ಫೋನ್ ಬಳಕೆದಾರರು ಒಳಬರುವ ಕರೆಗಳ ಪೋಸ್ಟ್ ವಾಯ್ದೆಯನ್ನು ಕಡಿತಗೊಳ್ಳದಂತೆ ಯಥಾವತ್ತಾಗಿ ಮುಂದವರಿಯಲಿದೆ ಎಂದು ತಿಳಿಸಿದೆ.

ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಚಿಲ್ಲರೆ ಅಂಗಡಿಗಳ ಮೂಲಕ ರೀಚಾರ್ಜ್ ಮಾಡುವವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯುಪಿಐ, ಎಟಿಎಂ, ಎಸ್‌ಎಂಎಸ್ ಮತ್ತು ಇತರ ಕರೆಗಳಿಗೆ ಮರುಚಾರ್ಜ್ ಮಾಡಲು ಜಿಯೋ ಪರ್ಯಾಯ ಚಾನಲ್‌ಗಳನ್ನು ಒದಗಿಸಿದೆ ಎಂದು ಕಂಪನಿ ತಿಳಿಸಿದೆ.

ಇತ್ತೀಚೆಗೆ ಟೆಲಿಕಾಂ ಮೇಜರ್ 251 ರೂ. ಮೌಲ್ಯದ 'ವರ್ಕ್ ಫ್ರಮ್ ಹೋಮ್' ಯೋಜನೆಯನ್ನು ಸಹ ಆರಂಭಿಸಿತು. 51 ದಿನಗಳ ಈ ಯೋಜನೆಯು ನಿತ್ಯ 2ಜಿಬಿ ಸೇಟಾ ಸಿಗಲಿದೆ. ಇದು ಕೇವಲ ಡೇಟಾ ರಿಚಾರ್ಜ್​ ಆಗಿದ್ದು, 64 ಕೆಬಿಪಿಎಸ್​ ವೇಗ ಹೊಂದಿದೆ. ವಾಯ್ಸ್​ ಕಾಲ್ ಮತ್ತು ಎಸ್​ಎಂಎಸ್​ ಪ್ಲಾನ್ ಹೊಂದಿಲ್ಲ.

ABOUT THE AUTHOR

...view details