ಲಂಡನ್:ಹಸಿರು ಮತ್ತು ಸುಸ್ಥಿರ ಜಾಗತಿಕ ಆರ್ಥಿಕ ಚೇತರಿಕೆಗಾಗಿ ಒಗ್ಗೂಡಿ ಶ್ರಮಿಸುವುದನ್ನು ಮುಂದುವರಿಸಲು ಮತ್ತು ಹವಾಮಾನ ಬದಲಾವಣೆ ನಿಭಾಯಿಸಲು ಆರ್ಥಿಕ ಮತ್ತು ಹಣಕಾಸು ನೀತಿಯಲ್ಲಿ ಆದ್ಯತೆ ನೀಡುವುದನ್ನು ಖಚಿತಪಡಿಸಬೇಕು ಎಂದು ಜಿ -7 ಹಣಕಾಸು ಮಂತ್ರಿಗಳು ಜಿ -7 ಹಣಕಾಸು ಮಂತ್ರಿಗಳಿಗೆ ಬ್ರಿಟನ್ ವಿತ್ತ ಸಚಿವ ರಿಷಿ ಸುನಕ್ ಕೋರಿದ್ದಾರೆ.
ಜಿ -7 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಜತೆ ವರ್ಚುಯಲ್ ಸಭೆ ನಡೆಸಿ ಮಾತನಾಡಿದ ಸುನಾಕ್, ಜಾಗತಿಕ ಹಣಕಾಸು ಮಾರುಕಟ್ಟೆಗಳು ನಿವ್ವಳ ಶೂನ್ಯಕ್ಕೆ ಪರಿವರ್ತನೆಗೊಳ್ಳುವಲ್ಲಿ ಸದಸ್ಯ ರಾಷ್ಟ್ರಗಳ ಪಾತ್ರ ಮಹತ್ವದಾಗಿದೆ. ಹವಾಮಾನ - ಸಂಬಂಧಿತ ಹಣಕಾಸು ಬಹಿರಂಗಪಡಿಸುವಿಕೆ ಹಾಗೂ ಅಂತಾರಾಷ್ಟ್ರೀಯ ಸುಸ್ಥಿರತೆ - ಸಂಬಂಧಿತ ಹಣಕಾಸು ವರದಿ ಮಾನದಂಡಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಜೂನ್ 4-5ರಂದು ಲಂಡನ್‌ನಲ್ಲಿ ನಡೆಯಲಿರುವ ಜಿ-7 ಹಣಕಾಸು ಮಂತ್ರಿಗಳ ಸಭೆಯ ಪೂರ್ವಭಾವಿಯಾಗಿ ಶುಕ್ರವಾರ ವರ್ಚುಯಲ್ ಸಭೆ ಆಯೋಜಿಸಲಾಯಿತು.