ಕರ್ನಾಟಕ

karnataka

ETV Bharat / business

ಚೀನಾ To ಚೆನ್ನೈ.. ಭಾರತದಲ್ಲಿ ಪ್ರಥಮ ಬಾರಿಗೆ ಐಫೋನ್​-11 ತಯಾರಿ! - ಚೀನಾ

ಭಾರತದಲ್ಲಿ ಜೋಡಣಾ ಘಟಕಗಳು ಕಡಿಮೆ ಇವೆ. ಲಾಕ್‌ಡೌನ್ ಜಾರಿಯಿಂದ ಜೋಡಣೆಗೊಂಡ ಐಫೋನ್ 11ರ ಉತ್ಪನ್ನಗಳು ಮಾರುಕಟ್ಟೆಗೆ ತಲುಪಲು ವಿಳಂಬವಾಯಿತು. ಈಗ ಪೂರೈಕೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಚಿಲ್ಲರೆ ಉದ್ಯಮಿಗಳು ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ..

iPhone
ಐಫೋನ್

By

Published : Jul 24, 2020, 5:03 PM IST

ನವದೆಹಲಿ: ಸರ್ಕಾರದ ಆತ್ಮನಿರ್ಭರ್ ಭಾರತದ ಉಪಕ್ರಮದಲ್ಲಿ ಮಹತ್ವದ ಗೆಲುವು ದಾಖಲಿಸಿದ್ದು, ಆ್ಯಪಲ್ ತನ್ನ ಪ್ರಮುಖ ಸಾಧನಗಳಲ್ಲಿ ಒಂದಾದ ಐಫೋನ್ 11 ಚೆನ್ನೈನ ಫಾಕ್ಸ್​ಕಾನ್ ಘಟಕದಲ್ಲಿ ತಯಾರಿಸಲು ಪ್ರಾರಂಭಿಸಿದೆ. ಭಾರತದಲ್ಲಿ ಆ್ಯಪಲ್ ತನ್ನ ಅಗ್ರ ಉತ್ಪನ್ನವೊಂದನ್ನು ಪ್ರಥಮ ಬಾರಿಗೆ ಭಾರತದಲ್ಲಿ ತಯಾರಿಸುತ್ತಿದೆ.

ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು ಶುಕ್ರವಾರ ಟ್ವಿಟರ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಮೇಕ್​ ಇಂಡಿಯಾಗೆ ಮಹತ್ವದ ಉತ್ತೇಜನ. ಆ್ಯಪಲ್ ಕಂಪನಿಯು ಭಾರತದಲ್ಲಿ ಐಫೋನ್ 11 ತಯಾರಿಸಲು ಪ್ರಾರಂಭಿಸಿದ್ದು, ದೇಶದಲ್ಲಿ ಮೊದಲ ಬಾರಿಗೆ ಉನ್ನತ ಶ್ರೇಣಿಯ ಮಾದರಿಯನ್ನು ಹೊರ ತಂದಿದೆ ಎಂದು ಬರೆದುಕೊಂಡಿದ್ದಾರೆ.

ಆ್ಯಪಲ್‌ ತನ್ನ, ಅತಿ ಹೆಚ್ಚು ಮಾರಾಟವಾದ ಐಫೋನ್ 11 ಭಾರತದಲ್ಲಿ ತಯಾರಿಸಲು ಪ್ರಾರಂಭಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ. ಇದು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಮಹತ್ವದ ಉತ್ತೇಜನ ನೀಡಿದಂತಾಗಿದೆ ಎಂದಿದ್ದಾರೆ.

ಭಾರತದಲ್ಲಿ ಜೋಡಣಾ ಘಟಕಗಳು ಕಡಿಮೆ ಇವೆ. ಲಾಕ್‌ಡೌನ್ ಜಾರಿಯಿಂದ ಜೋಡಣೆಗೊಂಡ ಐಫೋನ್ 11ರ ಉತ್ಪನ್ನಗಳು ಮಾರುಕಟ್ಟೆಗೆ ತಲುಪಲು ವಿಳಂಬವಾಯಿತು. ಈಗ ಪೂರೈಕೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಚಿಲ್ಲರೆ ಉದ್ಯಮಿಗಳು ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ. ದೇಶೀಯವಾಗಿ ಜೋಡಿಸಲಾದ ಐಫೋನ್ 11 ದರ ಮೊದಲಿನಂತೆಯೇ ಇದೆ. ಯಾವುದೇ ಬೆಲೆ ಕಡಿತವಿಲ್ಲ ಎಂದು ಹೇಳಿದರು.

ಪ್ರಸ್ತುತ, ಐಫೋನ್ ಎಕ್ಸ್‌ಆರ್ ಮತ್ತು ಐಫೋನ್ 11 ಫಾಕ್ಸ್​ಕಾನ್, ತನ್ನ ಚೆನ್ನೈ ಉತ್ಪಾದನಾ ಘಟಕದಲ್ಲಿ ಜೋಡಿಸುತ್ತಿದ್ದರೆ, ಐಫೋನ್ 7 ಬೆಂಗಳೂರಿನಲ್ಲಿನ ವಿಸ್ಟ್ರಾನ್​ ಘಟಕದಲ್ಲಿ ಜೋಡಿಸುತ್ತಿದೆ.

ABOUT THE AUTHOR

...view details