ಕರ್ನಾಟಕ

karnataka

ETV Bharat / business

ಕೋವಿಡ್​ ನಿಯಂತ್ರಣಕ್ಕೆ 5,990 ಕೋಟಿ ರೂ. ಕೊಟ್ಟ ಗೂಗಲ್​ ಸಿಇಒ ಸುಂದರ್ ಪಿಚೈ - ಕೋವಿಡ್ 19 ಗೂಗಲ್ ನಿಧಿ

ಕಳೆದ ತಿಂಗಳು 25 ಮಿಲಿಯನ್‌ ಡಾಲರ್​ ನೀಡುವುದಾಗಿ ಘೋಷಿಸಿಲಾಗಿತ್ತು. ಈಗ ಅದರ ಮೊತ್ತ ಹೆಚ್ಚಿಸಲಾಗಿದೆ. ಎಸ್‌ಎಂಬಿಗಳಿಗೆ ಪರಿಹಾರ ನಿಧಿ, ಸಂಪನ್ಮೂಲಗಳ ಕುರಿತು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಒದಗಿಸುವ ಸಮುದಾಯ ಹಣಕಾಸು ಸಂಸ್ಥೆಗಳು ಮತ್ತು ಎನ್‌ಜಿಒಗಳಿಗೆ 20 ಮಿಲಿಯನ್ ಜಾಹೀರಾತು ಅನುದಾನವನ್ನು ನೀಡುತ್ತಿದ್ದೇವೆ ಎಂದು ಭಾರತೀಯ ಗೂಗಲ್​ ಸಿಇಒ ಸುಂದರ್​ ಪಿಚೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Alphabet
ಆಲ್ಫಾಬೆಟ್

By

Published : Mar 28, 2020, 10:19 PM IST

Updated : Mar 28, 2020, 11:59 PM IST

ಸ್ಯಾನ್​ ಫ್ರಾನ್ಸಿಸ್ಕೊ:ಜಾಗತಿಕ ಟೆಕ್ ದೈತ್ಯ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ, ಭಾರತೀಯ ಸುಂದರ್ ಪಿಚೈ ಅವರು ಜಾಗತಿಕ ಕೋವಿಡ್​-19 ನಿರ್ಮೂಲನೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮತ್ತು ಮಧ್ಯಮ ವ್ಯವಹಾರ (ಎಸ್​ಎಂಬಿ), ಆರೋಗ್ಯ ಸಂಸ್ಥೆ, ಸರ್ಕಾರ ಮತ್ತು ಆರೋಗ್ಯ ಕಾರ್ಯಕರ್ತರರಿಗೆ ಬೆಂಬಲಿಸಿ ಕಂಪನಿಯು 800 ಮಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ನೆರವಿಗೆ 250 ಮಿಲಿಯನ್ ಡಾಲರ್​ ಜಾಹೀರಾತಿನ ಅನುದಾನ ಒಳಗೊಂಡಿರುತ್ತದೆ. ಜಾಗತಿಕವಾಗಿ 100ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳು ಕೋವಿಡ್​-19 ಹರಡುವುದನ್ನು ತಡೆಯುವ ಬಗೆಗಿನ ಮಾಹಿತಿಗಳು ಒಳಗೊಂಡಿರಲಿದೆ.

ಕಳೆದ ತಿಂಗಳು 25 ಮಿಲಿಯನ್‌ ಡಾಲರ್​ ನೀಡುವುದಾಗಿ ಘೋಷಿಸಿಲಾಗಿತ್ತು. ಈಗ ಅದರ ಏರಿಕೆ ಮಾಡಿದ್ದಾರೆ. ಎಸ್‌ಎಂಬಿಗಳಿಗೆ ಪರಿಹಾರ ನಿಧಿ, ಸಂಪನ್ಮೂಲಗಳ ಕುರಿತು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಒದಗಿಸುವ ಸಮುದಾಯ ಹಣಕಾಸು ಸಂಸ್ಥೆಗಳು ಮತ್ತು ಎನ್‌ಜಿಒಗಳಿಗೆ 20 ಮಿಲಿಯನ್ ಜಾಹೀರಾತು ಅನುದಾನವನ್ನು ನೀಡುತ್ತಿದ್ದೇವೆ ಎಂದು ಗೂಗಲ್​ ಸಿಇಒ ಸುಂದರ್​ ಪಿಚೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯವಾಹಿನಿಯ ಹಣಕಾಸು ಸಂಸ್ಥೆಗಳಿಂದ ಕಡಿಮೆ ಕೆಳ ವರ್ಗದವರ ಮತ್ತು ಸಮುದಾಯಗಳಿಗೆ ಹಣಕಾಸಿನ ಅವಶ್ಯಕತೆ ಪೂರೈಸಲು ಅಮೆರಿಕಲ್ಲಿರುವ ಆಪರ್ಚುನಿಟಿ ಫೈನಾನ್ಸ್ ನೆಟ್‌ವರ್ಕ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಪಿಚೈ ಹೇಳಿದ್ದಾರೆ.

Last Updated : Mar 28, 2020, 11:59 PM IST

ABOUT THE AUTHOR

...view details