ಕರ್ನಾಟಕ

karnataka

ETV Bharat / business

ಭಾರತ್ ಸ್ಟೇಜ್-6 ಅಪ್ಡೇಟ್‍ನೊಂದಿಗೆ ಹೋಂಡಾ ಸಿಟಿ ಕಾರು ಲಾಂಚ್​... ಬೆಲೆ, ಫೀಚರ್ ಹೇಗಿದೆ ಗೊತ್ತೆ? - ಬಿಎಸ್​ 6

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್​ (ಹೆಚ್​ಸಿಐಎಲ್​), ಸಂಪೂರ್ಣ ಬಿಎಸ್​-6 ಶ್ರೇಣಿಯ ಸೆಡನ್ ಹ್ಯುಂಡೈ ಸಿಟಿ ಕಾರು ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆಯು ₹ 9.91 ಲಕ್ಷದಿಂದ ₹ 14.31 ಲಕ್ಷದವರೆಗೆ (ದೆಹಲಿ ಎಕ್ಸ್​​ ಶೋರೂಮ್) ನಿಗದಿಪಡಿಸಿದೆ.

Honda Car
ಹೋಂಡಾ ಕಾರು

By

Published : Dec 10, 2019, 5:36 PM IST

ನವದೆಹಲಿ: ಭಾರತದಲ್ಲಿ 2020ರ ಎಪ್ರಿಲ್‌ 1ರಿಂದ ಭಾರತ್ ಸ್ಟೇಜ್-6 (ಬಿಎಸ್‌-6) ವಾಯುಮಾಲಿನ್ಯ ಪರಿಮಾಣ ನಿಯಮ ಜಾರಿಯಾಗುತ್ತಿದ್ದು, ಇದರ ಮಾನದಂಡಗಳಿಗೆ ಅನುಗುಣವಾಗಿ ಹೋಂಡಾ 'ಸಿಟಿ ಕಾರು' ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್​ (ಎಚ್​ಸಿಐಎಲ್​), ಸಂಪೂರ್ಣ ಬಿಎಸ್​-6 ಶ್ರೇಣಿಯ ಸೆಡನ್ ಹ್ಯುಂಡೈ ಸಿಟಿ ಕಾರು ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆಯು ₹ 9.91 ಲಕ್ಷದಿಂದ ₹ 14.31 ಲಕ್ಷದವರೆಗೆ (ದೆಹಲಿ ಎಕ್ಸ್​​ ಶೋರೂಮ್) ನಿಗದಿಪಡಿಸಿದೆ.

ಪೆಟ್ರೋಲ್​ ಶ್ರೇಣಿಯಲ್ಲಿ ಬಿಡುಗಡೆಯಾದ ಸಿಟಿ ಕಾರು, ಮ್ಯಾನ್ಯುವಲ್​ ಮತ್ತು ಆಟೋಮೆಟಿಕ್​ ಮಾದರಿಯಲ್ಲಿ ಲಭ್ಯ ಇದೆ. ಮುಂದಿನ ದಿನಗಳಲ್ಲಿ ಡೀಸೆಲ್ ಮಾದರಿಯ ಕಾರುಗಳನ್ನು ಪರಿಚಯಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಾರಿನ ವಿ, ವಿಎಕ್ಸ್ ಮತ್ತು ಝಡ್​ ಎಕ್ಸ್​ ರೂಪಾಂತರಗಳಲ್ಲಿ ಡಿಜಿಪ್ಯಾಡ್ 2.0 ಸುಧಾರಿತ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಿದೆ. ಇದು 17.7 ಸೆಂ.ಮೀ. ಸುಧಾರಿತ ಟಚ್​ ಸ್ಕ್ರೀನ್ ಆಡಿಯೋ, ವಿಡಿಯೋ ಮತ್ತು ನ್ಯಾವಿಗೇಷನ್ ಸಿಸ್ಟಮ್​ ಜತೆಗೆ ಆ್ಯಪಲ್ ಕಾರ್​ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮೂಲಕ ಸ್ಮಾರ್ಟ್​ ಫೋನ್​ ಸಂಪರ್ಕ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ABOUT THE AUTHOR

...view details