ನವದೆಹಲಿ: ಭಾರತದ ಸೈಬರ್ ಸೆಕ್ಯುರಿಟಿ ನೋಡಲ್ ಏಜೆನ್ಸಿ ಸಿಇಆರ್‌ಟಿ-ಇನ್, ಉನ್ನತ ಮಟ್ಟದ ಬಳಕೆದಾರರನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ಜಾಗತಿಕ ಹ್ಯಾಕಿಂಗ್ ಸಂಪೂರ್ಣ ಮಾಹಿತಿ ನೀಡುವಂತೆ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ಗೆ ನೋಟಿಸ್ ನೀಡಿದೆ.
ದುರುದ್ದೇಶಪೂರಿತ ಟ್ವೀಟ್‌ಗಳು ಮತ್ತು ಲಿಂಕ್‌ಗಳಿಗೆ ಭೇಟಿ ನೀಡಿದ ಭಾರತದ ಬಳಕೆದಾರರ ಡಾಟಾ ಮೇಲೆ ಪರಿಣಾಮ ಬೀರಿದ್ದು, ಅದರ ಸಂಪೂರ್ಣ ಮಾಹಿತಿ ನೀಡುವಂತೆ ನೋಟಿಸ್ನಲ್ಲಿ ಕೇಳಲಾಗಿದೆ ಎಂದು ಬಲ್ಲ ಮೂಲಗಳು ಪಿಟಿಐಗೆ ತಿಳಿಸಿದೆ. ಪಿಟಿಐನ ಇಮೇಲ್ ಪ್ರಶ್ನೆಗೆ ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದಾಳಿಕೋರರು ಬಳಸಿಕೊಳ್ಳುವ ದುರ್ಬಲತೆ ಮತ್ತು ದಾಳಿಯ ಮೋಡಸ್ ಒಪೆರಾಂಡಿ ಬಗ್ಗೆಯೂ ಸರ್ಕಾರ ಒತ್ತಾಯಿಸಿದೆ. ಹ್ಯಾಕಿಂಗ್ ಘಟನೆಯ ಪರಿಣಾಮವನ್ನು ತಗ್ಗಿಸಲು ಟ್ವಿಟರ್ ತೆಗೆದುಕೊಂಡ ಪರಿಹಾರ ಕ್ರಮಗಳ ವಿವರಗಳನ್ನು ಕೋರಿದೆ.
ಘಟನೆಯ ವಿವರಗಳು ಮತ್ತು ಆ ಬಳಕೆದಾರರ ಡೇಟಾದ ಮೇಲೆ ಪರಿಣಾಮ ಬೀರುವ ಜೊತೆಗೆ ಭಾರತೀಯ ಬಳಕೆದಾರರ ಸಂಖ್ಯೆ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಿಇಆರ್‌ಟಿ-ಇನ್ ಟ್ವಿಟರ್ಗೆ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಜಾಗತಿಕ ಹ್ಯಾಕ್ ನಿಂದಾಗಿ ಅಪಾರ ಸಂಖ್ಯೆಯ ಭಾರತೀಯ ಬಳಕೆದಾರರು ಹಾಗೂ ಅವರ ಡಾಟಾ ಮೇಲೆ ಪರಿಣಾಮ ಬೀರಿದೆ ಎಂಬುದು ತಿಳಿದುಬಂದಿದೆ.