ಕರ್ನಾಟಕ

karnataka

ETV Bharat / business

ಲಾಯರ್​ಗೆ ದುಡ್ಡು ಕೊಡಲು ನನ್ನ ಬಳಿ ಹಣವಿಲ್ಲ: ಕೋರ್ಟ್ ಮುಂದೆ ವಿಜಯ್​ ಮಲ್ಯ ಅಳಲು! - ವಿಜಯ್ ಮಲ್ಯ ಹಸ್ತಾಂತರ

ಭಾರತದಲ್ಲಿ ನನ್ನ ವಿರುದ್ಧ ಹಲವು ದಿವಾಳಿ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ಎದುರಿಸುತ್ತಿದ್ದೇನೆ. ನನ್ನ ಎಲ್ಲಾ ಆಸ್ತಿಯನ್ನು ಕೋರ್ಟ್​ಗಳು ಮುಟ್ಟುಗೋಲು ಹಾಕಿಕೊಂಡಿವೆ. ಇದರಿಂದ ನನ್ನ ಬಳಿ ಹಣವೇ ಇಲ್ಲ. ಹೀಗಾಗಿ, ಕೋರ್ಟ್ ನಿಧಿಯಿಂದ ಹಣ ಬಿಡುಗಡೆ ಮಾಡಬೇಕು ಎಂದು ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದಾರೆ.

Vijay Mallya
Vijay Mallya

By

Published : May 26, 2021, 5:28 PM IST

ಲಂಡನ್:ಭಾರತದಲ್ಲಿನ ನ್ಯಾಯಾಲದ ವಿಚಾರಣೆಯಲ್ಲಿ ನನ್ನ ಪರವಾಗಿ ವಾದಿಸುತ್ತಿರುವ ವಕೀಲರ ಶುಲ್ಕ ಕಟ್ಟಲು ಕೋರ್ಟ್ ನಿಧಿ ಕಚೇರಿಯಿಂದ ಹಣ ನೀಡುವಂತೆ ಪರಾರಿ ಆಗಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ಲಂಡನ್ ಕೋರ್ಟ್ ಮೊರೆ ಹೋಗಿದ್ದಾರೆ.

ಭಾರತದಲ್ಲಿ ನನ್ನ ವಿರುದ್ಧ ಹಲವು ದಿವಾಳಿ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ಎದುರಿಸುತ್ತಿದ್ದೇನೆ. ನನ್ನ ಎಲ್ಲ ಆಸ್ತಿಯನ್ನು ಕೋರ್ಟ್​ಗಳು ಮುಟ್ಟುಗೋಲು ಹಾಕಿಕೊಂಡಿವೆ. ಇದರಿಂದ ನನ್ನ ಬಳಿ ಹಣವೇ ಇಲ್ಲ. ಕೋರ್ಟ್ ನಿಧಿಯಿಂದ ಹಣ ಬಿಡುಗಡೆ ಮಾಡಬೇಕು ಎಂದು ಮಲ್ಯ ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಖಜಾನೆ ಭರ್ತಿಗೆ ಕ್ಯಾಸಿನೊ, ರೇಸ್​ ಕೋರ್ಸ್​, ಲಾಟರಿಯತ್ತ ದೃಷ್ಟಿ ನೆಟ್ಟ ಕೇಂದ್ರ

ಲಂಡನ್‌ನಲ್ಲಿ ಇರುವ ನ್ಯಾಯಾಲಯದ ನಿಧಿ ಕಚೇರಿಯಿಂದ 7,58,000 ಯೂರೋ (7.8 ಕೋಟಿ) ಅನ್ನು ಭಾರತದಲ್ಲಿನ ತಮ್ಮ ವಕೀಲರಿಗೆ ಶುಲ್ಕ ಪಾವತಿಸಲು ಅರ್ಜಿ ಸಲ್ಲಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಡೆಪ್ಯುಟಿ ಐಸಿಸಿ ನ್ಯಾಯಾಧೀಶ ಬರ್ನೆಟ್ ನೀಡಿದ್ದ ತೀರ್ಪಿನ ವಿರುದ್ಧ, ಮಂಗಳವಾರ ಹೈಕೋರ್ಟ್‌ನ ಚಾನ್ಸರಿ ಮೇಲ್ಮನವಿ ವಿಭಾಗದಲ್ಲಿ ಮೇಲ್ಮನವಿಯಾಗಿ ಅರ್ಜಿ ಸಲ್ಲಿಸಿದ್ದಾರೆ.

ABOUT THE AUTHOR

...view details