ಸ್ಯಾನ್ಫ್ರಾನ್ಸಿಸ್ಕೋ: 1.84 ಟ್ರಿಲಿಯನ್ ಡಾಲರ್ ಮೂಲಕ ವಿಶ್ವದ ಅತ್ಯಮೂಲ್ಯ ಕಂಪನಿಯಾದ ಆ್ಯಪಲ್, ಇದರ ಸಿಇಒ ಟಿಮ್ ಕುಕ್ ಪ್ರಥಮ ಬಾರಿಗೆ ಶತಕೋಟ್ಯಧಿಪತಿಗಳ ಸಾಲಿಗೆ ಸೇರ್ಪಡೆ ಆಗಿದ್ದಾರೆ.
ಕುಕ್ ಅವರ ನಿವ್ವಳ ಸಂಪತ್ತು 1 ಬಿಲಿಯನ್ ಡಾಲರ್ ತಲುಪಿದ್ದು, ಈ ಮೂಲಕ ಶತಕೋಟ್ಯಧಿಪತಿಗಳ ಸಾಲಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬ್ಲೂಮ್ಬರ್ಗ್ ತನ್ನ ಬಿಲಿಯೇನರ್ ವರದಿಯಲ್ಲಿ ಹೇಳಿದೆ.
ಜಾಗತಿಕ ಕುಬೇರರ ಸಾಲಿನಲ್ಲಿ ಅಮೆಜಾನ್ ಕಂಪನಿ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಝೊಸ್ 187 ಬಿಲಿಯನ್ ಡಾಲರ್ ಸಂಪತ್ತಿನಿಂದ ಅಗ್ರ ಸ್ಥಾನದಲ್ಲಿದ್ದಾರೆ. ಇವರ ಬಳಿಕ ಮೈಕ್ರೋಸಾಫ್ಟ್ನ ಮಾಜಿ ಸಿಇಒ ಬಿಲ್ ಗೇಟ್ಸ್ 121 ಬಿಲಿಯನ್ ಡಾಲರ್ ಮತ್ತು ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ 102 ಬಿಲಿಯನ್ ಡಾಲರ್ನಿಂದ ನಂತರದ ಸ್ಥಾನದಲ್ಲಿ ಇದ್ದಾರೆ.
ಟಿಮ್ ಕುಕ್ ನೇರವಾಗಿ 8,47,969 ಷೇರುಗಳನ್ನು ಹೊಂದಿದ್ದಾರೆ. ಕಳೆದ ವರ್ಷ ವೇತನ ಪಾವತಿಯಡಿ 125 ಮಿಲಿಯನ್ ಡಾಲರ್ ಜೇಬಿಗೆ ಇಳಿಸಿಕೊಂಡಿದ್ದಾರೆ. ಆ್ಯಪಲ್ 2 ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.