ಕರ್ನಾಟಕ

karnataka

ETV Bharat / business

15,000 ಸಿಬ್ಬಂದಿಗೆ ಗೇಟ್​ ಪಾಸ್​ ಕೊಟ್ಟ ಆಕ್ಸಿಸ್ ಬ್ಯಾಂಕ್... 30,000 ನೌಕರರ ನೇಮಕ

ಆಕ್ಸಿಸ್​ ಬ್ಯಾಂಕ್ ವೇಗವಾಗಿ ತನ್ನ ಸೇವಾ ಪರದೆಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಕಳೆದ ವರ್ಷ ಹೆಚ್ಚಿನ ಸಂಖ್ಯೆಯ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಆಕ್ಸಿಸ್ ಬ್ಯಾಂಕ್ ಮತ್ತು ಅಂಗಸಂಸ್ಥೆಗಳಲ್ಲಿ  25,000ದಿಂದ 30,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ದಹಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Axis Bank
ಆಕ್ಸಿಸ್ ಬ್ಯಾಂಕ್

By

Published : Jan 10, 2020, 4:36 AM IST

ಮುಂಬೈ: ಕಳೆದ ಒಂಬತ್ತು ತಿಂಗಳಲ್ಲಿ ಸುಮಾರು 15,000 ಉದ್ಯೋಗಿಗಳು ಆಕ್ಸಿಸ್​ ಬ್ಯಾಂಕ್​ನಿಂದ ಹೊರನಡೆದಿದ್ದು, ಮುಂದಿನ ದಿನಗಳಲ್ಲಿ ಹೊಸದಾಗಿ 30,000 ಉದ್ಯೋಗಿಗಳನ್ನು ಶ್ರೇಣಿ- II ಮತ್ತು IIIನೇ ವರ್ಗದ ವಿಭಾಗದಲ್ಲಿ ನೇಮಿಸಿಕೊಳ್ಳಲಿದೆ.

ತಂತ್ರಜ್ಞಾನ ಮತ್ತು ಹೊಸ ಕೌಶಲ್ಯಗಳು ಹೊಂದಿರುವ ಉದ್ಯೋಗಿಗಳತ್ತ ಬ್ಯಾಂಕ್ ಗಮನಹರಿಸುತ್ತಿದೆ. ಉದ್ಯೋಗಿಗಳ ನಿರ್ಗಮನ ನಿತ್ಯದ ಸೇವೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ತಡೆಯಲು ಹೊಸಬರ ನೇಮಕಾತಿಗೆ ಬ್ಯಾಂಕ್​ ಮುಂದಾಗಲಿದೆ ಎಂದು ಉದ್ಯಮದೊಳಗಿನ ಮೂಲಗಳು ತಿಳಿಸಿವೆ.

ನಿವ್ವಳ ಆಧಾರದ ಮೇಲೆ ಒಂದು ಸಮಯದಲ್ಲಿ ಸುಮಾರು 75,000 ಜನರಿಗೆ ಉದ್ಯೋಗ ನೀಡಿದ್ದ ಬ್ಯಾಂಕ್, ಏಪ್ರಿಲ್​ನಿಂದ 2019ರ ಡಿಸೆಂಬರ್ ನಡುವೆ ಸುಮಾರು 12,800 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಏಪ್ರಿಲ್‌ 17 ರಿಂದ 2019ರ ಡಿಸೆಂಬರ್​ರವರೆಗೆ ಸಿಬ್ಬಂದಿ ಸಂಖ್ಯೆಯಲ್ಲಿ ಶೇ 19ರಷ್ಟು ಏರಿಕೆಯಾಗಿದೆ.

ಆಕ್ಸಿಸ್​ ಬ್ಯಾಂಕ್ ವೇಗವಾಗಿ ತನ್ನ ಸೇವಾ ಪರದೆಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಕಳೆದ ವರ್ಷ ಹೆಚ್ಚಿನ ಸಂಖ್ಯೆಯ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಆಕ್ಸಿಸ್ ಬ್ಯಾಂಕ್ ಮತ್ತು ಅಂಗಸಂಸ್ಥೆಗಳಲ್ಲಿ 25,000ದಿಂದ 30,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ದಹಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details