ಕರ್ನಾಟಕ

karnataka

By

Published : Nov 3, 2020, 5:47 PM IST

ETV Bharat / business

ರಿಲಯನ್ಸ್​-ಫ್ಯೂಚರ್ ಒಪ್ಪಂದ ತಡೆ : ಅಮೆಜಾನ್​ ಮುಂದಿನ ನಡೆಗೂ ಮುನ್ನ ಕೇವಿಯಟ್​ ಸಲ್ಲಿಸಿದ ಫ್ಯೂಚರ್​ ಗ್ರೂಪ್

ಘೋಷಿತ ಒಪ್ಪಂದ ತಡೆಹಿಡಿದು, ತನ್ನ ಪರವಾಗಿ ಮಧ್ಯಂತರ ಆಜ್ಞೆ ಪಡೆದ ಅಮೆಜಾನ್ ನಡೆಯ ಬಗ್ಗೆ ಫ್ಯೂಚರ್ ಗ್ರೂಪ್ ಸಂಸ್ಥೆಯು ದೆಹಲಿ ಹೈಕೋರ್ಟ್​ ಮೊರೆ ಹೋಗಿದೆ. ಯಾವುದೇ ರೀತಿಯ ಆದೇಶವನ್ನು ರವಾನಿಸಬಾರದು ಎಂದು ನಾಗರಿಕ ಕಾರ್ಯವಿಧಾನದ ಸಂಹಿತೆಯ 148ಎ ಕಾಯ್ದೆ ಉಲ್ಲೇಖಿಸಿ ಫ್ಯೂಚರ್ ಗ್ರೂಪ್ ಕೇವಿಯಟ್ ಅರ್ಜಿ ಸಲ್ಲಿಸಿದೆ..

Kishore Biyani
ಕಿಶೋರ್ ಬಿಯಾನಿ

ನವದೆಹಲಿ :ಮುಖೇಶ್ ಅಂಬಾನಿ ನೇತೃತ್ವದ ಆರ್‌ಐಎಲ್ ಜೊತೆಗಿನ 24,713 ಕೋಟಿ ರೂ.ಒಪ್ಪಂದದ ಕುರಿತು ಇ-ಕಾಮರ್ಸ್ ದೈತ್ಯ ಅಮೆಜಾನ್, ಯಾವುದೇ ಅರ್ಜಿ ಸಲ್ಲಿಸಿದರೆ ಅದನ್ನು ಪ್ರಶ್ನಿಸುವಂತೆ ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಗ್ರೂಪ್ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ.

ಘೋಷಿತ ಒಪ್ಪಂದ ತಡೆಹಿಡಿದು, ತನ್ನ ಪರವಾಗಿ ಮಧ್ಯಂತರ ಆಜ್ಞೆ ಪಡೆದ ಅಮೆಜಾನ್ ನಡೆಯ ಬಗ್ಗೆ ಫ್ಯೂಚರ್ ಗ್ರೂಪ್ ಸಂಸ್ಥೆಯು ದೆಹಲಿ ಹೈಕೋರ್ಟ್​ ಮೊರೆ ಹೋಗಿದೆ. ಯಾವುದೇ ರೀತಿಯ ಆದೇಶವನ್ನು ರವಾನಿಸಬಾರದು ಎಂದು ನಾಗರಿಕ ಕಾರ್ಯವಿಧಾನದ ಸಂಹಿತೆಯ 148ಎ ಕಾಯ್ದೆ ಉಲ್ಲೇಖಿಸಿ ಫ್ಯೂಚರ್ ಗ್ರೂಪ್ ಕೇವಿಯಟ್ ಅರ್ಜಿ ಸಲ್ಲಿಸಿದೆ.

ಯಾವುದೇ ವ್ಯತಿರಿಕ್ತ ಆದೇಶವನ್ನು ವಿಚಾರಣೆಗೆ ಒಳಪಡಿಸದಂತೆ ನೋಡಿಕೊಳ್ಳಲು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡುವವರಿಂದ ಕೇವಿಯಟ್ ಸಲ್ಲಿಸಲಾಗುತ್ತದೆ. ಫ್ಯೂಚರ್ ಗ್ರೂಪ್ ಸಂಸ್ಥೆಯು ಈಗಾಗಲೇ ಕೇವಿಯಟ್ ಅರ್ಜಿಯ ಪ್ರತಿಯನ್ನು ಅಮೆಜಾನ್‌ಗೆ ನೀಡಿದೆ.

ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಯಾವುದೇ ಅರ್ಜಿ ಅಥವಾ ಪ್ರಸ್ತಾವಿತ ಪ್ರತಿವಾದಿ/ ಕೇವಿಯೇಟರ್ ವಿರುದ್ಧ ಅರ್ಜಿ ಸಲ್ಲಿಸುವ ಮೊದಲು ಕನಿಷ್ಠ 48 ಗಂಟೆಗಳ ನೋಟಿಸ್ ನೀಡುವಂತೆ ನಿಮ್ಮನ್ನು ಕೋರಲಾಗಿದೆ ಎಂದು ಫ್ಯೂಚರ್ ಗ್ರೂಪ್ ಸಂಸ್ಥೆ ಅಮೆಜಾನ್​ಗೆ ಕೇವಿಯಟ್ ಪ್ರತಿ ಕಳುಹಿಸಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಅಮೆಜಾನ್ ನಿರಾಕರಿಸಿದೆ.

ABOUT THE AUTHOR

...view details