ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಲ್ ಹಾಗೂ ಕೌರಿ ನಡುವೆ ಪ್ರಗತಿಯ ಹಂತದಲ್ಲಿರುವ ಚೆನಾಬ್ ರೈಲ್ವೆ ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ನಡೆಯುತ್ತಿರುವ ಎಂಜಿನಿಯರ್ ಕೌಶಲ್ಯವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.
ಇಲ್ಲಿನ ಚೆನಾಬ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಕೈಗೊಂಡ ಪ್ರಯತ್ನವನ್ನು ಆನಂದ್ ಮಹೀಂದ್ರಾ ಪ್ರಶಂಸಿಸಿದ್ದು, ಸೇತುವೆಯ ಕಮಾನಿನ ಕೆಳಭಾಗದ ನಿರ್ಮಾಣದ ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಇಂದಿನ ಮಕ್ಕಳು ಇಂತಹ ಎಂಜಿನಿಯರ್‌ಗಳ ಕಥೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಈ ಸೇತುವೆಯು 120 ವರ್ಷಗಳ ಜೀವಿತಾವಧಿ ಹೊಂದಲಿದೆ. ಎರಡೂ ತುದಿಗಳನ್ನು ಹೊರತುಪಡಿಸಿ ಯಾವುದೇ ಆಧಾರವನ್ನು ಸೇತುವೆ ಹೊಂದಿಲ್ಲ ಎಂದು ಹೇಳಲಾಗುತ್ತದೆ. ಮಹೀಂದ್ರಾ ಅವರು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಹಂಚಿಕೊಂಡ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ.