ಕರ್ನಾಟಕ

karnataka

ETV Bharat / business

ನೀವು ಸ್ಮಾರ್ಟ್​ ಟೆಕ್ನಿಷಿಯನ್​ಗಳಾ... ಹಾಗಿದ್ದರೇ ಆ್ಯಪಲ್​ನ ಈ 7 ಕೋಟಿ ರೂ. ಆಫರ್​ಗೆ ಟ್ರೈ ಮಾಡಿ - Apple Iphone Cyber Security

ಲಾಸ್ ವೆಗಾಸ್‌ನಲ್ಲಿ ನಡೆದ ವಾರ್ಷಿಕ ಬ್ಲ್ಯಾಕ್ ಹ್ಯಾಟ್ ಭದ್ರತಾ ಸಮಾವೇಶದಲ್ಲಿ, ಕಂಪನಿ ಎಲ್ಲ ಸಂಶೋಧಕರಿಗೆ, ಮ್ಯಾಕ್ ಸಾಫ್ಟ್‌ವೇರ್ ಮತ್ತು ಇತರ ಟಾರ್ಗೆಟ್​ದಾರರಿಗೆ ಅತ್ಯಂತ ಮಹತ್ವದ ಆವಿಷ್ಕಾರಗಳಾದ ಸೈಬರ್​ ಭದ್ರತೆಗಳಿಗೆ ಆಹ್ವಾನಿಸಿ ಇದಕ್ಕೆ ಸೂಕ್ತ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಆ್ಯಪಲ್​ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Aug 9, 2019, 5:36 PM IST

ಲಾಸ್ ವೆಗಸ್:ಐಫೋನ್‌ಗಳಲ್ಲಿನ ನ್ಯೂನತೆಗಳನ್ನು ಕಂಡುಹಿಡಿಯಲು ಆ್ಯಪಲ್ ಇಂಕ್ (ಎಎಪಿಎಲ್.ಒ) ಸೈಬರ್ ಭದ್ರತಾ ಸಂಶೋಧಕರಿಗೆ 1 ಮಿಲಿಯನ್ ಡಾಲರ್​ (₹ 7.04 ಕೋಟಿ) ಆಫರ್​ ನೀಡಿದೆ.

ಐಫೋನ್​ಗಳ ಬಳಕೆದಾರರ ಭದ್ರತೆಯ ಬಗ್ಗೆ ಸರ್ಕಾರಗಳು ತೋರುತ್ತಿರುವ ಕಾಳಜಿಯ ಸಂದರ್ಭದಲ್ಲಿ ಹ್ಯಾಕರ್‌ಗಳ ವಿರುದ್ಧ ಭದ್ರತಾ ಸಂಶೋಧನೆಗೆ ಕಂಪನಿ ನೀಡುತ್ತಿರುವ ಅತಿದೊಡ್ಡ ಬಹುಮಾನ ಇದಾಗಿದೆ.

ಆ್ಯಪಲ್ ಈ ಹಿಂದೆಯೂ ತನ್ನ ಫೋನ್‌ಗಳ ಮತ್ತು ಕ್ಲೌಡ್ ಬ್ಯಾಕಪ್‌ಗಳಲ್ಲಿನ ನ್ಯೂನತೆಗಳನ್ನು ಪತ್ತೆ ಹಚ್ಚಲು ಭದ್ರತಾ ಸಂಶೋಧಕರನ್ನು ಆಹ್ವಾನಿಸಿತ್ತು. ಆದರೆ, ಇದರಲ್ಲಿ ಫಲಕಾರಿಯಾದವರು ಕೆಲವರು ಮಾತ್ರ ಆಗಿದ್ದಾರೆ ಎಂದು ಹೇಳಿದೆ.

ಗುರುವಾರ ಲಾಸ್ ವೆಗಾಸ್‌ನಲ್ಲಿ ನಡೆದ ವಾರ್ಷಿಕ ಬ್ಲ್ಯಾಕ್ ಹ್ಯಾಟ್ ಭದ್ರತಾ ಸಮಾವೇಶದಲ್ಲಿ, ಕಂಪನಿಯ ಎಲ್ಲ ಸಂಶೋಧಕರಿಗೆ, ಮ್ಯಾಕ್ ಸಾಫ್ಟ್‌ವೇರ್ ಮತ್ತು ಇತರ ಟಾರ್ಗೆಟ್​ದಾರರಿಗೆ ಅತ್ಯಂತ ಮಹತ್ವದ ಆವಿಷ್ಕಾರಗಳಾದ ಸೈಬರ್​ ಭದ್ರತೆಗಳಿಗೆ ಆಹ್ವಾನಿಸಿ ಇದಕ್ಕೆ ಸೂಕ್ತ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.

ಐಫೋನ್​ ಬಳಕೆದಾರರಿಗೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನ್ಯೂನತೆಗಳನ್ನು ಪತ್ತೆ ಹಚ್ಚಿದರೆ 1 ಮಿಲಿಯನ್ ಡಾಲರ್​ (₹ 7.04 ಕೋಟಿ) ಬಹುಮಾನ ನೀಡಲಾಗುತ್ತದೆ. ಸಾಫ್ಟ್‌ವೇರ್ ನವೀಕರಣಗಳೊಂದಿಗೆ ಸರಿಪಡಿಸಬಹುದಾದ ದೋಷಗಳ ಸ್ನೇಹಪರವಾದ ವರದಿಗಳಿಗೆ 2 ಲಕ್ಷ ಡಾಲರ್​ (1.41 ಕೋಟಿ ರೂ.) ಒದಗಿಸಲಾಗುತ್ತದೆ. ಆದರೆ, ಇವು ಅಪರಾಧ ಮುಕ್ತವಾಗಿರಬೇಕು ಎಂದು ತಿಳಿಸಿದೆ.

ABOUT THE AUTHOR

...view details