ಕರ್ನಾಟಕ

karnataka

ETV Bharat / business

ಸಿಂಗಲ್​ ಚಾರ್ಜ್​ಗೆ 452 ಕಿ.ಮೀ. ಓಡುವ 'ಕೋನಾ' ಕಾರಿಗೆ 1.58 ಲಕ್ಷ ರೂ ಕಡಿತ; ಖರೀದಿ ಹೇಗೆ?

ಎಲೆಕ್ಟ್ರಿಕ್ ಕಾರು ಬೆಲೆಯಲ್ಲಿ 1.5 ಲಕ್ಷ ರೂ. ಇಳಿಸಲು ನಿರ್ಧರಿಸಿದ್ದು, ಕೋನಾ ಎಲೆಕ್ಟ್ರಿಕ್ ಕಾರು ₹ 23.8 ಲಕ್ಷ (ಎಕ್ಸ್ ಶೋ ರೂಂ) ದರದಲ್ಲಿ ಲಭ್ಯವಾಗಲಿದೆ. ಬೆಲೆ ಕಡಿತಕ್ಕೂ ಮೊದಲು ಕೋನಾ ಕಾರಿನ ಬೆಲೆ 25.3 ಲಕ್ಷ ರೂ. ಆಗಿತ್ತು. ಪರಿಷ್ಕೃತ ದರ ಆಗಸ್ಟ್​ 1ರಿಂದ ಜಾರಿಗೆ ಬಂದಿದೆ ಎಂದು ಕಂಪನಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

By

Published : Aug 2, 2019, 5:50 PM IST

ನವದೆಹಲಿ:ಎಲೆಕ್ಟ್ರಿಕ್​ ಕಾರುಗಳ ಮೇಲಿನ ಜಿಎಸ್​ಟಿ ಇಳಿಕೆಯ ಬಳಿಕ ಕಾರು ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ದರ ಕಡಿತಗೊಳಿಸುತ್ತಿದ್ದು, ನಿನ್ನೆ ಟಾಟಾ ಟಿಗೋರ್ 80 ಸಾವಿರ ಬೆಲೆ ಇಳಿಸದ ಬೆನ್ನಲ್ಲೇ ಹ್ಯುಂಡೈ ಕೋನಾ 1.58 ಲಕ್ಷ ರೂ. ಇಳಿಕೆ ಮಾಡಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ 1.5 ಲಕ್ಷ ರೂ. ಇಳಿಸಲು ನಿರ್ಧರಿಸಿದ್ದು, ಕೋನಾ ಎಲೆಕ್ಟ್ರಿಕ್ ಕಾರು ₹ 23.8 ಲಕ್ಷ (ಎಕ್ಸ್ ಶೋ ರೂಂ) ದರದಲ್ಲಿ ಲಭ್ಯವಾಗಲಿದೆ. ಬೆಲೆ ಕಡಿತಕ್ಕೂ ಮೊದಲು ಕೋನಾ ಕಾರಿನ ಬೆಲೆ 25.3 ಲಕ್ಷ ರೂ. ಆಗಿತ್ತು. ಪರಿಷ್ಕೃತ ದರ ಆಗಸ್ಟ್​ 1ರಿಂದ ಜಾರಿಗೆ ಬಂದಿದೆ ಎಂದು ಕಂಪನಿ ತಿಳಿಸಿದೆ.

ಸಂಪೂರ್ಣವಾಗಿ ಎಲೆಕ್ಟ್ರಿಕ್​ ತಂತ್ರಜ್ಞಾನದಿಂದ ತಯಾರಿಸಲಾದ ಕೋನಾ, 136 ಬಿಎಚ್‌ಪಿ ಅಥನಾ 100 ಕೆ.ವಿ. ಎಲೆಕ್ಟ್ರಿಕಲ್‌ ಮೋಟಾರ್‌ ಹಾಗೂ 39.2 ಕೆಡಬ್ಲ್ಯುಎಚ್‌ ಬ್ಯಾಟರಿ ಹೊಂದಿದೆ. ಎಂಟು ವರ್ಷ ಅಥವಾ 1,60,000 ಕಿ.ಮೀ ವಾಯ್ದೆಯ ಬ್ಯಾಟರಿಯೂ ಒಮ್ಮೆ ಚಾರ್ಜ್​ ಮಾಡಿದ್ದರೇ 452 ಕಿ.ಮೀ ಪ್ರಯಾಣ ಮಾಡಬಹುದಾಗಿದೆ.

ಭಾರತದ ಅಧಿಕೃತ ಡಿಲರ್​ಗಳಲ್ಲಿ ಕಾರುಗಳು ಬುಕಿಂಗ್ ಆರಂಭವಾಗಿದ್ದು, ಪ್ರಮುಖ 11 ನಗರಗಳಲ್ಲಿ ಈಗಾಗಲೇ 152 ಕಾರುಗಳು ಬುಕಿಂಗ್ ಆಗಿವೆ ಎಂದು ಹ್ಯುಂಡೈ ಹೇಳಿದೆ.

ABOUT THE AUTHOR

...view details