ಕರ್ನಾಟಕ

karnataka

ETV Bharat / business

ಟ್ರೈನ್​- 18 ಯೋಜನೆಯಲ್ಲಿ ಚೀನಿ ಕಂಪನಿಗಳಿಗೆ ಅನುಮತಿಸಬೇಡಿ: ಸಿಎಐಟಿ

ಭಾರತೀಯ ರೈಲ್ವೆಯ ಟ್ರೈನ್ 18 ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಕರೆಯ ಒಂದು ಭಾಗವಾಗಿದೆ. ಈ ರೈಲ್ವೆ ಯೋಜನೆಗೆ ಚೀನಾದ ಕಂಪನಿಯನ್ನು ಪರಿಗಣಿಸದಿರುವುದು ಹೆಚ್ಚು ಸೂಕ್ತವಾಗಿದೆ. ಶಾರ್ಟ್‌ಲಿಸ್ಟ್ ಮಾಡಲಾಗಿರುವ ಭಾರತೀಯ ಕಂಪನಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ವ್ಯಾಪಾರ ಮುಖಂಡರು ಮನವಿ ಮಾಡಿದ್ದಾರೆ.

Train
ರೈಲ್ವೆ

By

Published : Jul 11, 2020, 5:49 PM IST

ನವದೆಹಲಿ: ಭಾರತೀಯ ಸೆಮಿ ಸ್ಪೀಡ್​ ರೈಲು ಯೋಜನೆಗೆ ಜಾಗತಿಕ ಟೆಂಡರ್‌ನಲ್ಲಿ ಚೀನಾದ ಸಂಸ್ಥೆಗಳು ಭಾಗವಹಿಸಲು ಅವಕಾಶ ನೀಡಬಾರದು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕೇಂದ್ರವನ್ನು ಒತ್ತಾಯಿಸಿದೆ.

ಏಷ್ಯಾದ ಎರಡು ದೈತ್ಯರ ನಡುವೆ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ನಡುವೆ ಚೀನಿ ಉತ್ಪನ್ನಗಳ ಬಹಿಷ್ಕಾರ ಮತ್ತು ಸೇವೆಗಳ ಕಡಿತದ ಅಭಿಯಾನದ ಭಾಗವಾಗಿ ಈ ಆಗ್ರಹ ಕೇಳಿಬಂದಿದೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಕಳುಹಿಸಿದ ಪತ್ರದಲ್ಲಿ, ಸಿಎಐಟಿ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್​ಆರ್​ಸಿ ಕಾರ್ಪೊರೇಷನ್​ಗೆ ಸೆಮಿ- ಸ್ಪೀಡ್​ನ ದೇಶಿಯ ಟ್ರೈನ್​ 18 ಯೋಜನೆಗೆ ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿತು.

44 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಯೋಜನೆಯ ಒಟ್ಟು ಮೌಲ್ಯ 1,500 ಕೋಟಿ ರೂ.ಯಷ್ಟಿದೆ ಎಂದು ಒಕ್ಕೂಟ ಹೇಳಿದೆ.

ಭಾರತೀಯ ರೈಲ್ವೆಯ ಈ ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಕರೆಯ ಒಂದು ಭಾಗವಾಗಿದೆ. ಈ ರೈಲ್ವೆ ಯೋಜನೆಗೆ ಚೀನಾದ ಕಂಪನಿಯನ್ನು ಪರಿಗಣಿಸದಿರುವುದು ಹೆಚ್ಚು ಸೂಕ್ತವಾಗಿದೆ. ಶಾರ್ಟ್‌ಲಿಸ್ಟ್ ಮಾಡಲಾಗಿರುವ ಭಾರತೀಯ ಕಂಪನಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ವ್ಯಾಪಾರ ಮುಖಂಡರು ಮನವಿ ಮಾಡಿದ್ದಾರೆ.

ABOUT THE AUTHOR

...view details