ಕರ್ನಾಟಕ

karnataka

ETV Bharat / business

'ನಾವು ನಾಚಿಕೆ ಪಡುವಂತಹ ಒಂದು ಕೆಲಸ ಮಾಡಿದ್ದೇವೆ': ರತನ್ ಟಾಟಾ ಬೇಸರದಿಂದ ಹೀಗೆ ಹೇಳಿದ್ದೇಕೆ? - ರತನ್ ಟಾಟಾ

ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ನಮಗೆ ಹೆಮ್ಮೆ ಇದ್ದರೆ, ನಾವು ನಗರಗಳಿಗೆ ಏನು ಮಾಡಿದ್ದೇವೆ ಎಂಬುದರ ಬಗ್ಗೆ ನಾಚಿಕೆಪಡಬೇಕು. ಸಾರ್ವಜನಿಕವಾಗಿ ನಮ್ಮ ಇಮೇಜ್​ ರೂಪಿಸುವ ಯೋಜನೆಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದೇವೆ. ಉಳಿದವುಗಳನ್ನು ಮರೆಮಾಚಲು ಪ್ರಯತ್ನಿಸಿದ್ದೇವೆ. ಅದಕ್ಕಾಗಿ ಜನರು ನಮ್ಮನ್ನು ಟೀಕಿಸಿದಾಗ ನಾನು ಮನನೊಂದಿದ್ದೇನೆ ಎಂದು ರತನ್ ಟಾಟಾ ಹೇಳಿದರು.

Noted industrialist Ratan Tata
ರತನ್ ಟಾಟಾ

By

Published : Apr 20, 2020, 11:33 PM IST

ನವದೆಹಲಿ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು, ನಗರ ಪ್ರದೇಶಗಳಲ್ಲಿ ಕೊಳೆಗೇರಿಗಳು ಸೃಷ್ಟಿ ಆಗಿದ್ದಕ್ಕೆ ಡೆವಲಪರ್ ಹಾಗೂ ಆರ್ಕಿಟೆಕ್ಟ್​ಗಳ ವಿರುದ್ಧ ಹರಿಹಾಯ್ದರು.

ಮಾರಕ ಕೋವಿಡ್ -19 ಸಾಂಕ್ರಾಮಿಕ ರೋಗವು ವೇಗವಾಗಿ ಹರಡಲು ಸ್ಲಮ್​ಗಳು ಕೂಡ ಪ್ರಮುಖ ಕಾರಣ ಎಂಬುದು ರತನ್ ಅವರ ಅಭಿಪ್ರಾಯವಾಗಿದೆ. 'ನಗರಗಳಲ್ಲಿ ದೊಡ್ಡ ಕೊಳೆಗೇರಿಗಳನ್ನು ಸೃಷ್ಟಿಸಲು ನಗರದ ನಿರ್ಮಾಣಕಾರರು (ಡೆವಲಪರ್​) ನಾಚಿಕೆಪಡಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೈಗೆಟುಕುವ ದರದಲ್ಲಿ ವಸತಿ ನಿರ್ಮಾಣ ಮಾಡದೇ ಇರುವುದು. ಕೊಳೆಗೇರಿ ನಿರ್ಮೂಲನೆ ಆಗದಿರುವುದು ಆಶ್ಚರ್ಯಕರವಾದ ಸಂಘರ್ಷದ ವಿಷಯಗಳಾಗಿವೆ. ಕೊಳೆಗೇರಿಗಳನ್ನು ಒಂದು ಕಡೆ 20 - 30 ಮೈಲಿ ದೂರದಲ್ಲಿರುವ ಇತರ ಸ್ಥಳಗಳಿಗೆ ಸ್ಥಳಾಂತರಿಸುವ ಮೂಲಕ ಸ್ಲಮ್​ಗಳನ್ನು ಸೂಕ್ತವಲ್ಲದ ಜೀವನ ಪರಿಸ್ಥಿತಿಗಳಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದ್ದೇವೆ. ಇನ್ನೊಂದೆಡೆ ಬೇರು ಸಹಿತವಾಗಿ ಜನರಿಗೆ ಉದ್ಯೋಗವಿಲ್ಲ ಎಂದರು.

ಕೊಳೆಗೇರಿ ನಿಂತಿದ್ದ ಸ್ಥಳದಲ್ಲಿ ಹೆಚ್ಚಿನ ಮೌಲ್ಯದ ವಸತಿ ಘಟಕಗಳು ತಲೆ ಎತ್ತುತ್ತಿವೆ. ಇವು ಸ್ಲಮ್​ಗಳನ್ನು ಅಭಿವೃದ್ಧಿಯ ಅವಶೇಷಗಳನ್ನಾಗಿ ಮಾಡಿವೆ ಎಂದು ಕಾರ್ಪಿನಿ ಆಯೋಜಿಸಿದ ಆನ್‌ಲೈನ್ ಸಂವಾದದಲ್ಲಿ ರತನ್​ ಟಾಟಾ ಅವರು ಮಾತನಾಡಿದರು.

ಯಾವಾಗಲೂ ಆರ್ಕಿಟೆಕ್ಟ್​ ಆಗಲು ಬಯಸುವ ಟಾಟಾ, ಬಿಲ್ಡರ್‌ ಮತ್ತು ಆರ್ಕಿಟೆಕ್ಟರ್​ಗಳು ದೊಡ್ಡದಾದ ಕೊಳೆಗೇರಿಗಳನ್ನು ನಿರ್ಮಿಸಿದ್ದಾರೆ. ಅವು ಸಾಕಷ್ಟು ಶುದ್ಧ ಗಾಳಿ ಆಗಲಿ, ನೈರ್ಮಲ್ಯವಾಗಲಿ ಅಥವಾ ತೆರೆದ ಸ್ಥಳವಕಾಶವನ್ನು ಸಹ ಹೊಂದಿಲ್ಲ ಎಂದರು.

ಡೆವಲಪರ್‌ಗಳಿಗೆ ಹೆಚ್ಚಿನ ಲಾಭವು ಒಮ್ಮೆ ಕೊಳೆಗೇರಿ ಆಗಿದ್ದ ಪ್ರದೇಶಗಳಿಂದಲೇ ಬಂದಿದೆ. ಹೆಚ್ಚಿನ ಮೌಲ್ಯದ ವಸತಿಗಳು ಅಲ್ಲಿಯೇ ನಿರ್ಮಾಣ ಆಗಿವೆ. ಕೋವಿಡ್​ 19 ಹಬ್ಬುವಿಕೆಯಲ್ಲಿ ಏನಾಗಿದೆ ಎಂದು ನಾನು ಭಾವಿಸುತ್ತೇನೆ. ಮೊದಲ ಬಾರಿಗೆ ನಾವು ನಿರ್ಮಿಸಿದ ಕಡಿಮೆ ಮೌಲ್ಯದ ಕಟ್ಟಡಗಳ ಹತ್ತಿರದಲ್ಲಿ ಈಗ ವೈರಸ್ ಹರಡಲು ಕಾರಣವಾಗಿದೆ ಎಂದು ಹೇಳಿದರು.

ಸಾಕಷ್ಟು ಶುದ್ಧ ಗಾಳಿ, ಸಾಕಷ್ಟು ತೆರೆದ ಸ್ಥಳಾವಕಾಶ ಮತ್ತು ನಿಮ್ಮ ಕೆಲಸದಿಂದ ಕಿತ್ತುಹಾಕಿರುವ ಸಮಸ್ಯೆಗಳಿಂದಾಗಿ ಕೊಳೆಗೇರಿಗಳು ಎಲ್ಲರೂ ಸೃಷ್ಟಿಸಿದ್ದ ಸಮಸ್ಯೆ ಎಂಬುದನ್ನು ಈ ಸಾಂಕ್ರಾಮಿಕ ರೋಗ ಒತ್ತಿಹೇಳಿದೆ ಎಂದು 82 ವರ್ಷದ ಉದ್ಯಮಿ ಅಸಮಾಧಾನ ವ್ಯಕ್ತಪಡಿಸಿದರು.

ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ನಮಗೆ ಹೆಮ್ಮೆ ಇದ್ದರೆ, ನಾವು ನಗರಗಳಿಗೆ ಏನು ಮಾಡಿದ್ದೇವೆ ಎಂಬುದರ ಬಗ್ಗೆ ನಾಚಿಕೆಪಡಬೇಕು. ಸಾರ್ವಜನಿಕವಾಗಿ ನಮ್ಮ ಇಮೇಜ್​ ರೂಪಿಸುವ ಯೋಜನೆಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದೇವೆ. ಉಳಿದವುಗಳನ್ನು ಮರೆಮಾಚಲು ಪ್ರಯತ್ನಿಸಿದ್ದೇವೆ. ಅದಕ್ಕಾಗಿ ಜನರು ನಮ್ಮನ್ನು ಟೀಕಿಸಿದಾಗ ನಾನು ಮನನೊಂದಿದ್ದೇನೆ ಎಂದು ರತನ್ ಟಾಟಾ ಹೇಳಿದರು.

ABOUT THE AUTHOR

...view details