ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಪರಿಸ್ಥಿತಿ ತುಂಬಾ ಸವಾಲಿನದ್ದಾಗಿದೆ. ಉದ್ಯೋಗಿಗಳಿಗೆ ವೇತನರಹಿತ ರಜಾ (ಎಲ್‌ಡಬ್ಲ್ಯೂಪಿ) ಯೋಜನೆ ಅನುಷ್ಠಾನವು ಸಂಸ್ಥೆಗೆ ಮತ್ತು ನಿರ್ವಹಣೆಗೆ ವಿನ್-ವಿನ್ ಸ್ಥಿತಿಯಂತಿದೆ ಎಂದು ಏರ್ ಇಂಡಿಯಾ ಹೇಳಿದೆ.
ಮುಂದಿನ ಐದು ವರ್ಷಗಳ ತನಕ ವೇತನ ಇಲ್ಲದೆ ಕಡ್ಡಾಯ ರಜೆ ಮೇಲೆ ಕಳುಹಿಸುವ ದಕ್ಷತೆ, ಆರೋಗ್ಯದಂತಹ ಇತರೆ ಅಂಶಗಳ ಆಧಾರದ ಮೇಲೆ ನೌಕರರನ್ನು ಗುರುತಿಸುವ ಪ್ರಕ್ರಿಯೆಗೆ ಏರ್ ಇಂಡಿಯಾ ಆರಂಭಿಸಿದೆ ಎಂದು ಆದೇಶದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ಎಲ್ಡಬ್ಲ್ಯುಪಿಯಲ್ಲಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷತೆ, ಆರೋಗ್ಯ ಮತ್ತು ಅನಾರೋಗ್ಯದ ಪರಿಣಾಮವಾಗಿ ಅಥವಾ ಹಿಂದೆ ಮತ್ತು ಪುನರಾವರ್ತನೆಯ ಪರಿಣಾಮವಾಗಿ ನೌಕರನು ಕರ್ತವ್ಯಕ್ಕೆ ಲಭ್ಯವಿಲ್ಲದ ವಿವಿಧ ಅಂಶಗಳನ್ನು ಆಧರಿಸಿ ನೌಕರರನ್ನು ಗುರುತಿಸುವಂತೆ ವಿಮಾನಯಾನ ಸಂಸ್ಥೆ ತನ್ನ ಇಲಾಖಾ ಮುಖ್ಯಸ್ಥರು ಮತ್ತು ಪ್ರಾದೇಶಿಕ ನಿರ್ದೇಶಕರಿಗೆ ಮಂಗಳವಾರ ಆಂತರಿಕ ಆದೇಶ ಹೊರಡಿಸಿದೆ. ಅವರೆಲ್ಲರನ್ನೂ ಐದು ವರ್ಷಗಳವರೆಗೆ ಕಡ್ಡಾಯ ಎಲ್‌ಡಬ್ಲ್ಯುಪಿಗೆ ಕಳುಹಿಸಲಾಗುವುದು ಎಂದು ಹೇಳಿದೆ.
ಎಲ್‌ಡಬ್ಲ್ಯುಪಿ ಯೋಜನೆಯು ನಿರ್ವಹಣೆ ಮತ್ತು ಉದ್ಯೋಗಿಗಳಿಗೆ ವಿನ್-ವಿನ್ ಪರಿಸ್ಥಿತಿಯಾಗಿದೆ. ಇದು ಉದ್ಯೋಗಿಗಳಿಗೆ ನಮ್ಯತೆ ಒದಗಿಸುತ್ತದೆ. ಏಕಕಾಲದಲ್ಲಿ ಕಂಪನಿಯ ವೇತನ ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಈ ಯೋಜನೆಯಡಿ ಆರು ತಿಂಗಳ ಅಥವಾ ಎರಡು ವರ್ಷ (ಐದು ವರ್ಷಗಳವರೆಗೆ ವಿಸ್ತರಿಸಬಹುದಾದ) ಅವಧಿಗೆ ನೌಕರರು ಕಡ್ಡಾಯವಾಗಿ ರಜೆ ಹೋಗಬೇಕೆಂದು ಆದೇಶಿಸಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.