ಕರ್ನಾಟಕ

karnataka

ETV Bharat / business

ಕೊರೊನಾ ಸಮರಕ್ಕಾಗಿ ವರ್ಷದ ಶೇ 30% ವೇತನ ತ್ಯಜಿಸಿದ ಚುನಾವಣಾ ಆಯೋಗದ ಮುಖ್ಯಸ್ಥರು - ಸಿಇಸಿ

ಕೊರೊನಾ ವೈರಸ್ ವಿರುದ್ಧದ ಯುದ್ಧ ಎದುರಿಸಲು ಅಧಿಕಾರಿಗಳು, ಸಂಘ- ಸಂಸ್ಥೆಗಳು, ಉದ್ಯಮಿಗಳು, ಜನ ಸಾಮಾನ್ಯರು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ. ಇದನ್ನು ಗಮನಿಸಿದ ಚುನಾವಣಾ ಆಯೋಗದ ಉನ್ನತಾಧಿಕಾರಿಗಳು ಸರ್ಕಾರದ ಮೇಲೆ ಬೀಳುವ ತಮ್ಮ ಸಂಬಳದ ಹೊರೆಯನ್ನು ಈ ಮೂಲಕ ಕಡಿಮೆ ಮಾಡಿದ್ದಾರೆ.

Election Commission
ಭಾರತದ ಚುನಾವಣೆ ಆಯೋಗ

By

Published : Apr 13, 2020, 3:08 PM IST

ನವದೆಹಲಿ:ಚುನಾವಣಾ ಆಯೋಗದ ಉನ್ನತ ಹುದ್ದೆಯ ಮೂವರು ಮುಖ್ಯಸ್ಥರು, ಖಜಾನೆ ಮೇಲಿನ ಹೊರೆ ತಗ್ಗಿಸುವ ಉದ್ದೇಶದಿಂದ 2020ರ ಏಪ್ರಿಲ್ 1ರಿಂದ ಒಂದು ವರ್ಷದವರೆಗೆ ತಮ್ಮ ಮೂಲ ವೇತನದಲ್ಲಿ ಶೇ 30ರಷ್ಟು ಕಡಿತ ಮಾಡಿಕೊಳ್ಳುವುದಾಗಿ ಸ್ವಯಂಪ್ರೇರಿತರಾಗಿ ಘೋಷಿಸಿಕೊಂಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಮತ್ತು ಇಬ್ಬರು ಚುನಾವಣಾ ಆಯುಕ್ತ ಅಶೋಕ್ ಲವಾಸಾ ಮತ್ತು ಸುಶೀಲ್ ಚಂದ್ರ ಅವರು ತಮ್ಮ ಸಂಬಳವನ್ನು ಭಾರತದ ಏಕೀಕೃತ ನಿಧಿಯಿಂದ ಪಡೆಯುತ್ತಾರೆ.

ಕೊರೊನಾದಂತಹ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಬೇಕಿದೆ. ಸಾರ್ವಜನಿಕ ಆರೋಗ್ಯ ಹಾಗೂ ರಾಷ್ಟ್ರೀಯ ಆರ್ಥಿಕತೆಯ ಮೇಲೆ ಅದರ ಪ್ರಭಾವ ಬೀರದಂತೆ ಸಮರ್ಪಕವಾಗಿ ನಿರ್ವಹಿಸಲು ಸದೃಢವಾಗಿ ಕೆಲಸ ಮಾಡಬೇಕಿದೆ. ಈ ಮಹತ್ತರ ಕಾರ್ಯದಲ್ಲಿ ಸರ್ಕಾರ ಇತರ ಏಜೆನ್ಸಿಗಳು ತೊಡಗಿಸಿಕೊಂಡಿದೆ. ಚುನಾವಣಾ ಆಯೋಗ ಸಹ ಸಹಕಾರ ನೀಡಲಿದೆ ಎಂದು ಹೇಳಿದೆ.

2020ರ ಏಪ್ರಿಲ್ 1ರಿಂದ ಆರಂಭವಾಗುವ ಒಂದು ವರ್ಷದ ಅವಧಿಗೆ ಸಿಇಸಿ ಮತ್ತು ಇಬ್ಬರು ಇಸಿಗಳಿಗೆ ಭಾರತದ ಚುನಾವಣಾ ಆಯೋಗವು ನೀಡುವ ಮೂಲ ವೇತನದಲ್ಲಿ ಶೇ 30ರಷ್ಟು ಸ್ವಯಂಪ್ರೇರಿತವಾಗಿ ಕಡಿತಗೊಳಿಸುವ ರೂಪದಲ್ಲಿ ದೇಣಿಗೆ ನೀಡಲು ಆಯೋಗ ನಿರ್ಧರಿಸಿದೆ.

ಮಾರಣಾಂತಿಕ ವೈರಸ್ ದೇಶಾದ್ಯಂತ ಇದುವರೆಗೆ 308 ಜನರನ್ನು ಬಲಿ ತೆಗೆದುಕೊಂಡುದ್ದು, 8,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.

ABOUT THE AUTHOR

...view details