ನವದೆಹಲಿ: ಕಳೆದ ಒಂದು ದಶಕದಲ್ಲಿ ಭಾರತೀಯ ಉತ್ಪಾದನೆಯ ಯಶಸ್ಸಿನ ಕಥೆಗಳಲ್ಲಿ ಕಾಣಿಸಿಕೊಂಡಿದ್ದ ಆಟೋ ವಲಯವು 2020ರ ವರ್ಷದಲ್ಲಿ ಅಗ್ನಿಕುಂಡ ಹಾದು ಬಂದಿದೆ.
ಗ್ರಾಹಕರ ಬೇಡಿಕೆಯ ಕೊರತೆ ಮತ್ತು ಮೂಲಸೌಕರ್ಯ ಕೆಲಸಗಳ ಕುಸಿತದಿಂದಾಗಿ ಆಟೋಮೊಬೈಲ್ ಉದ್ಯಮವು 2019ರಲ್ಲಿ ಮಾರಾಟದ ಬೆಳವಣಿಗೆಯಲ್ಲಿ ಸ್ಥಿರವಾದ ಕುಸಿತ ಕಂಡಿತ್ತು. ಮರುವರ್ಷದಲ್ಲಿ ಗಾಯದ ಮೇಲೆ ಬರ ಎಂಬಂತೆ ಕೊರೊನಾ ಹಾಗೂ ಲಾಕ್‌ಡೌನ್ ಉದ್ಯಮವನ್ನೇ ಹೈರಾಣು ಮಾಡಿತು.
2019ರ ಅಂತ್ಯದ ಬಳಿಕ ಹೊಸ ವರ್ಷದಲ್ಲಿ ಪುನರುಜ್ಜೀವನವನ್ನು ಉದ್ಯಮ ನಿರೀಕ್ಷಿಸುತ್ತಿತ್ತು. ಆದರೆ, ಕೊರೊನಾ ವೈರಸ್ ಸಾಂಕ್ರಾಮಿಕವು ಎಲ್ಲ ಭರವಸೆಗಳನ್ನು ನಾಶಪಡಿಸಿತು. ಹಿಂದೆಂದೂ ಕಾಣದ ಅವ್ಯವಸ್ಥೆಯಿಂದ ವಾಹನ ತಯಾರಕರು ಕಂಗಾಲಾದರು. ಇದರಿಂದ ಎಲ್ಲಾ ನಿರೀಕ್ಷೆ, ದೃಷ್ಟಿಕೋನ ಮತ್ತು ಯೋಜನೆ ತಲೆಕೆಳಗಾದವು.
ಈ ವರ್ಷದ ಉದ್ದಕ್ಕೂ ಕೆಲವು ತಯಾರಕರು ಸೋತರೇ ಮತ್ತೆ ಕೆಲವರು ಗೆಲುವಿನ ನಗೆ ಬೀರಿದರು. ಕೊರೊನಾ ವರ್ಷದಲ್ಲಿ ಆಟೋಮೊಬೈಲ್ ಬೆಳವಣಿಗೆ ಹೇಗಾಯಿತು ಎಂಬುದರ ಸಂಕ್ಷೀಪ್ತ ನೋಟ ಇಲ್ಲಿದೆ.
ಮಾರಾಟದ ಮೇಲೆ ಲಾಕ್‌ಡೌನ್ ಸವಾರಿ
ಕೋವಿಡ್ ಬಾಧಿಸುವ ಮುನ್ನ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದ ಭಾರತ್ ಸ್ಟೇಜ್ (ಬಿಎಸ್) VI ನಿಯಮಳಿಗೆ ಹೊಂದಿಕೊಳ್ಳಲು ಆಟೋ ವಲಯವು ಹೆಣಗಾಡುತ್ತಿತ್ತು. ಇಂಜಿನ್ ಮೇಲ್ದರ್ಜೆ ಏರಿಸುವಂತಹ ಪ್ರಯಾಸದ ಕೆಲಸದಿಂದ ಉದ್ಯಮವನ್ನು ಬಿಎಸ್-VI ಕಂಪನಿಗಳ ಷೇರುಗಳನ್ನು ದಿವಾಳಿಯಾಗಿಸಲು ಮುಂದಾಗಿತ್ತು. ತತ್ಪರಿಣಾಮ ಮಾರಾಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿತ್ತು. ಇದೇ ವೇಳೆ ಲಾಕ್‌ಡೌನ್ ಘೋಷಣೆಯಾಗಿ ಉದ್ಯಮವನ್ನೇ ಸ್ಥಗಿತಗೊಳಿಸಿತು.
ಲಾಕ್‌ಡೌನ್‌ನ ಆರಂಭಿಕ ವಾರಗಳಲ್ಲಿ ವಾಹನ ತಯಾರಿಕೆ ಹಠಾತ್ತನೆ ನಿಂತು, ಡೀಲರ್ ಶೋ ರೂಂಗಳೆಲ್ಲ ಬಾಗಿಲು ಮುಚ್ಚಿದವು. ದೇಶೀಯ ಮತ್ತು ಅಂತಾರಾಷ್ಟ್ರೀಯ ಸರಬರಾಜು ಕಾರ್ಯಾಚರಣೆ ನಿಂತಿತು. ಉತ್ಪಾದನಾ ಜಾಲದ ಸಂಪೂರ್ಣ ಸರಪಳಿ ಕಳಚಿ ಬಿತ್ತು. ಲಾಜಿಸ್ಟಿಕ್ಸ್, ವಲಸೆ ಕಾರ್ಮಿಕರ ವಾಪಸಾತಿ ವಿಳಂಬದಿಂದಾಗಿ ಕಾರ್ಯಪಡೆ ಮತ್ತು ಮಾರಾಟದ ಕೊರತೆಯಿಂದ ಉಂಟಾಗಿ ದ್ರವ್ಯತೆ ಸಮಸ್ಯೆಗಳು ಉದ್ಭವಿಸಿದವು.
ಇದನ್ನೂ ಓದಿ: ಜ.1ರಿಂದ ಫಾಸ್ಟ್ಟ್ಯಾಗ್ ಕಡ್ಡಾಯ: ಬೆರಳ ತುದಿಯಲ್ಲಿ ಪಾವತಿ, ನೋಂದಣಿಯ ಕಂಪ್ಲೀಟ್ ಮಾಹಿತಿ ಹೀಗಿದೆ
ರಾಜ್ಯಸಭೆಗೆ ಇತ್ತೀಚೆಗೆ ಸಲ್ಲಿಸಿದ ಸಂಸದೀಯ ಸಮಿತಿಯ ವರದಿಯ ಪ್ರಕಾರ, ಲಾಕ್ ಡೌನ್ ಸಮಯದಲ್ಲಿ ವಾಹನ ವಲಯವು ದಿನಕ್ಕೆ 2,300 ಕೋಟಿ ರೂ. ನಷ್ಟ ಅನುಭವಿಸಿದೆ. ಅಂದಾಜು 3.5 ಲಕ್ಷ ಉದ್ಯೋಗ ನಷ್ಟವಾಗಿದೆ.
ಸೆಪ್ಟೆಂಬರ್‌ನಿಂದ ಅನ್‌ಲಾಕ್ ಆರಂಭವಾಗಿ ಹಬ್ಬ ಮತ್ತು ವಿವಾಹದ ಋತುವಿನಲ್ಲಿ ಉತ್ಪಾದನೆ, ದೇಶೀಯ ಮಾರಾಟ ಮತ್ತು ರಫ್ತುಗಳ ಪ್ರವೃತ್ತಿ ಸುಧಾರಣೆಯ ಲಕ್ಷಣಗಳನ್ನು ಪ್ರದರ್ಶಿಸಿದವು. ಎಲ್ಲ ವಿಭಾಗಗಳ ಪೈಕಿ ಟ್ರ್ಯಾಕ್ಟರ್, ಪ್ರಯಾಣಿಕ ಮತ್ತು ದ್ವಿಚಕ್ರ ವಾಹನಗಳು ಅಲ್ಪ ಬೆಳವಣಿಗೆ ಕಂಡವು. ನಿಧಾನಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ವಾಣಿಜ್ಯ ವಾಹನಗಳ ಬೇಡಿಕೆ ನೆಲ ಬಿಟ್ಟು ಮೇಲೆಳಲಿಲ್ಲ. ತ್ರಿಚಕ್ರ ವಾಹನಗಳು ಗರಿಷ್ಠ ಪ್ರಮಾಣದಲ್ಲಿ ಕ್ಷೀಣಿಸಿತು
ಎಲೆಕ್ಟ್ರಿಕ್ ವಾಹನಗಳತ್ತ ಒಲವು
ನಾನಾ ಕಾರು ತಯಾರಕರು ಮತ್ತು ಹೊಸ ಸರ್ಕಾರದ ನೀತಿಗಳ ಹೊಸ ಉತ್ಪನ್ನ ಬಿಡುಗಡೆ ಘೋಷಣೆಯೊಂದಿಗೆ 2019ರಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಎಲೆಕ್ಟ್ರಿಕ್ ವೆಹಿಕಲ್ (ಇವಿ), ಉದ್ಯಮಕ್ಕೆ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿತು. ಭಾರತದಲ್ಲಿ ಇವಿ ಉದ್ಯಮ ಉತ್ತೇಜಿಸಲು ಮೂಲಸೌಕರ್ಯ ಅಭಿವೃದ್ಧಿಪಡಿಸುವತ್ತ ಸರ್ಕಾರ ಗಮನ ಹರಿಸಿತು. ದೇಶಾದ್ಯಂತ ಸುಮಾರು 69,000 ಪೆಟ್ರೋಲ್ ಪಂಪ್‌ಗಳಲ್ಲಿ ಕನಿಷ್ಠ ಒಂದು ಚಾರ್ಜಿಂಗ್ ಕಿಯೋಸ್ಕ್ ಪಾಯಿಂಟ್ ಅಳವಡಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದರು.
ಇವಿಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ದರ ಶೇ 5ಕ್ಕೆ ಇಳಿಸುವಂತಹ ಉದ್ಯಮ ಸ್ನೇಹಿ ಹಲವು ನಿರ್ಧಾರ ತೆಗೆದುಕೊಳ್ಳಲಾಗಿದೆ. 2 ವೀಲರ್ ಬ್ಯಾಟರಿ ವೆಚ್ಚ ಮತ್ತು ವಾಹನಗಳ ವೆಚ್ಚದಿಂದ 3-ವೀಲರ್ಗೆ ಡಿಲಿಂಕ್ ಮಾಡುವ ಅವಕಾಶ ನೀಡಲಾಗಿದೆ. ದೆಹಲಿ ಮತ್ತು ತೆಲಂಗಾಣದಂತಹ ಕೆಲವು ರಾಜ್ಯಗಳು ರಸ್ತೆ ತೆರಿಗೆಯಿಂದ ಶೇ 100 ವಿನಾಯಿತಿ, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ನೋಂದಣಿ ಶುಲ್ಕದಂತಹ ಪ್ರೋತ್ಸಾಹಕಗಳನ್ನು ಘೋಷಿಸಿವೆ.