ನವದೆಹಲಿ: ಸಾಂಕ್ರಾಮಿಕದ ಸಮಯದಲ್ಲಿ ಜನರನ್ನು ಸುರಕ್ಷಿತವಾಗಿಡಲು ಒನ್‌ಪ್ಲಸ್ ಇಂಡಿಯಾ ದೀಪಾವಳಿ ವೇಳೆ ವಿಶೇಷವಾದ ಲೆನ್ಸ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಲೆನ್ಸಸ್ ಬಗ್ಗೆ ಬಳಕೆದಾರರು ಉತ್ತಮವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಒನ್‌ಪ್ಲಸ್ ಇಂಡಿಯಾದ ಈ ಲೆನ್ಸನ್ಗೆ 80 ದಶಲಕ್ಷಕ್ಕೂ ಹೆಚ್ಚು ಜನ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತದಲ್ಲಿ 14 ದಶಲಕ್ಷಕ್ಕೂ ಹೆಚ್ಚು ಸ್ನ್ಯಾಪ್‌ಚಾಟರ್‌ಗಳನ್ನು ಹೊಂದಿದೆ. ಒಟ್ಟಾರೆಯಾಗಿ ಈ ಅಭಿಯಾನವು ಅತ್ಯಂತ ಯಶಸ್ವಿಯಾಗಿದ್ದು, ಜಾಹೀರಾತು ಜಾಗೃತಿಯಲ್ಲಿ ಏಳು ಅಂಕ ಮತ್ತು ಸಂದೇಶ ಜಾಗೃತಿಯಲ್ಲಿ 9 ಪಾಯಿಂಟ್ನನ್ನು ಪಡೆದಿದೆ ಎಂದು ಸ್ನ್ಯಾಪ್ ಸಿಇಒ ಸ್ಪೀಗೆಲ್ ಹೇಳಿದ್ದಾರೆ.
ಸ್ನ್ಯಾಪ್‌ಚಾಟ್ ಕ್ಯಾಮೆರಾ ನಿತ್ಯ ಸರಾಸರಿ 5 ಬಿಲಿಯನ್ ಜನರಿಗೆ ಸಹಾಯ ಮಾಡುತ್ತಿದೆ. ಈ ಒಂದು ಕ್ಯಾಮೆರಾದ ಮೂಲಕ 150 ಪ್ರತಿಶತದಷ್ಟು ಜನರು ಮೆಸೇಜ್ ಮಾಡುವ ಬದಲು ವಿಡಿಯೋದೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂದು ಸ್ಪೀಗೆಲ್ ಹೇಳುತ್ತಾರೆ.