ನವದೆಹಲಿ: ಭಾರತೀಯ ತೈಲ ನಿಗಮವು (ಐಒಸಿ) ದೇಶಾದ್ಯಂತ ವಿವಿಧ ಪೈಪ್‌ಲೈನ್ ಯೋಜನೆಗಳ ಕಳ್ಳತನ ತಡೆಯಲು ಡ್ರೋನ್‌ಗಳನ್ನು ಬಳಸಿಕೊಳ್ಳಲು ಸಜ್ಜಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಈ ಕ್ರಮಕ್ಕಾಗಿ ಇದ್ದ ಅಡೆತಡೆಯನ್ನು ತೆರವುಗೊಳಿಸಿದೆ ಮತ್ತು ದೆಹಲಿ ಪಾಣಿಪತ್ ಪೈಪ್‌ಲೈನ್ ಯೋಜನೆಯಲ್ಲಿ ಪ್ರಥಮವಾಗಿ ಇದರ ಅಳವಡಿಕೆಗೆ ಅನುಮತಿಸಿದೆ ಎಂದು ಐಪಿಸಿ ವಕ್ತಾರ ತಿಳಿಸಿದ್ದಾರೆ.
ತೈಲ ಕಳ್ಳತನವನ್ನು ತಡೆಗಟ್ಟಲು ಮತ್ತು ಕೆಲಸಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಿಮೋಟ್ ಆಧಾರಿತ ಏರ್‌ಕ್ರಾಫ್ಟ್ ಸಿಸ್ಟಮ್ (ಆರ್‌ಪಿಎಎಸ್) ಅಥವಾ ಡ್ರೋನ್‌ಗಳಿಗೆ ಅವಕಾಶ ನೀಡುವಂತೆ ಐಪಿಸಿ ಕಳೆದ ತಿಂಗಳು ವಾಯುಯಾನ ಸಚಿವಾಲಯಕ್ಕೆ ಪತ್ರ ಬರೆದಿತ್ತು ಎಂದು ಐಒಸಿ ಮೂಲಗಳು ತಿಳಿಸಿವೆ.