ಕರ್ನಾಟಕ

karnataka

ETV Bharat / business

ಚಿದು ಶರಣಾಗತಿ ಅರ್ಜಿ ತಿರಸ್ಕರಿಸಿದ ಕೋರ್ಟ್; 'ಚಿದಂಬರ ರಹಸ್ಯ' ಬಿಡಿಸಲು ಇಡಿ ರೆಡಿ

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರ ಬಂಧನ ಅಗತ್ಯವಾಗಿದೆ. ಅದು ಸೂಕ್ತ ಸಮಯದಲ್ಲಿ ಆಗಲಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ಚಿದಂಬರಂ

By

Published : Sep 14, 2019, 7:42 PM IST

ನವದೆಹಲಿ:ಐಎನ್​ಎಕ್ಸ್​ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಶರಣಾಗುವುದಾಗಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್​ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್​ ಅವರು ವಜಾಗೊಳಿಸಿದ್ದಾರೆ.

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರ ಬಂಧನ ಅಗತ್ಯವಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ಐಎನ್​ಎಕ್ಸ್​ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಗ್ಗೆ ಗುರುವಾರವಷ್ಟೇ ಕೋರ್ಟ್​ಗೆ ಮಾಹಿತಿ ನೀಡಿದ ಜಾರಿ ನಿರ್ದೇಶನಾಲಯ, ಚಿದಂಬರಂ ಅವರ ಬಂಧನ ಅಗತ್ಯವೆಂದು ಮನವರಿಕೆ ಮಾಡಿತು. ಇಡಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಿದಂಬರಂ ಪರ ವಕೀಲರು, 'ದುರುದ್ದೇಶಪೂರಿತವಾಗಿ ಇಡಿ ತನ್ನ ಅಭಿಪ್ರಾಯ ಮಂಡಿಸಿದೆ. ಚಿದಂಬರಂ ಅವರನ್ನು ಇನ್ನಷ್ಟು ಸತಾಯಿಸಲು ಯತ್ನಿಸುತ್ತಿದೆ' ಎಂದು ಆಪಾದಿಸಿದರು.

73 ವರ್ಷದ ಚಿದಂಬರಂ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಕಾರಣ, ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತ್ತು.

ABOUT THE AUTHOR

...view details