ಕರ್ನಾಟಕ

karnataka

ETV Bharat / business

ಇಂಡಿಗೋದ 13ನೇ ವರ್ಷ: 10 ಲಕ್ಷ ಸೀಟ್​ಗಳಿಗೆ ₹ 999, ಶೇ 20 ಕ್ಯಾಶ್​ಬ್ಯಾಕ್​ ಆಫರ್​ - ಇಂಡಿಗೋ ವಿಮಾನಯಾನ ಸಂಸ್ಥೆ

ದೇಶಿ ಮಾರ್ಗಗಳಿಗೆ ₹ 999 ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಿಗೆ ₹ 3,499 ದರ ನಿಗದಿಪಡಿಸಿದ್ದು, ಆಗಸ್ಟ್​ 4ರ ಬುಧವಾರದಿಂದ ಭಾನುವಾರದ ವರೆಗೆ ಟಿಕೆಟ್​ಗಳ ಮಾರಾಟ ನಡೆಯಲಿದೆ. ಟಿಕೆಟ್​ ಕಾಯ್ದಿರಿಸಿದ ಪ್ರಯಾಣಿಕರು ಆಗಸ್ಟ್​ 15ರಿಂದ 2020ರ ಮಾರ್ಚ್​ 31ರ ನಡುವೆ ಪ್ರಯಾಣಿಸುವ ಅವಕಾಶವಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

By

Published : Jul 31, 2019, 4:23 PM IST

ನವದೆಹಲಿ:ತನ್ನ 13ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಇಂಡಿಗೋ ವಿಮಾನಯಾನ ಸಂಸ್ಥೆ10 ಲಕ್ಷ ಪ್ರಯಾಣಿಕ ಸೀಟ್​ಗಳಿಗೆ ರಿಯಾಯಿತಿ ದರದಲ್ಲಿ ಪ್ರಯಾಣಿಕ ಟಿಕೆಟ್​ಗಳನ್ನು ಘೋಷಿಸಿದೆ.

ದೇಶಿ ಮಾರ್ಗಗಳಿಗೆ ₹ 999 ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಿಗೆ ₹ 3,499 ದರ ನಿಗದಿಪಡಿಸಿದ್ದು, ಆಗಸ್ಟ್​ 4ರ ಬುಧವಾರದಿಂದ ಭಾನುವಾರದ ವರೆಗೆ ಟಿಕೆಟ್​ಗಳ ಮಾರಾಟ ನಡೆಯಲಿದೆ. ಟಿಕೆಟ್​ ಕಾಯ್ದಿರಿಸಿದ ಪ್ರಯಾಣಿಕರು ಆಗಸ್ಟ್​ 15ರಿಂದ 2020ರ ಮಾರ್ಚ್​ 31ರ ನಡುವೆ ಪ್ರಯಾಣಿಸುವ ಅವಕಾಶವಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.

ಇಂಡಿಗೊ ಮುಖ್ಯ ವಾಣಿಜ್ಯ ಅಧಿಕಾರಿ ವಿಲಿಯಂ ಬೌಲ್ಟರ್ ಮಾತನಾಡಿ, ಇಂಡಿಗೋ 13 ವರ್ಷಗಳನ್ನು ಯಶಸ್ವಿವಾಗಿ ಪೂರ್ಣಗೊಳಿಸಿದ ಪ್ರಯುಕ್ತ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದ್ದೇವೆ. ನಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಪಾಲುದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ವಿಶೇಷ ರಿಯಾಯಿತಿಯಡಿ 56 ದೇಶಿಯ ಮತ್ತು 19 ಅಂತಾರಾಷ್ಟ್ರೀಯ ತಾಣಗಳಿಗೆ ಭೇಟಿ ನೀಡಬಹುದಾಗಿದೆ ಎಂದು ಹೇಳಿದರು.

ಪ್ರಯಾಣಿಕರು ಇಂಡಿಗೋ ಅಥವಾ ಮೊಬೈಲ್ ಆ್ಯಪ್​ನಲ್ಲಿ ಟಿಕೆಟ್​ಗಳನ್ನು ಕಾಯ್ದಿರಿಸಿ ಬ್ಯಾಂಕ್ ಆಫ್ ಬರೋಡ್​ದ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್​ ಮೂಲಕ ಹಣ ಪಾವತಿಸಿದರೆ ಶೇ 20ರಷ್ಟು ಕ್ಯಾಶ್​ಬ್ಯಾಕ್​/ ₹ 1,000 ಮರುಪಾವತಿ ಆಗಲಿದೆ. ಅಂತಾರಾಷ್ಟ್ರೀಯ ಮಾರ್ಗಗಳಿಗೆ ಯೆಸ್​ ಬ್ಯಾಂಕ್​ನಿಂದ ಟಿಕೆಟ್​ ಕಾಯ್ದಿರಿಸಿದರೇ ₹ 2,000 ಕ್ಯಾಶ್​ಬ್ಯಾಕ್ ಆಫರ್ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ABOUT THE AUTHOR

...view details